
ಬೆಂಗಳೂರು(ಜು.05): ಬಡವರಿಗಾಗಿ ರೂಪಿಸಲಾಗಿರುವ 'ಅನ್ನಭಾಗ್ಯ' ನೆಯ ಅಕ್ಕಿಯನ್ನು ಹೋಟೆಲ್‌ಗಳಿಗೆ ಮಾರುವ ಅಯೋಗ್ಯರ ವಿರುದ್ಧ ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಮೌಖಿಕವಾಗಿ ಸೂಚಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯ ಮೂರ್ತಿ ವಿ.ಶ್ರೀಷಾನಂದ ಅವರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮ ವಾಗಿ ಹೋಟೆಲ್‌ಗಳಿಗೆ ಮಾರಾಟ ಮಾಡುವ ಮಾಫಿಯಾ ಬಗ್ಗೆ ತೀವ್ರವಾಗಿ ಕಿಡಿಕಾರಿದರು.
ಅಕ್ಕಿ ಕಳ್ಳಸಾಗಣೆ ಮಾಡುವ ಡಾನ್‌ಗಳನ್ನು ರಾಜಕಾರಣಿ ಗಳು ರಕ್ಷಿಸಲು ಮುಂದಾಗುತ್ತಾರೆ. ಅಂತಹ ಅಯೋಗ್ಯರ ಬೆನ್ನಿಗೆ ನಿಲ್ಲುತ್ತಾರೆ. ಕಾನೂನನ್ನು ಎಷ್ಟೇ ಕಠಿಣಗೊಳಿಸಿದರೂ ಕಳ್ಳಸಾಗಣೆದಾರರು, ನಿನ್ನ ಮೊಣಕೈಗೆ ಹತ್ತಿರುವ ಜೇನು ಯೋಜನೆ ನ್ಯಾಯಪೀಠ, ತುಪ್ಪವನ್ನು ನಾನು ನೆಕ್ಕುತ್ತೇನೆ, ನನ್ನ ಮೊಣಕೈಗೆ ಮೆತ್ತಿರುವ ಜೇನುತುಪ್ಪವನ್ನು ನೀನು ನೆಕ್ಕು ಎಂಬಂತಹ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದರು.
ಲೈಂಗಿಕ ಸಂಪರ್ಕಕ್ಕೆ ನಿರಾಸಕ್ತಿ ಎಂದು ಗಂಡನ ವಿರುದ್ಧ ಸುಳ್ಳು ಮಾಹಿತಿ: ಪತ್ನಿ ಮೇಲೆ ಕ್ರಮಕ್ಕೆ ಹೈಕೋರ್ಟ್ ಅಸ್ತು..!
ಯಾರೋ ಕೆಲವು ಅದೃಷ್ಟವಂತರು ತಮ್ಮ ತಂದೆ-ತಾತ ಮಾಡಿದ ಪುಣ್ಯದಿಂದ ಇವತ್ತು ಸಮಾಜದಲ್ಲಿ ಉತ್ತಮ ಸ್ಥಾನಮಾನ ಅನುಭವಿ ಸುತ್ತಾ ಇದ್ದಾರೆ. ಬಡವರಿಗೆ ಅಂತಹ ಭಾಗ್ಯ ಇರುವುದಿಲ್ಲ. ಅನ್ನಭಾಗ್ಯದಲ್ಲಿ ಜನರ ದುಡ್ಡು ಅಡಗಿರುತ್ತದೆ. ಸರ್ಕಾರ ಅದಕ್ಕೆ ಸಬ್ಸಿಡಿ ನೀಡುವ ಮೂಲಕ ಬಡವರ ಉದ್ಧಾರಕ್ಕೆ ಎಂದು ಯೋಜನೆ ಜಾರಿ ಗೊಳಿಸಿರುತ್ತದೆ. ಅನ್ನಭಾಗ್ಯದಂತಹ ಜನಪರ ಯೋಜನೆ ನಿಜವಾದ ಬಡವರಿಗೆ ತಲುಪಬೇಕು. ಅನ್ಯಭಾಗ್ಯ ಯೋಜನೆ ಅಕ್ಕಿಯ ಕಳ್ಳಸಾಗಣೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ