ಇಂದಿನಿಂದ 3 ದಿನ ಸಿಎಂ ಬಿಎಸ್‌ವೈ ನೇತೃತ್ವದಲ್ಲಿ ವಲಯವಾರು ಸಭೆ

By Kannadaprabha NewsFirst Published Jul 22, 2020, 8:32 AM IST
Highlights

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ 19 ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ (ಜು.22ರಿಂದ 24) ನಗರದ ವಲಯವಾರು ಅಧಿಕಾರಿಗಳ ಸಭೆ ಜರುಗಲಿದೆ.

ಬೆಂಗಳೂರು(ಜು.22): ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ 19 ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ (ಜು.22ರಿಂದ 24) ನಗರದ ವಲಯವಾರು ಅಧಿಕಾರಿಗಳ ಸಭೆ ಜರುಗಲಿದೆ.

ಬುಧವಾರ ಬೆಳಗ್ಗೆ 10 ಗಂಟೆಗೆ ರಾಜರಾಜೇಶ್ವರಿ ನಗರ ವಲಯ, ಮಧ್ಯಾಹ್ನ 12.30ಕ್ಕೆ ದಾಸರಹಳ್ಳಿ ವಲಯ, ಸಂಜೆ 4ಕ್ಕೆ ಬೊಮ್ಮನಹಳ್ಳಿ ವಲಯ, ಸಂಜೆ 5 ಗಂಟೆಗೆ ಮಹದೇವಪುರ ವಲಯದಲ್ಲಿ ಸಭೆ ನಡೆಯಲಿದೆ.

ಬೆಂಗಳೂರು: ಕಬ್ಬನ್‌- ಲಾಲ್‌ಬಾಗ್‌ ಉದ್ಯಾನದಲ್ಲಿ ವಾಯು ವಿಹಾರಕ್ಕೆ ಅವಕಾಶ

ಗುರುವಾರ ಸಂಜೆ 4ಕ್ಕೆ ಪೂರ್ವ ವಲಯ (ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ), ಸಂಜೆ 5 ಗಂಟೆಗೆ ಪಶ್ಚಿಮ ವಲಯ (ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ) ಸಭೆ ನಡೆಯಲಿದೆ. ಶುಕ್ರವಾರ ಬೆಳಗ್ಗೆ 11ಕ್ಕೆ ದಕ್ಷಿಣ ವಲಯ, ಮಧ್ಯಾಹ್ನ 12ರಿಂದ ಯಲಹಂಕ ವಲಯವಾರು ಸಭೆ ನಡೆಯಲಿದೆ. ಈ ಸದರಿ ಸಭೆಗೆ ಸಂಬಂಧಪಟ್ಟವಲಯ ಉಸ್ತುವಾರಿ ಸಚಿವರು, ಬಿಬಿಎಂಪಿ ಮೇಯರ್‌, ವಿವಿಧ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿದೆ.

ಹಂಗಾಮಿಯಾಗಿ ವೈದ್ಯರ ನೇಮಕ

ನಗರದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರು, ಶಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿದಂತೆ ಕೊರೋನಾ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು .80 ಸಾವಿರ ಮಾಸಿಕ ವೇತನದ ಮೇಲೆ ಹಂಗಾಮಿ (ಅಡ್‌ಹಾಕ್‌) ಆಧಾರದ ಮೇಲೆ ಆರು ತಿಂಗಳ ಅವಧಿಗೆ ಎಂಬಿಬಿಎಸ್‌ ವೈದ್ಯರ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನರ್ಸ್‌ಗಳಿಗೂ ಸಹ ವೇತನವನ್ನು 30 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದರು. 

ಕೊರೋನಾ ಎಫೆಕ್ಟ್: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ರದ್ದು!

900ಕ್ಕೂ ಹೆಚ್ಚು ವೈದ್ಯರ ನೇಮಕ: ರಾಜ್ಯ ಸರ್ಕಾರ ನಗರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ) ಸೇರಿದಂತೆ ಹಲವಾರು ಕಡೆ ಕೊರೋನಾ ಆರೈಕೆ ಕೇಂದ್ರ ಸ್ಥಾಪನೆ ಮಾಡುತ್ತಿದ್ದು, ಇಲ್ಲಿ ದಾಖಲಾಗುವವರಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ನರ್ಸ್‌ ಮುಂತಾದವರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಬಿಬಿಎಂಪಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಸುಮಾರು 900ಕ್ಕೂ ಹೆಚ್ಚು ವೈದ್ಯರನ್ನು ನೇಮಕ ಮಾಡಿಕೊಂಡಿದೆ.

click me!