
ಬೆಂಗಳೂರು (ಜ.23) ನಾನ್ ವೆಜ್ ಪ್ರಿಯರಿಗೆ ಇದೀಗ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಚಿಕನ್, ಕುರಿ, ಮೇಕೆ ಸೇರಿದಂತೆ ಮಾಂಸಗಳ ಬೆಲೆ ಏರಿಕೆಯಾಗಿದೆ. ಪೂರೈಕೆ ಕೊರತೆ, ಉತ್ಪಾದನೆ ಪ್ರಮಾಣ ಕುಸಿತದಿಂದ ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ಭಾರಿ ಏರಿಕೆಯಾಗಿದೆ. ರಾಜ್ಯದಲ್ಲಿ 200 ರೂಪಾಯಿ ಇದ್ದ ಕೋಳಿ ಮಾಂಸ ಇದೀಗ ದಿಢೀರ್ ಪ್ರತಿ ಕೆಜಿಗೆ 300 ರಿಂದ 340 ರೂಪಾಯಿಗೆ ಏರಿಕೆಯಾಗಿದೆ. ದರ ಏರಿಕೆಯಿಂದ ನಾನ್ ವೆಜ್ ಪ್ರಿಯರು ಹೈರಾಣಾಗಿದ್ದಾರೆ.
ಚಿಕನ್ ಪ್ರತಿ ಕೆಜೆಗಿ ಗರಿಷ್ಠ 340 ರೂಪಾಯಿಗೆ ಏರಿಕೆಯಾಗಿದ್ದರೆ, ಇತ್ತ ಕುರಿ, ಮೇಕೆ ಮಾಂಸದ ದರ ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ದಿನ ಮಾಂಸಾಹಾರ ಸೇವನೆ ಮಾಡುವವರು ಈ ಬೆಲೆಯಿಂದ ಕಂಗಾಲಾಗಿದ್ದಾರೆ. ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣ ನಾನ್ ವೆಜ್ ಪ್ರಿಯರು ಒಂದು ಹೊತ್ತಿನ ಆಹಾರ ಸೇವನೆ ದುಬಾರಿಯಾಗುತ್ತಿದೆ.
ಚಿಕನ್, ಮಟನ್ ಸೇರಿದಂತೆ ಮಾಂಸಗಳ ಬಲೆ ಏರಿಕೆಯಿಂದ ಹೊಟೆಲ್ ಸೇರಿದಂತೆ ರೆಸ್ಟೋರೆಂಟ್‌ಗಳಲ್ಲಿ ಕಬಾಬ್, ಚಿಕನ್ ಫ್ರೈ, ಡ್ರೈ, ಮಟನ್ , ಸೂಪ್ ಸೇರಿದಂತೆ ಮಾಂಸಾಹಾರ ಬೆಲೆಗಳು ಏರಿಕೆಯಾಗಿದೆ. ಇದರಿಂದ ಹೊಟೆಲ್‌ಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ದರ ಏರಿಕೆಯಾದರೂ ಚಿಕನ್ ತಿನ್ನೋದು ಜನರು ಬಿಡಲ್ಲ. ಬೆಲೆ ಏರಿಕೆಯಿಂದ ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಬೆಲೆ ಏರಿಕೆಯಿಂದ ಸದ್ಯ ಶೇಕಡಾ 10 ರಷ್ಟು ವ್ಯಾಪಾರದಲ್ಲಿ ಕುಸಿತವಾಗಿದೆ.ಮೀನು, ಮಟನ್ ರೇಟ್ ಜಾಸ್ತಿ ಇರೋದ್ರಿಂದ ಚಿಕನ್ ವ್ಯಾಪಾರಕ್ಕೆ ಅಷ್ಟೇನೂ ಪರಿಣಾಮ ಬೀರಲ್ಲ ಎಂದು ವ್ಯಾಪಾರಿ ಹೇಳಿದ್ದಾರೆ. ಚಿಕನ್ ತಿನ್ನೋರ ಸಂಖ್ಯೆ ತುಂಬಾ ಜಾಸ್ತಿ ಇದೆ, ರೇಟ್ ಜಾಸ್ತಿ ಆದರೂ ತಿನ್ನುತ್ತಾರೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ