
ಬೆಂಗಳೂರು (ಜೂ. 21): ಬಹಳ ಕುತೂಹಲ ಮೂಡಿಸಿದ್ದ ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ರಾಹುಗ್ರಸ್ತ ಸೂರ್ಯ ಗ್ರಹಣ ಇದಾಗಿದ್ದು ಕರ್ನಾಟಕದಲ್ಲಿ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದೆ. ನವದೆಹಲಿ, ಅಭುಧಾಬಿ ಹಾಗೂ ರಾಮನಗರದಲ್ಲಿ ಗ್ರಹಣ ಹೇಗೆ ಗೋಚರಿಸಿದೆ ಎಂದು ಇಲ್ಲಿದೆ ನೋಡಿ..!
"
ಗ್ರಹಣ ಬ್ರಹ್ಮಾಂಡದ ಕೌತುಕ ಒಂದು ಕಡೆಯಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಬೆಂಗಳೂರು, ಮುಂಬೈ ಹಾಗೂ ನವದೆಹಲಿಯಲ್ಲಿ ಹೇಗೆ ಗೋಚರವಾಗಿದೆ ಎಂದು ಇಲ್ಲಿದೆ ನೋಡಿ..!
"
ಈ ವರ್ಷದ ಮೊದಲ ಸೂರ್ಯ ಗ್ರಹಣ ಇದಾಗಿದೆ. 18 ವರ್ಷಗಳ ಬಳಿಕ ಈ ಗ್ರಹಣ ಸಂಭವಿಸಿದೆ. ನಭೋಮಂಡಲದ ಕೌತುಕವನ್ನು ಕಣ್ತುಂಬಿಕೊಳ್ಳಬಹುದು. ಜೊತೆಗೆ ಗ್ರಹಣ ಕಾಲದಲ್ಲಿ ಆಚರಿಸಬೇಕಾದ ನಿಯಮಗಳ ಬಗ್ಗೆ ಜ್ಯೋತಿಷಿಗಳು ಮಾತನಾಡಿದ್ದಾರೆ.
"
ಗ್ರಹಣವನ್ನು ನಭೋಮಂಡಲದ ಕೌತುಕ ಎಂದು ವಿಜ್ಞಾನ ವಿಶ್ಲೇಷಿಸಿದರೆ, ಇದಕ್ಕೆ ಪೌರಾಣಿಕ ಮಹತ್ವವನ್ನು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಅವರವರು ಅವರವರಿಗೆ ಬೇಕಾದ ಹಾಗೆ ವ್ಯಾಖ್ಯಾನಿಸಬಹುದು. ಬೆಂಗಳೂರಿನ ನೆಹರು ತಾರಾಲಯದಿಂದ ಸೂರ್ಯ ಗ್ರಹಣವನ್ನು ನೋಡುವುದಾದರೆ ಹೀಗಿದೆ ನೋಡಿ..!
"
ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸೂರ್ಯ ಬೇರೆ ಬೇರೆ ರೀತಿ ಗೋಚರಿಸಿದ್ದಾನೆ. ಕೆಲವೆಡೆ ರಕ್ತವರ್ಣದಲ್ಲಿ ಕಾಣಿಸಿದರೆ ಇನ್ನು ಕೆಲವೆಡೆ ಪಾರ್ಶ್ವ ಮಾತ್ರ ಗೋಚರಿಸಿದ್ದಾನೆ. ಇದೊಂದು ಕೌತುಕವೇ ಸರಿ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ