ವಕೀಲರ ಸುರಕ್ಷತೆಗಾಗಿ ರಾಜ್ಯದ ಹಿರಿಯ ವಕೀಲರ ಸಮಿತಿ ರಚಿಸಿದ್ದ ವಕೀಲರ ಸುರಕ್ಷತಾ ಕಾಯಿದೆ ಕರಡು ಮಸೂದೆಯನ್ನು ಸೋಮವಾರದಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲೇ ಮಂಡಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರು (ಡಿ.17) : ವಕೀಲರ ಸುರಕ್ಷತೆಗಾಗಿ ರಾಜ್ಯದ ಹಿರಿಯ ವಕೀಲರ ಸಮಿತಿ ರಚಿಸಿದ್ದ ವಕೀಲರ ಸುರಕ್ಷತಾ ಕಾಯಿದೆ ಕರಡು ಮಸೂದೆಯನ್ನು ಸೋಮವಾರದಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲೇ ಮಂಡಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲೇ ಕರಡು ಮಸೂದೆಯನ್ನು ಮಂಡಿಸಬೇಕು. ನ್ಯಾಯವನ್ನು ಎತ್ತಿ ಹಿಡಿಯುವ ಪವಿತ್ರ ವೃತ್ತಿಯ ವಕೀಲರು ನಿರ್ಭೀತಿಯಿಂದ ಕಾರ್ಯ ನಿರ್ವಹಿಸುವ ವಾತಾವರಣ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದ್ದಾರೆ.
ವಕೀಲರು ಸಮಾಜ ವಿರೋಧಿ ಶಕ್ತಿಗಳಿಂದ ಹಲ್ಲೆ, ಬೆದರಿಕೆ ಮತ್ತು ಒತ್ತಡಗಳನ್ನು ಎದುರಿಸುತ್ತಿರುವ ಘಟನೆಗಳು ಸತತವಾಗಿ ನಡೆಯುತ್ತಿವೆ. ಹೀಗಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ವಕೀಲರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ವಕೀಲರ ಸುರಕ್ಷತಾ ಕಾಯಿದೆ ಕರಡು ಮಸೂದೆಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು.
ವಕೀಲರು ಲಾಭ ನಿರೀಕ್ಷಿಸದೇ ನೊಂದವರಿಗೆ ನ್ಯಾಯ ಕೊಡಿಸಲಿ: ನ್ಯಾ.ಕೃಷ್ಣಾ ದೀಕ್ಷಿತ್