ಸೇತೂರಾಂಗೆ ಜೀವಮಾನ ರಂಗ ಗೌರವ ಪ್ರಶಸ್ತಿ

By Kannadaprabha NewsFirst Published Feb 6, 2021, 9:43 AM IST
Highlights

25 ಸಾಧಕರಿಗೆ ನಾಟಕ ಅಕಾಡೆಮಿ 2020ನೇ ಸಾಲಿನ ಪ್ರಶಸ್ತಿ ಪ್ರಕಟ| ಬಳ್ಳಾರಿಯಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ| ರಂಗಭೂಮಿ ಸಾಧನೆಗಾಗಿ ಹಿರಿಯ ನಾಟಕಕಾರ, ನಿರ್ದೇಶಕ ಎಸ್‌.ಎನ್‌.ಸೇತೂರಾಂ ಅವರಿಗೆ ಜೀವಮಾನದ ‘ರಂಗ ಗೌರವ’ ಪ್ರಶಸ್ತಿ|

ಬೆಂಗಳೂರು(ಫೆ.06): ​ಕರ್ನಾಟಕ ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ರಂಗಭೂಮಿ ಸಾಧನೆಗಾಗಿ ಹಿರಿಯ ನಾಟಕಕಾರ, ನಿರ್ದೇಶಕ ಎಸ್‌.ಎನ್‌.ಸೇತೂರಾಂ ಅವರನ್ನು ಜೀವಮಾನದ ‘ರಂಗ ಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಾರ್ಷಿಕ ರಂಗ ಪ್ರಶಸ್ತಿಗೆ 25 ಮಂದಿ ರಂಗ ಸಾಧಕರು ಆಯ್ಕೆಯಾಗಿದ್ದು, ಸಂತೋಷ ಕುಮಾರ ಕುಸನೂರು (ಕಲಬುರಗಿ), ಎಂ.ಇಸ್ಮಾಯಿಲ್‌ ಸಾಬ್‌ (ರಾಯಚೂರು), ಭರಮಪ್ಪ ಜುಟ್ಲದ (ಕೊಪ್ಪಳ), ಮಾ.ಭ.ಸೋಮಣ್ಣ (ಹೊಸಪೇಟೆ), ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ (ಬಳ್ಳಾರಿ), ಗುರುಬಸಪ್ಪ ಕಲ್ಲಪ್ಪ ಸಜ್ಜನ (ವಿಜಯಪುರ), ಹಣಮವ್ವ ಗಾಜರ ಕುಳಲಿ, ಪಿ.ಢಗಳಚಂದ್ರ ಪವಾರ (ಬಾಗಲಕೋಟೆ), ಉಮಾದೇವಿ ಹಿರೇಮಠ (ಗದಗ), ಬಸವರಾಜ ಬ.ಕಡ್ಲೆಣ್ಣನವರ (ಧಾರವಾಡ), ಐರಣಿ ಬಸವರಾಜ (ದಾವಣಗೆರೆ), ನೂರಜಹಾನ ಗೊರಜಿನಾಳ್‌(ಚಿತ್ರದುರ್ಗ) ಮತ್ತು ಮಹಾವೀರ ಜೈನ್‌ (ಚಿಕ್ಕಮಗಳೂರು) ಅವರು ಆಯ್ಕೆಯಾಗಿದ್ದಾರೆ.

ಸೇತೂರಾಂ ನಿರ್ದೇಶನದ ಹೊಸ ನಾಟಕ ಉಚ್ಛಿಷ್ಟ!

ಅಶ್ವತ್ಥ ಕದಂಬ (ಮೈಸೂರು), ಎಂ.ಆರ್‌.ಚಂದ್ರಶೇಖರಯ್ಯ(ಕೊಡಗು), ಧನ್ಯಕುಮಾರ್‌ (ಮಂಡ್ಯ), ವೆಂಕಟರಮಣಸ್ವಾಮಿ (ಚಾಮರಾಜನಗರ), ಶ್ರೀನಿವಾಸ ಪ್ರಭು ಉಪ್ಪುಂದ (ಉಡುಪಿ), ರೋಹಿಣಿ ಜಗರಾಂ (ಮಂಗಳೂರು), ಕೆ.ಎನ್‌.ವಾಸುದೇವಮೂರ್ತಿ (ಬೆಂಗಳೂರು ಗ್ರಾಮಾಂತರ), ವಿ.ಲಕ್ಷ್ಮಿಪತಿ, ಎಂ.ಎಸ್‌.ವಿದ್ಯಾ, ಬಿ.ಎನ್‌.ಮಂಜುಳಾ, ಗೀತಾ ಸುರತ್ಕಲ್‌, ಬಾಬು ಹಿರಣ್ಣಯ್ಯ (ಬೆಂಗಳೂರು ನಗರ) ಅವರನ್ನು ಆಯ್ಕೆ ಮಾಡಲಾಗಿದೆ. ಜೀವಮಾನದ ರಂಗ ಗೌರವ ಪ್ರಶಸ್ತಿಯು 50 ಸಾವಿರ ನಗದು, ನಟರಾಜ ವಿಗ್ರಹ, ಪ್ರಶಸ್ತಿ ಫಲಕ, ಶಾಲು, ಹಾರ, ಪ್ರಶಸ್ತಿ ಪತ್ರವನ್ನು ಒಳಗೊಂದಿದೆ. ಹಾಗೆಯೇ ವಾರ್ಷಿಕ ರಂಗ ಪ್ರಶಸ್ತಿಯು 25 ಸಾವಿರ ನಗದು, ನಟರಾಜ ವಿಗ್ರಹ, ಪ್ರಶಸ್ತಿ ಫಲಕ, ಶಾಲು, ಹಾರ, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ.

ದತ್ತಿ ಪುರಸ್ಕಾರ:

ಬೆಂಗಳೂರಿನ ಮಾ.ಭಾಸ್ಕರ್‌ (ಕಲ್ಚರ್ಡ್‌ ಕಮೆಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ), ಕೊಪ್ಪಳದ ವೆಂಕಣ್ಣ ಕಾಮನೂರು (ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ), ಧಾರವಾಡದ ಅನ್ನಪೂರ್ಣ ಹೊಸಮನಿ(ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ), ಬೆಳಗಾವಿಯ ರಂಗ ಸಂಪದ (ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ) ಹಾಗೂ ಧಾರವಾಡದ ಸುನಂದಾ ಹೊಸಪೇಟೆ (ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ) ಅವರು ದತ್ತಿ ಪ್ರಶಸ್ತಿಗಳಿಗೆ ಆಯ್ಕೆಗೊಂಡಿದ್ದಾರೆ. ಆಯ್ಕೆಯಾಗಿರುವ ಸಾಧಕರಿಗೆ ಬಳ್ಳಾರಿಯಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.
 

click me!