
ಮಂಗಳೂರು (ಫೆ.20): ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀರಾಮನ ಅವಹೇಳನ ಮಾಡಿದ್ದಾಳೆಂಬ ಆಡಿಯೋವೊಂದರ ಮೂಲಕ ಮೊದಲಿಗೆ ಸಂಸ್ಥೆಯ ವಿರುದ್ಧ ಧ್ವನಿಯೆತ್ತಿದ್ದ ಪೋಷಕಿಗೆ ಇದೀಗ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಕುಟುಂಬದ ಫೋಟೊ, ಮೊಬೈಲ್ ನಂಬರ್ ಹಾಕಿ ಅವಾಚ್ಯವಾಗಿ ನಿಂದಿಸಿ ಕರೆ ಮಾಡುತ್ತಿರುವ ಆಗುಂತಕರು. ಈ ಬಗ್ಗೆ ಮಹಿಳೆ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶ್ರೀರಾಮ ನಿಂದನೆ ವಿರುದ್ದ ಧ್ವನಿಯೆತ್ತಿದ್ದೇ ತಪ್ಪಾಯ್ತಾ?
ಮಂಗಳೂರಿನ ಗರೋಡಿ ನಿವಾಸಿಯಾಗಿರುವ ಕವಿತಾ. ಜೆರೋಸಾ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರೋ ಕವಿತಾರ ಪುತ್ರಿ. ಶಿಕ್ಷಕಿ ಶ್ರೀರಾಮನ ಅವಹೇಳನ ಮಾಡಿದ್ದಾಳೆಂಬ ಏಳನೇ ತರಗತಿಯ ಮಗಳ ಹೇಳಿಕೆ ಆಧರಿಸಿ ಕ್ರಮಕ್ಕೆ ಆಗ್ರಹಿಸಿದ್ದ ಕವಿತಾ. ಆಡಿಯೋ ಮೂಲಕ ಎಲ್ಲ ಪೋಷಕರಿಗೆ ವಾಟ್ಸಪ್ ಸಂದೇಶ ಕಳಿಸಿ ಪ್ರತಿಭಟನೆ ಕರೆ ನೀಡಿದ್ದ ಪೋಷಕಿ. ಮಗಳ ಪರವಾಗಿ ಸಿಸ್ಟರ್ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ಪೋಷಕಿ ಕವಿತಾಗೆ ಇದೀಗ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ದುಬೈ, ಕತಾರ್, ಸೌದಿ ಸೇರಿ ಹಲವೆಡೆಯಿಂದ ಬೆದರಿಕೆ ಕರೆ ಮಾಡುತ್ತಿರುವ ದುಷ್ಕರ್ಮಿಗಳು.
ಜೆರೋಸಾ ಶಾಲೆ ಘಟನೆ ತನಿಖೆಗೆ ಐಎಎಸ್ ಅಧಿಕಾರಿ ನೇಮಕ: ಸಚಿವ ದಿನೇಶ್ ಗುಂಡೂರಾವ್
ವಾಟ್ಸಪ್‌ಗೆ ಕೆಟ್ಟದಾಗಿ ಬೈದು ಬೆದರಿಕೆ:
ಜೆರೋಸಾ ಶಿಕ್ಷಕಿ ವಿರುದ್ಧ ವಾಯ್ಸ್ ಮೆಸೇಜ್ ಹರಿಬಿಟ್ಟ ಮಹಿಳೆ ಇವರೇ ಅಂತ ಕವಿತಾರ ನಂಬರ್ ಹರಿಬಿಟ್ಟ ಕಿಡಿಗೇಡಿಗಳು. ಆದರೆ ವೈರಲ್ ಆಗಿರೋ ಆಡಿಯೋ ಕವಿತಾರದ್ದಲ್ಲದಿದ್ದರೂ ನಿರಂತರ ಬೆದರಿಕೆಗಳು ಬರುತ್ತಿವೆ. ಕವಿತಾ ನಂಬರ್ ಗೆ ವಾಟ್ಸಪ್ ಮಾಡಿರುವ ದುಷ್ಕರ್ಮಿಗಳು 'ಆಡಿಯೋ ವೈರಲ್ ಮಾಡ್ತಿಯಾ' ಅಂತಾ ಅವಾಚ್ಯವಾಗಿ ನಿಂದಿಸಿ ಹಲವು ವಿದೇಶಿ ನಂಬರ್‌ಗಳಿಂದ ಮಹಿಳೆಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಪ್ರಕರಣದ ಬಳಿಕ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕವಿತಾರ ಮೊಬೈಲ್ ನಂಬರ್ ಶೇರ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕಂಕನಾಡಿ ಪೊಲೀಸರಿಗೆ ಆಡಿಯೋ, ಸ್ಕ್ರೀನ್ ಶಾಟ್ ಗಳ ಸಹಿತ ದೂರು ನೀಡಿರುವ ಮಹಿಳೆ. ದೂರು ದಾಖಲಿಸಿಕೊಂಡ ಪೊಲೀಸರಿಂದ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಶಾಲಾ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಪ್ರಕರಣ: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ