
ಬೆಂಗಳೂರು (ನ.26): ಸರ್ಕಾರದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಯತ್ನಿಸ್ತಿದ್ದಾರಾ ಸಚಿವ ಶ್ರೀರಾಮುಲು ಹೀಗೊಂದು ಪ್ರಶ್ನೆ ಮೂಡಿದೆ.
ಸಚಿವ ಸ್ಥಾನ ಉಳಿಸಿಕೊಳ್ಳಲು ಶ್ರೀ ರಾಮುಲು ದಲಿತ ಕಾರ್ಡ್ ಬಳಕೆ ಮಾಡಲು ಮುಂದಾಗಿದ್ದಾರಾ ಎನ್ನಲಾಗುತ್ತಿದೆ. ದಲಿತ ಸಮೂದಾಯದ ನಾಯಕ ಅಂತ ಬಿಂಬಿಸಿಕೊಳ್ಳಲು ರಾಮುಲು ಪ್ಲಾನ್ ಮಾಡಿ, ಅಂತಹದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಸಮಾಜಕಲ್ಯಾಣ ಸಚಿವ ರಾಮುಲು ಎನ್ನಲಾಗಿದೆ.
ಬೆಂಗಳೂರಿನಲ್ಲಿ ದಲಿತ ಮುಖಂಡರ ಸಭೆ ಕರೆದು ಚರ್ಚೆ ನಡೆಸಿರುವ ಸಚಿವ ಶ್ರೀರಾಮುಲು ಇಲಾಖೆಯ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಸಭೆ ಕರೆದು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಮಾಜಕಲ್ಯಾಣ ಇಲಾಖೆಯನ್ನು ಬಲಪಡಿಸಲು ದಲಿತ ನಾಯಕರ ಸಲಹೆ ಪಡೆದಿದ್ದು, ಜೊತೆಗೆ ನನ್ನ ಕೈ ಬಲಪಡಿಸಿ ಅಂತ ದಲಿತ ನಾಯಕರಿಗೆ ರಾಮುಲು ಹೇಳಿದ್ದಾರೆ.
ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಹೋರಾಟ ಮಾಡುತ್ತೇನೆ ಎಂದ ಸಚಿವ ...
ಸಂಪುಟ ಸರ್ಕಸ್ ವೇಳೆಯಲ್ಲಿ ಶ್ರೀರಾಮುಲು ಕರೆದ ದಲಿತ ನಾಯಕರ ಸಭೆ ಬಗ್ಗೆ ಕುತೂಹಲ ಮೂಡಿದ್ದು, ಸಭೆಯಲ್ಲಿ ದಲಿತ ಕಲ್ಯಾಣದ ಮಂತ್ರ ಪಠಣ ಮಾಡಿದ್ದಾರೆ. ಜೊತೆಗೆ ರಾಜಕೀಯವಾದ ಸಂದೇಶವನ್ನು ಸಹ ನೀಡುವುದನ್ನು ಮರೆತಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ - ನನ್ನೊಂದಿಗೆ ನೀವಿರಿ ಅಂತ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಬಹುತೇಕ ಎಲ್ಲಾ ದಲಿತ ನಾಯಕರು ಸಚಿವ ಶ್ರೀರಾಮುಲು ಅವರಿಗೆ ಬೆಂಬಲ ನೀಡಿದ್ದು, ಎಲ್ಲಾ ಹಂತದಲ್ಲೂ ನಿಮಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಅಭಯ ನೀಡಿದ್ದಾರೆ. ರಾಜಕೀಯವಾಗಿ ಪಕ್ಷದ ನಾಯಕರಿಗೆ ಸಂದೇಶ ಕೊಟ್ಟ ಸಮಾಜಕಲ್ಯಾಣ ಸಚಿವ ರಾಮುಲು ಸಚಿವ ಸಂಪುಟದಲ್ಲಿ ಪ್ರಭಾವಿಯಾಗಿ ನೆಲೆಯೂರಲು ಜಾತಿಯ ಕಾರ್ಡ್ ಬಳಕೆಗೆ ಮುಂದಾದ್ರಾ ಎನ್ನುವ ಪ್ರಶ್ನೆ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ