ಸಿಯುಕೆ 5ನೇ ಘಟಿಕೋತ್ಸವ ವರ್ಚುವಲ್ ಮೋಡ್‍ನಲ್ಲಿ ಸಮಾರಂಭ ಆಯೋಜನೆ ಮಾಡಲಾಗಿದ್ದು, ಸಾಲು ಮರದ ತಿಮ್ಮಕ್ಕ ಸೇರಿದಂತೆ ಐವರು ದಿಗ್ಗಜರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
ಕಲಬುರಗಿ, (ಸೆ.21): ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಐದನೇ ಘಟಿಕೊತ್ಸವ ಸೆ. 23 ರ ಬುಧವಾರ ನಡೆಯಲಿದೆ. ಇದೇ ಘಟಿಕೋತ್ಸವದಲ್ಲಿ ಈಗಾಗಲೇ ಆಯ್ಕೆಯಾಗಿರುವ ಸಾಲುಮರದ ತಿಮ್ಮಕ್ಕ ಸೇರಿದಂತೆ ಐವರು ಸಾಧಕರಿಗೆ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
ಘಟಿಕೋತ್ಸವದ ಎಲ್ಲಾ ಸಮಾರಂಭ ವರ್ಚುವಲ್ ಮೋಡ್‍ನಲ್ಲಿರಲಿದ್ದು, ಅಂದು ಬೆ. 11.00 ಗಂಟೆಗೆ ವರ್ಚುವಲ್ ಮೋಡ್‍ನಲ್ಲಿ ನಿಗದಿಪಡಿಸಲಾಗಿರುವ ಸಮಾರಂಭದಲ್ಲಿ ವಿಶ್ವವಿದ್ಯಾಲಯ ನುದಾನ ಆಯೋಗ (ಯುಜಿಸಿ) ದ ಅಧ್ಯಕ್ಷ ಪ್ರೊ. ಡಿ ಪಿ ಸಿಂಗ್ ಮುಖ್ಯಅತಿಥಿಯಾಗಿ ಪಾಲ್ಗೊಂಡು, ಆನ್‍ಲೈನ್ ಮೂಲಕ ಘಟಿಕೊತ್ಸವ ಭಾಷಣ ಮಾಡಲಿದ್ದಾರೆಂದು ಸಿಯುಕೆ ಕುಲಪತಿ ಎಚ್. ಎಂ. ಮಹೇಶ್ವರಯ್ಯ ತಿಳಿಸಿದ್ದಾರೆ.
SRH ವಿರುದ್ಧ RCB ಹೋರಾಟ, ವಿಧಾನಸಭೆಯಲ್ಲಿ ನಾಯಕರ ಹೊಡೆದಾಟ; ಸೆ.21ರ ಟಾಪ್ 10 ಸುದ್ದಿ!
ಐವರಿಗೆ ಗೌರವ ಡಾಕ್ಟರೇಟ್
ಸಿಯುಕೆ ತನ್ನ 5ನೇ ಘಟಿಕೋತ್ಸವದ ಅಂಗವಾಗಿ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸಾಲು ಮರದ ತಿಮ್ಮಕ್ಕ, ಜಾನಪದ ಲೇಖಕ ಮತ್ತು ಬರಹಗಾರ ಎಂ. ಜಿ. ಬಿರಾದಾರ್, ಕನ್ನಡದ ಖ್ಯಾತ ಕಾದಂಬರಿಕಾರ, ಸಂಶೋಧಕ ಎಸ್‍ಎಲ್ ಭೈರಪ್ಪ, ಕನ್ನಡ ಭಾಷೆಯ ಚೆಂಬಳಕಿನ ಕವಿ ಧಾರವಾಡದ ಚನ್ನವೀರ ಕಣವಿ ಮತ್ತು ಬಾಹ್ಯಾಕಾಶ ವಿಜ್ಞಾನಿ ಕೆ. ಶಿವನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿದೆ.
ಕರ್ನಾಟಕ ಕೇಂದ್ರೀಯ ವಿವಿ ವಿಶ್ವವಿದ್ಯಾಲಯವು 38 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 25 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಮತ್ತು ಅರ್ಹ ಅಭ್ಯರ್ಥಿಗಳಿಗೆ ಒಟ್ಟು 665 ಪದವಿಗಳನ್ನು ಆನ್‍ಲೈನ್ ಮೂಲಕ ನೀಡುತ್ತಿದೆ ಎಂದು ಕುಲಪತಿ ಮಹೇಶ್ವರಯ್ಯ ಮಾಹಿತಿ ನೀಡಿದ್ದಾರೆ.