ಆರ್‌ಸಿಬಿ ಕಾಲ್ತುಳಿತ ಪ್ರಕರಣ: ಕುನ್ಹಾ ವರದಿ ರದ್ದು ಕೋರಿ ಹೈಕೋರ್ಟ್‌ಗೆ ಡಿಎನ್‌ಎ ಮೊರೆ

Published : Jul 25, 2025, 05:16 AM IST
Karnataka High Court

ಸಾರಾಂಶ

ನ್ಯಾ.ಕುನ್ಹಾ ಅವರ ಆಯೋಗವು ಸೂಚನೆಯಂತೆ ವಿಚಾರಣೆಗೆ ಹಾಜರಾಗಿ ನಮ್ಮ ಹೇಳಿಕೆ ದಾಖಲಿಸಿದ್ದೆವು. ಆದರೆ, ನಾವು ನೀಡಿದಂತಹ ಹೇಳಿಕೆಯನ್ನು ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ.

ಬೆಂಗಳೂರು (ಜು.25): ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಳೆದ ತಿಂಗಳು ಘಟಿಸಿದ ಕಾಲ್ತುಳಿತ ಪ್ರಕರಣ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಅವರ ವಿಚಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ರದ್ದುಪಡಿಸುವಂತೆ ಕೋರಿ ಆರ್‌ಸಿಬಿ ವಿಜಯೋತ್ಸವದ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೈಕೋರ್ಟ್‌ ಮೇಟ್ಟಿಲೇರಿದೆ. ಈ ಕುರಿತಂತೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ನ ನಿರ್ದೇಶಕ ಸುನಿಲ್‌ ಮ್ಯಾಥ್ಯೂ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ, ನ್ಯಾ.ಕುನ್ಹಾ ಅವರ ವರದಿ ರದ್ದುಪಡಿಸಬೇಕು.

ವರದಿಯ ಪ್ರತಿಯನ್ನು ನಮಗೆ ನೀಡಲು ಆಯೋಗ ಮತ್ತು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಈ ಅರ್ಜಿಯು ಶುಕ್ರವಾರ ವಿಚಾರಣೆಗೆ ನಿಗದಿಯಾಗಿದೆ. ನ್ಯಾ.ಕುನ್ಹಾ ಅವರ ಆಯೋಗವು ಸೂಚನೆಯಂತೆ ವಿಚಾರಣೆಗೆ ಹಾಜರಾಗಿ ನಮ್ಮ ಹೇಳಿಕೆ ದಾಖಲಿಸಿದ್ದೆವು. ಆದರೆ, ನಾವು ನೀಡಿದಂತಹ ಹೇಳಿಕೆಯನ್ನು ಸಮರ್ಪಕವಾಗಿ ದಾಖಲಿಸಿಕೊಂಡಿಲ್ಲ. ತಮ್ಮ ಮತ್ತು ಇತರೆ ಸಾಕ್ಷಿಗಳು ಹೇಳಿಕೆ ದಾಖಲಿಸಿರುವ ಪ್ರತಿಯನ್ನು ಒದಗಿಸಲು ಆಯೋಗ ನಿರಾಕರಿಸಿದೆ. ಇತರೆ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸಲು ತಮಗೆ ಅವಕಾಶ ನೀಡಿಲ್ಲ. ಇದು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಅಲ್ಲದೆ, ನ್ಯಾ. ಕುನ್ಹಾ ಅವರು ಜುಲೈ 11ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ನೀಡಲು ಕೋರಲಾಗಿತ್ತು. ಆದರೆ, ವರದಿಯನ್ನು ನಮಗೆ ನೀಡಿಲ್ಲ. ವರದಿಯು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ. ಆ ಮೂಲಕ ಪೂರ್ವ ನಿಯೋಜಿತವಾಗಿ ಆಯೋಗ ವರ್ತಿಸಿದೆ. ಡಿಎನ್‌ಎ ಮತ್ತು ಅದರ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಕೆಲಸ ಮಾಡಿದೆ. ಇದರಿಂದ ತಮಗೆ ಭಾರಿ ತೊಂದರೆ ಉಂಟಾಗಲಿದ್ದು, ಆಯೋಗದ ವರದಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಸ್ವಯಂ ಪ್ರರಿತ ಪಿಐಎಲ್‌ ವಿಚಾರಣೆ ಜು.29ಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಉಂಟಾಗಿ 11 ಅಭಿಮಾನಿಗಳ ಸಾವನ್ನಪ್ಪಿದ ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಭಾಗೀಯ ಪೀಠವು ಜು.29ಕ್ಕೆ ಮುಂದೂಡಿತು. ಈ ಅರ್ಜಿ ವಿಚಾರಣೆ ವೇಳೆ ಕೆಎಸಿಎ ಪರ ವಕೀಲರು ಹಾಜರಾಗಿ, ನ್ಯಾ. ಮೈಕೆಲ್ ಕುನ್ಹಾ ಅವರ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆ ವರದಿ ಆಧರಿಸಿ ಸರ್ಕಾರ ಮತ್ತೆ ಕ್ರಿಮಿನಲ್ ಪ್ರಕರಣ ದಾಖಲಿಸಲಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗಾಗಲೇ ಸರ್ಕಾರವು ಮೂರು ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಇನ್ನೂ ವರದಿಯ‌ ಪ್ರತಿಯನ್ನೇ ನಮಗೆ ನೀಡಿಲ್ಲ. ಹಾಗಾಗಿ, ವರದಿ ನೀಡಲು ನಿರ್ದೇಶಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು. ಡಿಎನ್ಎ ಹಾಗೂ ಆರ್‌ಸಿಬಿ ಪರ ವಕೀಲರು ಸಹ ಇದೇ ಮನವಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!