ಈ ವರ್ಷ ಒಳ್ಳೇದಕ್ಕಿಂತ ಕೆಟ್ಟದ್ದು ಕೇಳೋದೇ ಜಾಸ್ತಿ ಆಗ್ತೈತಿ, ಮಳೆ ಬೆಳೆಯೂ ಉತ್ತಮ ಐತಿ: ಕೊಡೆಕಲ್ ಕಾರ್ಣಿಕ ಭವಿಷ್ಯ

Published : Apr 21, 2024, 05:27 PM ISTUpdated : Apr 21, 2024, 05:29 PM IST
ಈ ವರ್ಷ ಒಳ್ಳೇದಕ್ಕಿಂತ ಕೆಟ್ಟದ್ದು ಕೇಳೋದೇ ಜಾಸ್ತಿ ಆಗ್ತೈತಿ, ಮಳೆ ಬೆಳೆಯೂ ಉತ್ತಮ ಐತಿ: ಕೊಡೆಕಲ್ ಕಾರ್ಣಿಕ ಭವಿಷ್ಯ

ಸಾರಾಂಶ

ಹಲವು ಪುಣ್ಯ ಕ್ಷೇತ್ರಗಳಲ್ಲಿ ಮುಂದಾಗುವ ಘಟನೆಗಳ ಕುರಿತು ಭವಿಷ್ಯಗಳನ್ನ ನುಡಿಯಲಾಗುತ್ತೆ. ಇಂಥ ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿಯುವ ಭವಿಷ್ಯಗಳು ವರ್ಷದೊಳಗೆ ನಿಜವಾಗುತ್ವೆ ಅನ್ನೋ ನಂಬಿಕೆಗಳು ಇವೆ. ಹಾಗೇ ಕೊಡೆಕಲ್‌ ಕ್ಷೇತ್ರದ ಬಸವೇಶ್ವರ ದೇಗುಲದಲ್ಲಿ ನುಡಿಯುವ ಕಾರ್ಣಿಕಕ್ಕೆ ತನ್ನದೆಯಾದ ಮಹತ್ವ ಇದೆ. ಈ ವರ್ಷವು ಕೊಡೆಕಲ್‌ ಬಸವೇಶ್ವರ ದೇಗುಲದಲ್ಲಿ ಕಾರ್ಣಿಕ ನುಡಿಯಲಾಗಿದ್ದು, ಅಚ್ಚರಿಯ ಭವಿಷ್ಯವನ್ನ ಹೇಳಲಾಗಿದೆ..

- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣನ್ಯೂಸ್

ವಿಜಯಪುರ (ಏ.21): ಹಲವು ಪುಣ್ಯ ಕ್ಷೇತ್ರಗಳಲ್ಲಿ ಮುಂದಾಗುವ ಘಟನೆಗಳ ಕುರಿತು ಭವಿಷ್ಯಗಳನ್ನ ನುಡಿಯಲಾಗುತ್ತೆ. ಇಂಥ ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿಯುವ ಭವಿಷ್ಯಗಳು ವರ್ಷದೊಳಗೆ ನಿಜವಾಗುತ್ವೆ ಅನ್ನೋ ನಂಬಿಕೆಗಳು ಇವೆ. ಹಾಗೇ ಕೊಡೆಕಲ್‌ ಕ್ಷೇತ್ರದ ಬಸವೇಶ್ವರ ದೇಗುಲದಲ್ಲಿ ನುಡಿಯುವ ಕಾರ್ಣಿಕಕ್ಕೆ ತನ್ನದೆಯಾದ ಮಹತ್ವ ಇದೆ. ಈ ವರ್ಷವು ಕೊಡೆಕಲ್‌ ಬಸವೇಶ್ವರ ದೇಗುಲದಲ್ಲಿ ಕಾರ್ಣಿಕ ನುಡಿಯಲಾಗಿದ್ದು, ಅಚ್ಚರಿಯ ಭವಿಷ್ಯವನ್ನ ಹೇಳಲಾಗಿದೆ..

ಜಂಬಗಿ (ಆ)ಯ ಕೊಡೆಕಲ್‌ ಬಸವೇಶ್ವರ ಭವಿಷ್ಯ!

ರಾಜ್ಯದ ಹಲವೆಡೆ ಕೊಡೆಕಲ್‌ ಬಸವೇಶ್ವರರ ದೇಗುಲ(Kodekal basaveshwar temple)ಗಳಿವೆ. ಪ್ರತಿವರ್ಷವು ಈ ದೇಗುಲಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮೂಲ ಕೊಡೆಕಲ್‌ ಬಸವೇಶ್ವರ ದೇಗುಲದಲ್ಲಿ ನುಡಿದ ಭವಿಷ್ಯಗಳನ್ನ ವಿಶ್ಲೇಷಣೆ ಮಾಡಲಾಗುತ್ತೆ.  ಹಾಗೇ ವಿಜಯಪುರ ಜಿಲ್ಲೆಯ ಜಂಬಗಿ (ಆಹೇರಿ) ಗ್ರಾಮದಲ್ಲಿ ಕೊಡೆಕಲ್‌ ಬಸವೇಶ್ವರರ ನುಡಿಗಳನ್ನ ಇಲ್ಲಿನ ದೇಗುಲ ಮುಖ್ಯ ಗುರುಗಳು ಶಿವಶಂಕರ್‌ ದಿಂಡವಾರ್‌ ವಿಶ್ಲೇಷಣೆ ಮಾಡಿದ್ದಾರೆ. 2024 ಜಾತ್ರೆ ಪ್ರಯುಕ್ತ ಪುರಾಣ ಮುಕ್ತಾಯ. ಗ್ರಂಥ ಬಿಡುಗಡೆ ಹಾಗೂ ಈ ವರ್ಷದ ಭವಿಷ್ಯ ನುಡಿಗಳ ಕಾರ್ಯಕ್ರಮ ಸಹ ನಡೆಯಿತು.

ಹಣದ ಹೊಳೆ ಹರಿಯುತ್ತೆ ಎಂದ ಜ್ಯೋತಿಷಿ, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮಹಿಳೆ!

ರಾಜ್ಯದಲ್ಲಿ ಮಳೆ ಬೆಳೆ ಸಂಪನ್ನ; ಕೊಡೆಕಲ್‌ ಭವಿಷ್ಯ!

ರಾಜ್ಯದಲ್ಲಿ ಬರ ತಾಂಡವದ ನಡುವೆ ಕೊಡೆಕಲ್‌ ಬಸವೇಶ್ವರರ ಕಾರ್ಣಿಕ ಜನರಲ್ಲಿ ಕೊಂಚ ನೆಮ್ಮದಿಯನ್ನ ಮೂಡಿಸಿದೆ 2024ರಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ದಕ್ಷಿಣ ಭಾಗದಲ್ಲಿ ಕೊಂಚ ಹೆಚ್ಚಾಗಿಯೇ ಮಳೆ ಸಂಭವ ಇದೆ ಎಂದು ಕಾರ್ಣಿಕ ನುಡಿಯಲಾಗಿದೆ. ಇನ್ನು ಮಳೆಯ ಜೊತೆ ಜೊತೆಗೆ ಗಾಳಿಯ ಆರ್ಭಟವು ಇರಲಿದೆ. ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಲಿದೆ ಎಂದಿದ್ದಾರೆ. ಈ ವರ್ಷ ಮಳೆಯ ಜೊತೆಗೆ ವಾಯು ಆರ್ಭಟಿಸಲಿದ್ದಾನೆ ಎಂದು ಕಾರ್ಣಿಕದಲ್ಲಿ ಹೇಳಲಾಗಿದೆ.

ವಿಶ್ವದಲ್ಲಿ ಭಾರತದ ವಿಜಯ ಪತಾಕೆ; ಅಭಿವೃದ್ಧಿ ಮುಂದುವರಿಯುತ್ತೆ!

ಇನ್ನು ದೇಶದ ಸ್ಥಿತಿಗತಿಯ ಬಗ್ಗೆಯೂ ಇಲ್ಲಿ ಭವಿಷ್ಯ ನುಡಿಯಲಾಗಿದ್ದು, ದೇಶದಲ್ಲಿ ಯಥಾಸ್ಥಿತುಯವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಹೇಳಲಾಗಿದೆ. ವಿಶ್ವದಲ್ಲಿ ಭಾರತದ ವಿಜಯ ಪತಾಕೆ ಹಾರಲಿದೆ. ದೇಶ ಜಗತ್ತಿನಲ್ಲಿ ಉತ್ತಮ ಹೆಸರು ಮಾಡಲಿದೆ ಎಂದಿದ್ದಾರೆ.  

ಒಳ್ಳೆಯದ್ದಕ್ಕಿಂತ ಕೆಟ್ಟದ್ದೇ ಕೇಳುವುದು!

ಇನ್ನೂ ಮುಂದುವರಿದು ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೆ ಕೇಳುವುದು ಬಹಳ ಆಗುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ. ಈ ಮೂಲಕ ಹೊರ ದೇಶಗಳಲ್ಲಿ ಯುದ್ಧದ ಆತಂಕ, ಅನಾಹುತಗಳು ಮುಂದುವರೆಯುವ ಸೂಚನೆಯನ್ನು ನೀಡಲಾಗಿದೆ. ಸುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯವಾಗುತ್ತದೆ ಎನ್ನುವ ಮೂಲಕ ನೆರೆ ರಾಷ್ಟ್ರಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಲಿವೆ ಎನ್ನಲಾಗಿದೆ. ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿಕರ ಇಲ್ಲ, ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳು ಇರುತ್ತವೆ ಎನ್ನುವ ಮೂಲಕ ದೇಶದಲ್ಲಿ ಸುಭಿಕ್ಷೆಯ ಸೂಚನೆಗಳನ್ನು ಶಿವಶಂಕರ್ ದಿಂಡವಾರ್ ಅವರು ತಮ್ಮ ಕಾರ್ಣಿಕದಲ್ಲಿ ಹೇಳಿದ್ದಾರೆ. 

ಆಂತರಿಕ ಕಚ್ಚಾಟದಿಂದಲೇ ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡ್ತಾರೆ: ಕಾಲಜ್ಞಾನಿ ಕೊಡೇಕಲ್‌ ಬಸವಣ್ಣ ಭವಿಷ್ಯ!

ಇನ್ನು ದೇಗುಲದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಹಾಗೂ ದೇವಾಲಯದ ಆವರಣದಲ್ಲಿ ಮಾದಲಿ ಮಜಾರಕ್ಕೆ ಹುಸೇನಸಾಬ್ ಮುಲ್ಲಾ ಪಾತೆ ಕೊಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಕೊಡೆಕಲ್ ಶ್ರೀ ಬಸವೇಶ್ವರ ದೇವಾಲಯ ದಿಂದ ವಿವಿಧ ವಾದ್ಯ ಮೇಳದೊಂದಿಗೆ ಕೊಡೆಕಲ್ ಬಸವೇಶ್ವರರ ವಚನ ಓದುತ್ತಾ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ