ಯಾದಗಿರಿಯಲ್ಲಿ ತಡರಾತ್ರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ; ಗೋವು ಸ್ಥಳಾಂತರ ವೇಳೆ ಮಹಿಳೆ ಕಣ್ಣೀರು!

By Ravi JanekalFirst Published Aug 21, 2023, 9:00 AM IST
Highlights

ವಾಹನ ಸಂಚಾರಕ್ಕೆ ಗೋವುಗಳು ಅಡ್ಡಿಯಾಗುತ್ತಿರುವ ಹಿನ್ನೆಲೆ ಯಾದಗಿರಿ ನಗರಸಭೆಯಿಂದ ತಡರಾತ್ರಿ ಪುಣ್ಯಕೋಟಿ ಆಪರೇಷನ್ ನಡೆಸುವ ಮೂಲಕ  15 ಕ್ಕೂ ಗೋವುಗಳನ್ನ ರಕ್ಷಣೆ ಮಾಡಿ ಗೋಶಾಲೆಗೆ ಸ್ಥಳಾಂತರ ಮಾಡಲಾಯಿತು.

ಯಾದಗಿರಿ (ಆ.21): ವಾಹನ ಸಂಚಾರಕ್ಕೆ ಗೋವುಗಳು ಅಡ್ಡಿಯಾಗುತ್ತಿರುವ ಹಿನ್ನೆಲೆ ಯಾದಗಿರಿ ನಗರಸಭೆಯಿಂದ ತಡರಾತ್ರಿ ಪುಣ್ಯಕೋಟಿ ಆಪರೇಷನ್ ನಡೆಸುವ ಮೂಲಕ  15 ಕ್ಕೂ ಗೋವುಗಳನ್ನ ರಕ್ಷಣೆ ಮಾಡಿ ಗೋಶಾಲೆಗೆ ಸ್ಥಳಾಂತರ ಮಾಡಲಾಯಿತು.

ನಗರಸಭೆ ಪೌರಾಯುಕ್ತ ಸಂಗಪ್ಪ ಉಫಾಸೆ ನೇತೃತ್ವದಲ್ಲಿ ನಡೆದ ಆಪರೇಷನ್ ಪುಣ್ಯಕೋಟಿ. ನಗರದ ಗಾಂಧಿ ವೃತ್ತ, ಎಪಿಎಂಸಿ, ಸುಭಾಷ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ರಸ್ತೆಯಲ್ಲಿ ಜಾನುವಾರುಗಳು ರಾತ್ರಿ ಕಳೆಯುತ್ತಿದ್ದವು ದನಗಳ ಹಾವಳಿಯಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿತ್ತು. ರಸ್ತೆಗಳ ಮೇಲೆ ಜಾನುವಾರುಗಳ ಅಡ್ಡಾದಿಡ್ಡಿ ಓಡಾಟದಿಂದ ಅಪಘಾತಗಳು ಹೆಚ್ಚಾಗಿದ್ದವು. ಸಾರ್ವಜನಿಕರ ಹಿತ ದೃಷ್ಟಿಯಿಂದ  ಜಾನುವಾರುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.

 

ಅಣ್ಣ-ತಮ್ಮಂದಿರ ಜಗಳದಲ್ಲಿ ಬೆಳಕಿಗೆ ಬಂತು ನಾಡ ಬಂದೂಕು ತಯಾರಿಸುವ ಭಯಾನಕ ಕೃತ್ಯ!

ಗೋವುಗಳ ಸ್ಥಳಾಂತರ ವೇಳೆ ಮಹಿಳೆ ಕಣ್ಣೀರು:

ನಗರಸಭೆ ಸಿಬ್ಬಂದಿ ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುವ ವೇಳೆ ಮಹಿಳೆಯೊಬ್ಬರು ತನ್ನ ಹಸುವನ್ನು ನಗರಸಭೆ ವಾಹನದಲ್ಲಿ ಹಾಕಿದ್ದಕ್ಕೆ ಕಣ್ಣೀರು ಹಾಕಿದ ಘಟನೆ ನಡೆಯಿತು. 

'ನಮ್ಮ ಆಕಳನ್ನ ಲಾರಿಯಲ್ಲಿ ಹಾಕಿಕೊಂಡು ಹೋದ್ರೆ ಹೇಗೆ? ಪುಣ್ಯ ಬರ್ತದೆ ನಮ್ಮ ಆಕಳನ್ನು ಬಿಟ್ಟುಬಿಡಿ. ನಾವು ಆಕಳುಗಳನ್ನು ನಂಬಿ ಜೀವನ ಮಾಡ್ತಿದ್ದೇವೆ ಎಂದು ಮಹಿಳೆ ಕಣ್ಣೀರು ಹಾಕುತ್ತಲೇ ನಗರಸಭೆ ವಾಹನ ಹತ್ತಿ ಕೆಲ ಹೊತ್ತು ಮಹಿಳೆ ಅತ್ತು ಬೇಡಿಕೊಂಡಳು. ಈ ಹಿಂದೆ ಜಾನುವಾರುಗಳನ್ನು ರಸ್ತೆ ಮೇಲೆ ಬಿಡದಂತೆ ಸೂಚನೆ ನೀಡಿದ್ದ ನಗರಸಭೆ. ಆದರೆ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ ಹೀಗಾಗಿ ಪುಣ್ಯಕೋಟಿ ಹೆಸರಿನಲ್ಲಿ ಆಪರೇಷನ್ ಮಾಡಿದ ನಗರಸಭೆ ಅಧಿಕಾರಿಗಳು.

ಯಾದಗಿರಿ: ಬಸವಸಾಗರ ಜಲಾಶಯ ಭರ್ತಿ, ಸಚಿವ ದರ್ಶನಾಪುರ್‌ ಬಾಗಿನ ಅರ್ಪಣೆ

click me!