ಕಾಂಗ್ರೆಸ್‌ ಪ್ರಚಾರ ವಾಹನದಿಂದ ಸಿದ್ದು ಫೋಟೋ ಮಾಯ!

Published : Jun 30, 2021, 07:40 AM ISTUpdated : Jun 30, 2021, 07:44 AM IST
ಕಾಂಗ್ರೆಸ್‌ ಪ್ರಚಾರ ವಾಹನದಿಂದ ಸಿದ್ದು ಫೋಟೋ ಮಾಯ!

ಸಾರಾಂಶ

* ಕಾಂಗ್ರೆಸ್‌ನಲ್ಲಿ ಮುಂದುವರೆದ ಡಿಕೆಶಿ, ಸಿದ್ದು ಬಣದ ಒಳಜಗಳ * ಕಾಂಗ್ರೆಸ್‌ ವಾಹನದಿಂದ ಸಿದ್ದು ಫೋಟೋ ಮಾಯ! * ಪ್ರಚಾರ ವಾಹನದಲ್ಲಿ ಸಿದ್ದು ಫೋಟೋಗೆ ಕೊಕ್‌ * ವಾಹನದಲ್ಲಿ ಡಿಕೆಶಿ, ರಾಹುಲ್‌ ಗಾಂಧಿ ಫೋಟೋ ಮುಂದಿನ ಮುಖ್ಯಮಂತ್ರಿ ಜಟಾಪಟಿ ಬೆನ್ನಲ್ಲೇ ದಿಢೀರ್‌ ಬೆಳವಣಿಗೆ

ಬೆಂಗಳೂರು(ಜೂ.30): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬಣಗಳ ನಡುವೆ ರಾಜಕೀಯ ಮುಂದುವರೆದಿದ್ದು, ರಾಜ್ಯ ಕಾಂಗ್ರೆಸ್‌ನ ಪ್ರಚಾರ ವಾಹನದಿಂದ ಸಿದ್ದರಾಮಯ್ಯ ಭಾವಚಿತ್ರ ಮಾಯವಾಗಿದೆ.

ಕಾಂಗ್ರೆಸ್‌ನ ಹಿರಿಯ ನಾಯಕರು ಪ್ರಚಾರ ನಡೆಸಲು ಖಾಯಂ ಆಗಿರುವ ವಾಹನದ ಮೇಲೆ ಈ ಮೊದಲು ಸಿದ್ದರಾಮಯ್ಯ, ರಾಹುಲ್‌ಗಾಂಧಿ, ಡಿ.ಕೆ. ಶಿವಕುಮಾರ್‌ ಅವರ ಫೋಟೋ ಇತ್ತು. ಮೇಲ್ಭಾಗದಲ್ಲಿ ಸೋನಿಯಾಗಾಂಧಿ ಅವರ ಫೋಟೋ ಅಂಟಿಸಲಾಗಿತ್ತು.

ಇದೀಗ ರಾಹುಲ್‌ಗಾಂಧಿ ಹಾಗೂ ಡಿ.ಕೆ. ಶಿವಕುಮಾರ್‌ ಫೋಟೋವಿನ ಜೊತೆಯಲ್ಲಿದ್ದ ಸಿದ್ದರಾಮಯ್ಯ ಫೋಟೋಗಳನ್ನು ಕಿತ್ತು ಹಾಕಲಾಗಿದೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ಸಿದ್ದರಾಮಯ್ಯ ವಿರೋಧಿ ಬಣವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮುಂದಿನ ಮುಖ್ಯಮಂತ್ರಿ ಹೇಳಿಕೆಯಿಂದ ಉಂಟಾಗಿದ್ದ ಗೊಂದಲಗಳ ನಡುವೆಯೇ ಸಿದ್ದರಾಮಯ್ಯ ಫೋಟೋ ಮಾಯವಾಗಿರುವುದು ಚರ್ಚೆಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ