ನೆಲಮಂಗಲ ಶೃಂಗೇರಿ ಶಾಖಾ ಮಠದ ಶಿವಗಂಗೆ ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿ ವಿಧಿವಶ!

Published : Oct 24, 2025, 11:10 AM IST
Shivagange Sringeri Mutt seer passes away

ಸಾರಾಂಶ

Shivagange Sringeri Mutt seer passes away: ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠದ ಮಠಾಧಿಪತಿ ಶ್ರೀ ಪುರುಷೋತ್ತಮ ಭಾರತೀ ಮಹಾಸ್ವಾಮಿಗಳು (75) ಬಹು ಅಂಗಾಂಗ ವೈಫಲ್ಯದಿಂದ ಬ್ರಹ್ಮೀಭೂತರಾಗಿದ್ದಾರೆ. ಶ್ರೀಗಳ ಅಂತ್ಯ ಸಂಸ್ಕಾರವು ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ನೆಲಮಂಗಲ (ಅ.24): ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠದ ಮಠಾಧಿಪತಿ ಶ್ರೀ ಶ್ರೀ ಪುರುಷೋತ್ತಮ ಭಾರತೀ ಮಹಾಸ್ವಾಮಿಗಳು ಇಂದು ಮುಂಜಾನೆ 4.25 ಕ್ಕೆ ಬ್ರಹ್ಮೀಭೂತರಾಗಿದ್ದಾರೆ.

ಶ್ರೀಗಳಿಗೆ 75 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಪಲ್ಯದಿಂದ ಇಂದು ದೈವಾದೀನರಾಗಿದ್ದಾರೆ. ಕಳೆದೆರಡು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಶ್ರೀಗಳು ಬೆಂಗಳೂರಿನ ರಂಗದೊರೈ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಶ್ರೀಗಳ ಅಂತ್ಯ ಸಂಸ್ಕಾರ:

ಶ್ರೀಗಳ ಅಂತ್ಯ ಸಂಸ್ಕಾರ ಮಠದ ಆವರಣದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಶೃಂಗೇರಿ ಜಗದ್ಗುರುಗಳ ಆಶೀರ್ವಾದದಂತೆ ಸಂಪ್ರದಾಯ ಬದ್ಧವಾಗಿ ಅಂತಿಮ ಕ್ರಿಯೆಗಳು ನೆರವೇರಲಿವೆ ಎಂದು ಮೂಲಗಳು ತಿಳಿಸಿವೆ.

ಶ್ರೀಗಳು ಶೃಂಗೇರಿ ಶಾರದಾ ಪೀಠದ ಶಾಖಾ ಮಠದ ಮೂಲಕ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಭಕ್ತರು, ಶಿಷ್ಯವರ್ಗ ಮತ್ತು ಸ್ಥಳೀಯರು ಶ್ರೀಗಳ ನಿಧನದಿಂದ ಆಘಾತಕ್ಕೊಳಗಾಗಿದ್ದಾರೆ. ಶ್ರೀಗಳ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್