
ಬೆಂಗಳೂರು[ಡಿ.03]: ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಕೇರಳದ ಕೊಚ್ಚಿ ಮೂಲದ ಅಪರ್ಣಾ ಕೃಷ್ಣನ್ ಅವರನ್ನು ಸೋಮವಾರದಂದು ವಿವಾಹವಾಗಿದ್ದಾರೆ.
ರಿಕ್ಷಾದಲ್ಲಿ ಸುಧಾ ಮೂರ್ತಿಗೆ ಪ್ರಪೋಸ್ ಮಾಡಿದ್ದ ಇನ್ಫೋಸಿಸ್ ಮಾಲೀಕ!
ನವೆಂಬರ್ 03ರಂದು ಬೆಂಗಳೂರಿನ ಹೋಟೆಲ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಸರಳವಾಗಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರಷ್ಟೇ ಭಾಗಿಯಾಗಿದ್ದಾರೆ. ವರ ರೋಹನ್ ಮೂರ್ತಿ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಪ್ಲೇನ್ ಕುರ್ತಾ ಧರಿಸಿದರೆ, ವಧು ಅರ್ಪಣಾ ಕೆನೆ ಬಣ್ಣದ ಲೆಹೆಂಗಾ ಧರಿಸಿ ಮಿಂಚಿದ್ದಾರೆ.
ಬಳಿಕ ನಡೆದಿದ್ದ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ಬಂಧುಗಳು ಹಾಗೂ ಗಣ್ಯರು ಆಗಮಿಸಿದ್ದರು. ಪ್ರಖ್ಯಾತ ಗಾಯಕಿ ಬಾಂಬೆ ಜಯಶ್ರೀ ಕೂಡಾ ಅತಿಥಿಯಾಗಿ ಆಗಮಿಸಿ, ಇಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಯಾರು ಅಪರ್ಣಾ ಕೃಷ್ಣನ್?
ಅಪರ್ಣಾ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್ ಕೆ.ಆರ್. ಕೃಷ್ಣನ್ ಮತ್ತು ಎಸ್‌ಬಿಐನ ನಿವೃತ್ತ ಉದ್ಯೋಗಿ ಸಾವಿತ್ರಿ ಅವರ ಪುತ್ರಿ. ಲಂಡನ್‌ನ ಡರ್ತ್‌ಮೌತ್ ಕಾಲೇಜಿನಿಂದ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿರುವ ಅಪರ್ಣಾ ಓರ್ವ ಅತ್ಯುತ್ತಮ ಯೋಗಪಟು ಕೂಡಾ ಹೌದು. ಲಂಡನ್‌ನಿಂದ ಮರಳಿರುವ ಅಪರ್ಣಾ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಅಪರ್ಣಾ ಹಾಗೂ ರೋಹನ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ.
ಬರಲಿದೆ ಮೂರ್ತಿ ದಂಪತಿ ಬಯೋಪಿಕ್; ಯಾರಾಗ್ತಾರೆ ಸುಧಾ ಮೂರ್ತಿ?
ಎರಡನೇ ಮದುವೆ:
ರೋಹನ್ ಮೂರ್ತಿಗೆ ಇದು ಎರಡನೇ ಮದುವೆ. 2011ರ ಜೂನ್‍ನಲ್ಲಿ ಟಿವಿಎಸ್ ಮೋಟಾರ್ಸ್ ಅಧ್ಯಕ್ಷ ವೇಣು ಶ್ರೀನಿವಾಸ್ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು ರೋಹನ್ ಮದುವೆಯಾಗಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಬಂದ ಹಿನ್ನೆಲೆ 2013ರಿಂದ ಇವರಿಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ವರದಿಯಾಗಿತ್ತು. ಬಳಿಕ 2015ರ ನವೆಂಬರ್ ಇವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ