ಪ್ರಯಾಣಿಕರ ಗಮನಕ್ಕೆ: ದೀಪಾವಳಿ ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ

By Kannadaprabha News  |  First Published Oct 24, 2024, 1:27 PM IST

ಹುಬ್ಬಳ್ಳಿ-ಕೊಲ್ಲಂ, ಹುಬ್ಬಳ್ಳಿ- ಮುಜಾಫರ್‌ಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಿದ ನೈಋತ್ಯ ರೈಲ್ವೆ 


ಹುಬ್ಬಳ್ಳಿ(ಅ.24): ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ಹುಬ್ಬಳ್ಳಿ-ಕೊಲ್ಲಂ, ಹುಬ್ಬಳ್ಳಿ- ಮುಜಾಫರ್‌ಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. 

ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು ಅ. 26ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಮಧ್ಯಾಹ್ನ 3.15ಕ್ಕೆ ಹೊರಟು ಮರುದಿನ ಸಂಜೆ 5.10ಕ್ಕೆ ಕೊಲ್ಲಂ ನಿಲ್ದಾಣ ತಲುಪಲಿದೆ. ರೈಲು ಸಂಖ್ಯೆ 07314 ಅ. 27ರಂದು ಕೊಲ್ಲಂನಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ರಾತ್ರಿ 8.45ಕ್ಕೆ ಹುಬ್ಬಳ್ಳಿ ತಲುಪಲಿದೆ. 

Tap to resize

Latest Videos

ರೈಲ್ವೇ ನಿಲ್ದಾಣದಲ್ಲಿ ಟರ್ಮಿನಲ್‌ಗೂ, ಜಂಕ್ಷನ್‌ಗೂ ಏನು ವ್ಯತ್ಯಾಸ? ಕಂಟೋನ್ಮೆಂಟ್ ಅಂತ ಯಾಕೆ ಕರೀತಾರೆ?

ಈ ರೈಲು ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಕರೂರ್, ದಿಂಡಿಗಲ್, ಮಧುರೈ, ವಿರುಡುನಗರ, ಶಿವಕಾಶಿ, ರಾಜಪಾಳ್ಯಮ್, ಶ್ರೀವಿಲ್ಲಿ ಪುತ್ತೂರು, ಕಡಯನಲ್ಲೂರು, ತೆಂಕಾಶಿ, ಸೆಂಗೋಟ್ಟೆ, ತೆನಮಲೈ, ಪುನಲೂರು, ಆವನೀಶ್ವರಂ, ಕೊಟ್ಟಾರಕರ ಮತ್ತು ಕುಂದರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. 

ರೈಲು ಸಂಖ್ಯೆ 07315 ಶ್ರೀಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ-ಮುಜಾಫರ್‌ಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ನ. 4ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಸಂಜೆ 5.20ಕ್ಕೆ ಹೊರಟು, ನ. 6ರಂದು ಸಂಜೆ 4 ಗಂಟೆಗೆ ಮುಜಾಫರ್‌ಪುರ ನಿಲ್ದಾಣ ತಲುಪಲಿದೆ. ರೈಲು ಸಂಖ್ಯೆ 07316 ನ. 9ರಂದು ಮುಜಾಫರ್‌ಪುರ ನಿಲ್ದಾಣದಿಂದ ಮಧ್ಯಾಹ್ನ 1.15ಕ್ಕೆ ಹೊರಟು, ನ. 11ರಂದು ಬೆಳಗ್ಗೆ 10.30 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. 

ಭಾರತದ ಈ ಬ್ಯುಸಿ ರೈಲು ನಿಲ್ದಾಣದಲ್ಲಿ 1ನೇ ಪ್ಲಾಟ್‌ಫಾರಂ ಇಲ್ಲ

ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ಟಿ, ಸತ್ನಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಇಕಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ, ದಾನಾಪುರ, ಪಾಟಿಪುತ್ರ ಸೋನ್‌ಪುರ್‌ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. 

ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ, ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!