
ಮಂಡ್ಯ (ಫೆ.19): ದೇಶದಲ್ಲಿ ಮೋದಿಗೆ ಆಡಳಿತಕ್ಕೆ ಸರಿಸಮನಾಗಿ ಪೈಪೋಟಿ ನೀಡಬಲ್ಲ ಮತ್ತೊಬ್ಬ ನಾಯಕರಿದ್ದರೆ ಅದು ಸಿದ್ದರಾಮಯ್ಯ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಇತಿಹಾಸದಲ್ಲಿ ಯಶಸ್ವಿಯಾಗಿ ಸಾರ್ವಜನಿಕ ಕಾರ್ಯಕ್ರಮ ಕೊಟ್ಟ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ. ನಮ್ಮ ಗ್ಯಾರಂಟಿಯನ್ನೇ ಅವರ ಗ್ಯಾರಂಟಿಯಾಗಿ ಪರಿವರ್ತನೆ ಮಾಡಲು ಮೋದಿ ಹೊರಟಿದ್ದಾರೆ.
ಗಂಡ ಇಲ್ಲ, ಮನೆ ಇಲ್ಲ, ಮಕ್ಕಳಿಲ್ಲ.. ನೋವು ತೋಡಿಕೊಂಡವರಿಗೆ 'ನಿಮ್ಮ ಜೊತೆ ಸರ್ಕಾರವಿದೆ' ಎಂದ ಡಿಕೆಶಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋದಿಗೆ ಆಡಳಿತದಲ್ಲಿ ಸರಿಸಮನಾಗಿ ಪೈಪೋಟಿ ಕೊಡಬಲ್ಲ ನಾಯಕರೆನಿಸಿದ್ದಾರೆ. ಹಲವು ರಾಜ್ಯಗಳು ಸಿದ್ದರಾಮಯ್ಯ ಆಡಳಿತ ಪ್ರಶಂಸೆ ಮಾಡಿವೆ. ರೈತರ ನೆಮ್ಮದಿ ಜೀವನಕ್ಕಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ಹಿನ್ನಡೆಯಾಗಿಲ್ಲ. ನೀರಾವರಿಗೆ ಬಜೆಟ್‌ನಲ್ಲಿ ಸಾಕಷ್ಟು ಯೋಜನೆ ಮೀಸಲಿಡಲಾಗಿದೆ ಎಂದರು.
ಸಾರ್ವಜನಿಕ ಬಜೆಟ್ ಧಿಕ್ಕರಿಸಿದ ಪಕ್ಷಗಳೆಂದರೆ ಬಿಜೆಪಿ ಮತ್ತು ಜೆಡಿಎಸ್. ಜನರ ಒಳಿತು ಅವರಿಗೆ ಬೇಕಿಲ್ಲ ನಮ್ಮನ್ನು ವಿರೋಧಿಸುವುದಷ್ಟೇ ಅವರ ಕೆಲಸ. ಜನರ ವಿಶ್ವಾಸ ಕಳೆದುಕೊಂಡು ಸರ್ಕಾರ ಕಳೆದುಕೊಂಡರು. ಸಿದ್ದರಾಮಯ್ಯ ಯಾವುದೇ ಕೊರತೆ ಇಲ್ಲದಂತೆ ಹಣಕಾಸು ನಿಯಂತ್ರಣ ಮೂಲಕ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ರೈತರಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಒದಗಿಸಿದ್ದಾರೆ.
ವಿಪಕ್ಷಗಳು ಸುಳ್ಳಿನ ಸಾಮ್ರಾಜ್ಯಪತಿಗಳು: ನರೇಂದ್ರಸ್ವಾಮಿವಿಪಕ್ಷಗಳು ಸುಳ್ಳಿನ ಸಾಮ್ರಾಜ್ಯಪತಿಗಳು. ಆಡಳಿತಕ್ಕೆ ಬಂದ ಏಳು ತಿಂಗಳಲ್ಲೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ದೇಶದ ಮೊದಲ ಸಿಎಂ ಸಿದ್ದರಾಮಯ್ಯ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿ ಬೀಗುತ್ತಿದೆ. ಆದರೆ, ಅದು ಸಾಧ್ಯವಿಲ್ಲ. ಮಂಡ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಮಂಡ್ಯಕ್ಕೆ ಹೊಸ ಸಕ್ಕರೆ ಕಾರ್ಖಾನೆ ಕೊಟ್ಟಿದ್ದಾರೆ. 5 ವರ್ಷದ ಆಡಳಿತದಲ್ಲಿ ಒಂದೇ ಒಂದು ಮನೆ ಘೋಷಣೆ ಮಾಡದ ಸರ್ಕಾರಗಳನ್ನು ನೋಡಿದ್ದೇವೆ. ಆದರೆ ನಮ್ಮ ಸರ್ಕಾರ ಪ್ರಥಮ ಬಜೆಟ್‌ನಲ್ಲಿ 3 ಲಕ್ಷ ಮನೆ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ವಿಶೇಷ ವಿಮಾನದಲ್ಲಿ ಡಿಕೆಶಿ, ಬಿಜೆಪಿ ಶಾಸಕ ಜಂಟಿ ಪ್ರಯಾಣ; ಕುತೂಹಲ ಕೆರಳಿಸಿದ ಸೋಮಶೇಖರ್ ನಡೆ!
ಸ್ವಾತಂತ್ರ್ಯ ನಂತರ ಯೋಜನೆಗಳ ಮೂಲಕ ದೇಶವನ್ನು ಮುನ್ನಡೆಸಿದ್ದು ಕಾಂಗ್ರೆಸ್. ಸುಳ್ಳು ಹೇಳಿ, ಹೆದರಿಸಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಮಳವಳ್ಳಿ ಕ್ಷೇತ್ರವನ್ನು ಸಿಎಂ ಸ್ವಂತ ಕ್ಷೇತ್ರದಂತೆ ನೋಡುತ್ತಿದ್ದಾರೆ. ಮನೆ, ಮನೆತನ, ಬದುಕು ಇಷ್ಟಕ್ಕೂ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದು ವರ್ಣಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ