
ಬೆ.ಗಳೂರು[ಡಿ.08]: ಮುದ್ದಿನಿಂದ ಸಾಕಿದ ಮಗ ಕೆಟ್ಟ ಚಟ ಮೈಗೂಡಿಸಿಕೊಂಡಾಗ ತಾಯಿಯಾದವಳು ಬುದ್ಧಿವಾದ ಹೇಳಿದ್ದಾಳೆ. ಆದರೆ ಇದನ್ನು ಸಹಿಸದ ಮಗ ತನ್ನ ತಾಯಿಗೇ ಪೊರಕೆ ಹಿಡಿದು ಹಿಗ್ಗಾಮುಹಗ್ಗಾ ಥಳಿಸಿದ್ದಾನೆ.
19 ವರ್ಷದ ಜೀವನ್ ಎಂಬಾತ ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದ ಪಾಪಿ ಪುತ್ರ. ಬುದ್ದಿವಾದ ಹೇಳಿದ್ದೇ ಅಮ್ಮ ಮಾಡಿದ ದೊಡ್ಡ ತಪ್ಪು ಎಂಬಂತೆ 'ನನ್ ವಿಚಾರ ಮಾತಾಡಿದ್ರೆ ಇದೇ ತರಾ ಟ್ರೀಟ್ಮೆಂಟ್' ಕೊಡ್ತೀನಿ ಎಂದು ಅಂತ ಅಮ್ಮನಿಗೇ ಧಮಕಿ ಹಾಕಿದ್ದಾನೆ. ಜೀವನ್ ತನ್ನ ತಾಯಿ ಎದುರೇ ಸಿಗರೇಟ್ ಸೇದುವುದಲ್ಲದೇ, ಅಪ್ರಾಪ್ತೆಯೊಂದಿಗೆ ಪ್ರೇಮ ಸಂಬಂಧವನ್ನೂ ಹೊಂದಿದ್ದಾನೆ. ಇದೇ ವಿಚಾರವಾಗಿ ತಾಯಿ ಬುದ್ಧಿವಾದ ಹೇಳಿದ್ದು, ಇದನ್ನು ಸಹಿಸದೆ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ.
"
ಜೀವನ್ ಹುಚ್ಚಾಟಕ್ಕೆ ನೊಂದಿರುವ ತಾಯಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಮಗನಿಗೆ ಬುದ್ದಿವಾದ ಹೇಳುವಂತೆಯೂ ಕೇಳಿಕೊಂಡಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ