ಅಯೋಧ್ಯೆ ರೈಲಿಗೆ ಬೆಂಕಿ ಹಚ್ತೀನೆಂದ ಮುಸ್ಲಿಂ ವ್ಯಕ್ತಿ ಬೇರಾರೂ ಅಲ್ಲ, ಸ್ವತಃ ರೈಲ್ವೆ ಇಲಾಖೆ ನೌಕರ

By Sathish Kumar KH  |  First Published Feb 23, 2024, 12:58 PM IST

ಮೈಸೂರಿನಿಂದ ಆಯೋಧ್ಯೆಗೆ ತೆರಳುತ್ತಿದ್ದ ರೈಲಿಗೆ ಬೆಂಕಿ ಹಚ್ಚುತ್ತೇನೆಂದು ಸ್ವತಃ ರೈಲ್ವೆ ಇಲಾಖೆಯ ಮುಸ್ಲಿಂ ನೌಕರನೇ ಹೇಳಿದ ಘಟನೆ ಗುರುವಾರ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. 


ವಿಜಯನಗರ (ಫೆ.23):  ಮೈಸೂರಿನಿಂದ ಅಯೋಧ್ಯಾ ಧಾಮಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ ಘಟನೆ ಗುರುವಾರ ನಡೆದಿತ್ತು. ಈ ವೇಳೆ ಮುಸ್ಲಿಂ ವ್ಯಕ್ತಿಗಾಗಿ ತೀವ್ರ ಶೋಧದ ನಡುವೆ ಪತ್ತೆ ಹಚ್ಚಲಾಗಿದ್ದು, ಅಯೋಧ್ಯಾ ರೈಲಿಗೆ ಬೆಂಕಿ ಹಚ್ಚುವುದಾಗಿ ಸ್ವತಃ ರೈಲ್ವೆ ಇಲಾಖೆಯ ನೌಕರನೇ ಹೇಳಿದ್ದಾನೆಂದು ತಿಳಿದುಬಂದಿದೆ.

ಮೈಸೂರು- ಅಯೋಧ್ಯ ಧಾಮ ರೈಲಿಗೆ ಬೆಂಕಿ‌ ಹಚ್ಚುತ್ತೇವೆಂದು ಹೇಳಿದ ಪ್ರಕರಣ ಹಿನ್ನಲೆಯಲ್ಲಿ ಆರೋಪಿಗಾಗಿ ತೀವ್ರ ಶೋಧ ಮಾಡಿದ ನಂತರ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ಸಣ್ಣ ಕಾರಣಕ್ಕಾಗಿ ಈ ರೀತಿ ಎಡವಟ್ಟಿನ ಮಾತನ್ನಾಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಆಯೋಧ್ಯೆರೈಲಿಗೆ ಬೆಂಕಿ ಹಚ್ಚುವುದಾಗಿ ಹೇಳಿದ ಮುಸ್ಲಿಂ ವ್ಯಕ್ತಿ ಬೇರಾರೂ ಅಲ್ಲ, ಹುಬ್ಬಳ್ಳಿ ಡಿವಿಜನ್ ರೈಲ್ವೆ ಇಲಾಖೆಯ 58 ವರ್ಷದ ಮುಸ್ಲಿಂ ನೌಕರನಾಗಿದ್ದಾನೆ. ಅಷ್ಟಕ್ಕೂ ಆತ ಹೀಗೆ ಹೇಳುವುದಕ್ಕೆ ಅತಿ ಸಣ್ಣ ಕಾರಣವಿದೆ ಎಂಬುದು ತಿಳಿದುಬಂದಿದೆ. 

Tap to resize

Latest Videos

undefined

ಅಯೋಧ್ಯೆ ರೈಲಿನಲ್ಲಿ ಆಕ್ಷೇಪಾರ್ಹ ಘೋಷಣೆ ಕೂಗಿದ ಅನ್ಯಕೋಮಿನ ಯುವಕ: ರೈಲು ತಡೆದು ಭಕ್ತರ ಪ್ರತಿಭಟನೆ

ರೈಲ್ವೆ ಇಲಾಖೆ ಡಿ ದರ್ಜೆ ನೌಕರನಾಗಿರುವ ವ್ಯಕ್ತಿಯು ತನ್ನ ಡ್ಯೂಟಿ ಮುಗಿಸಿಕೊಂಡು ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳಸಬೇಕಿತ್ತು. ಒಂದನೇ ಪ್ಲಾಟ್ ಫಾರಂ ನಲ್ಲಿ ಅಯೋಧ್ಯೆ ರೈಲು ನಿಂತಿತ್ತು. ಪಕ್ಕದ ಮೂರನೇ ಪ್ಲಾಟ್ ಫಾರಂ ಮೇಲೆ ಹುಬ್ಬಳ್ಳಿಗೆ ಹೋಗುವ ಟ್ರೈನ್ ‌ನಿಂತಿತ್ತು. ಈ ವೇಳೆ ರೈಲ್ವೆ ಮೇಲ್ಸೇತುವೆ (ಫ್ಲೈ ಓವರ್) ಹತ್ತಿಕೊಂಡು ಹೋಗುವುದು ದೂರ ಮತ್ತು ತಡವಾಗುತ್ತದೆ ಆಗುತ್ತದೆ ಎಂದು ಅಯೋಧ್ಯ ರೈಲನ್ನು ಹತ್ತಿ ಇನ್ನೊಂದು ಪ್ಲಾಟ್‌ಫಾರಂಗೆ ಇಳಿಯಬೇಕಿತ್ತು. ಆದರೆ, ರೈಲ್ವೆ ಇಲಾಖೆ ನೌಕರ ತಲೆಗೆ ಮುಸ್ಲಿಂ ಟೊಪ್ಪಿಗೆ ಧರಿಸಿದ್ದರಿಂದ ಶ್ರೀರಾಮನ ಭಕ್ತರು ನೀವು ಎಲ್ಲಿಗೆ ಹೋಗಬೇಕು? ನಾವು ಇಡೀ ಭೋಗಿಯನ್ನು ಬುಕ್ ಮಾಡಿದ್ದೇವೆ ಇಲ್ಲಿ ಹತ್ತಬೇಡಿ ಎಂದಿದ್ದಾರೆ. ಈ ವೇಳೆ ನೌಕರ ಹಾಗೂ ಪ್ರಯಾಣಿಕರ ನಡುವೆ ಗಲಾಟೆ ನಡೆದಿದೆ.

ಮಲ್ಲೇಶ್ವರ, ಕೆಂಗೇರಿ, ಮಂಡ್ಯ ಸೇರಿ 15 ರೈಲ್ವೆ ನಿಲ್ದಾಣಗಳಿಗೆ ಸ್ಮಾರ್ಟ್‌ ಟಚ್; 372.13 ಕೋಟಿ ವೆಚ್ಚ ಮೀಸಲು

ಆಗ ಪುನಃ ನೌಕರ ಅಯೋಧ್ಯೆ ರೈಲಿನ ಮೂಲಕ ಮೂರನೇ ಪ್ಲಾಟ್ ಫಾರಂ ಹೋಗಲು ಯತ್ನ ಮಾಡಿದ್ದಾನೆ. ಒಳ ಹೋಗಲು ಬಿಡದ ಹಿನ್ನಲೆಯಲ್ಲಿ ನೌಕರ ಸಿಟ್ಟಿಗೆದ್ದು, ನೀವು ಹೋಗುವ ರೈಲಿಗೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಸ್ಥಳಕ್ಕೆ ಬಂದ ಪೊಲೀಸರು ರೈಲ್ವೆ ಸಿಬ್ಬಂದಿಯೇ ಆಗಿದ್ದರಿಂದ ಆತನನ್ನು ಹುಬ್ಬಳ್ಳಿ ರೈಲಿಗೆ ಹತ್ತಿಸಿ ಕಳುಹಿಸಿದ್ದಾರೆ. ಅನ್ಯ ಕೋಮಿನ ವ್ಯಕ್ತಿ ರೈಲಿಗೆ ಬೆಂಕಿ ಹಚ್ಚುವುದಾಗಿ ಹೇಳಿ ಹೋದ ನಂತರ, ಪ್ರಯಾಣಿಕರಿಂದ ತೀವ್ರ ಪ್ರತಿಭಟನೆ ನಡೆದಿದೆ. ಇದರಿಂದ ರೈಲು ಪ್ರಯಾಣ ಸುಮಾರು 2 ಗಂಟೆಗಳ ಕಾಲ ವಿಳಂಬವಾಗಿದೆ.

click me!