
ರಾಮನಗರ (ಜ.26): ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಹೊಂಗಣಿದೊಡ್ಡಿ ಗ್ರಾಮಸ್ಥರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಇಕ್ಬಾಲ್ ಹುಸೇನ್ ಆರೋಪಗಳನ್ನು ನಿರಾಕರಿಸಿದ್ದಾರೆ.ನಾನೊಬ್ಬ ರೈತನ ಮಗ. ಭೂ ಕಬಳಿಕೆ ಆರೋಪ ಸುಳ್ಳು. ಸತ್ಯಾಂಶ ನಿಮಗೆ ಗೊತ್ತಿಲ್ಲ. ಇದರಿಂದ ನನಗೆ ಬಹಳ ನೋವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇಂದು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, 1987 ರಲ್ಲಿ ಭೂ ನ್ಯಾಯಮಂಡಳಿಯಲ್ಲಿ ನಿಯಮದ ಪ್ರಕಾರವೇ ಅವರಿಗೆ ಅರ್ಡರ್ ಆಗಿದೆ. ನಾನು ರೈತರು ಮತ್ತು ಭೂ ಮಾಲೀಕರ ಜೊತೆ ಮಾತನಾಡಿದ್ದೆ. ಕಾನೂನು ಪ್ರಕಾರವಾಗಿ ಅವರಿಗೆ ಫಾರಂ 10 ನೀಡಿಸಿದ್ದೇನೆ. 10 ಇದ್ದವರಿಗೆ ಮತ್ತೆ 10 ಗುಂಟೆ ಸೇರಿಸಿ ಎಲ್ಲರನ್ನೂ ಸಮಾಧಾನ ಮಾಡಿದ್ದೆವು. ರೈತರ ಒಪ್ಪಿಗೆ ಮೇರೆಗೆ ಕಾನೂನು ಪ್ರಕಾರ ಮಾಡಿದ್ದೇವೆ. 19 ಜನ ಗೇಣಿದಾರು ಒಪ್ಪಿಗೆ ಕೊಟ್ಟಿದ್ದಾರೆ. ನಾಲ್ಕೈದು ಜನ ಸಂಘ ಸಂಸ್ಥೆ ಕಟ್ಟಿಕೊಂಡು ರೋಲ್ ಕಾಲ್ ಗಿರಾಕಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡ್ತಾ ಇದ್ದಾರೆ. ಕಾನೂನು ರೀತಿ ನ್ಯಾಯ ದೊರಕಿಸಬೇಕು ಅಂತ ನಾನು ಕೆಲಸ ಮಾಡಿದ್ದೇನೆ. 265 ಸರ್ವೆ ನಂಬರ್‌ನಲ್ಲಿ ಊರು ಇದೆ. ಅಲ್ಲಿ ಯಾರಿಗೂ ಹಕ್ಕು ಪತ್ರ ಆಗಿಲ್ಲ. ಹೀಗಾಗಿ ನನ್ನ ಹೆಸರಿಗೆ ಮಾಡಿಸಿ ನಂತರ ಅವ್ರುಗೆ ಹಕ್ಕು ಪತ್ರ ಮಾಡಿಕೊಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಇದನ್ನೇ ಕೆಲ ರೋಲ್ ಕಾಲ್ ಗಿರಾಕಿಗಳು ನನ್ನ ಬಳಿ ದುಡ್ಡಿಗೆ ಬಂದಿದ್ರು. ನಾನು ಇದಕ್ಕೆ ಸೊಪ್ಪು ಹಾಕದ್ದಕ್ಕೆ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ
ಮತ್ತಷ್ಟು ಮೈಕ್ರೋ ಫೈನಾನ್ಸ್ ಕಿರಿಕ್: ನೂರಾರು ಜನ ಪರಾರಿ!
ಶಾಸಕ ಇಕ್ಬಾಲ್ ಹುಸೇನ್ ಭೂಕಬಳಿಕೆ ಮಾಡಿದ್ದಕ್ಕೆ ದಾಖಲೆ ಬಿಡುಗಡೆ ಮಾಡಿದ ಗ್ರಾಮಸ್ಥರು:
ಶಾಸಕ ಇಕ್ಬಾಲ್ ಹುಸೇನ್ ತಾವು ಭೂಕಬಳಿಕೆ ಮಾಡಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಕನಕಪುರ ತಾಲೂಕಿನ ಹೊಂಗಣಿದೊಡ್ಡಿ ಗ್ರಾಮಸ್ಥರು ಶಾಸಕರು ಭೂಕಬಳಿಕೆ ಮಾಡಿರುವುದಾಗಿ ದಾಖಲೆ ಬಿಡುಗಡೆ ಮಾಡಿದ್ದಾರೆ. ನಿನ್ನೆ ರಾಮನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಭೂ ಮಾಲೀಕರು, ಗ್ರಾಮಸ್ಥರಿಗೆ ಹಿಂದೆ ಕ್ರಯ ಮಾಡಿಕೊಟ್ಟಿರೋ ದಾಖಲೆ ಬಿಡುಗಡೆಗೊಳಿಸಿದ್ದಾರೆ.
ಅಕ್ರಮ ಪೌತಿ ಖಾತೆ ಮಾಡಿರೋ ಆರೋಪ:
ಗ್ರಾಮದ ಜಮೀನನ್ನ ಅಕ್ರಮವಾಗಿ ಪೌತಿ ಖಾತೆ ಮಾಡಿದ್ದಾರೆ. ಅದನ್ನ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಖರೀದಿ ಮಾಡಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಡೀ ಗ್ರಾಮವೇ ಶಾಸಕರ ಹೆಸರಲ್ಲಿ ಇದೆ ಎಂಬುದನ್ನ ಶಾಸಕರೇ ಒಪ್ಪಿಕೊಂಡಿದ್ದಾರೆ. ಈಗ ಗ್ರಾಮದ ಜಮೀನನ್ನ ಬಿಟ್ಟು ಕೊಡ್ತೀನಿ ಅಂತಾರೆ. ಕೇವಲ ಗ್ರಾಮದ ಜಮೀನು ಮಾತ್ರವಲ್ಲ, ನಮ್ಮ ಕೃಷಿ ಭೂಮಿಯನ್ನೂ ನಮಗೆ ಬಿಟ್ಟುಕೊಡಬೇಕು. ಗೇಣಿದಾರರಿಗೆ ಜಮೀನುಗಳನ್ನ ವಾಪಸ್ ನೀಡಬೇಕು. ಸ್ಥಳಕ್ಕೆ ಡಿಸಿ ಭೇಟಿ ನೀಡಿ ನಮ್ಮ ಜಾಗಕ್ಕೆ ಮಂಜೂರಾತಿ ಪತ್ರಗಳ ನೀಡಬೇಕು. ಕಳೆದ 60-70 ವರ್ಷದಿಂದ ನಾವು ಅಲ್ಲಿ ವ್ಯವಸಾಯ ಮಾಡ್ತಿದ್ದೇವೆ.
ರಾಮನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ
ಜಮೀನು ಉಳಿಸಿಕೊಡಿ, ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ!
ನಮ್ಮ ಜಮೀನುಗಳನ್ನ ನಮಗೆ ಉಳಿಸಿಕೊಡಿ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ರೈತರಿಗೆ ನ್ಯಾಯ ಒದಗಿಸಬೇಕು. ಅದು ಆಗದಿದ್ದರೆ ನಮಗೆ ದಯಾಮರಣ ನೀಡುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ