
ಬೆಂಗಳೂರು (ಆ.17) : ನಗರದಲ್ಲಿ ದಿನೇದಿನೆ ವ್ಹೀಲಿಂಗ್ ಹಾವಳಿ ಹೆಚ್ಚುತ್ತಲೇ ಇದೆ. ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದ ಪುಂಡರು ಪ್ರತಿನಿತ್ಯ ಒಂದಿಲ್ಲೊಂದು ನಗರ, ಫ್ಲೈಓವರ್ ಮೇಲೆ ವೀಲಿಂಗ್ ಮಾಡಿ ಸುದ್ದಿಯಾಗುತ್ತಲೇ ಇದ್ದಾರೆ. ಪುಂಡರ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧರು, ವಾಹನ ಸವಾರು ಪ್ರಾಣ ಕಳೆದುಕೊಂಡ ಘಟನೆ ನಡೆದಿವೆ. ಆದರೂ ವ್ಹೀಲಿಂಗ್ ಮಾಡುವುದು ಬಿಡದ ಪುಂಡರು. ಇದರಿಂದ ಸಾರ್ವಜನಿಕರೇ ರೋಸಿಹೋಗಿದ್ದು. ಬೆಂಗಳೂರಿನ ಹೊರವಲಯದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಯಾರು ಏನ್ ಮಾಡ್ತಾರೆ ಅಂತಾ ವ್ಹೀಲಿಂಗ್ ಮಾಡುವ ಪುಂಡರೇ ಇನ್ನು ಎಚ್ಚರಿಕೆಯಿಂದ ಇರಿ. ಇನ್ಮುಂದೆ ವ್ಹೀಲಿಂಗ್ ಹುಚ್ಚಾಟ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕರೆ ಪುಡಿಪುಡಿಯಾಗುತ್ತೆ ನಿಮ್ಮ ಬಾಡಿ ಮತ್ತು ಬೈಕ್. ಇನ್ನೆಷ್ಟು ದಿನ ಪುಂಡರ ಹುಚ್ಚಾಟ ಸಹಿಸಿಕೊಳ್ಳೋದು, ಇನ್ನೆಷ್ಟು ಜೀವಗಳು ಬಲಿಯಾಗಬೇಕು? ರೊಚ್ಚಿಗೆದ್ದ ಸಾರ್ವಜನಿಕರು ವ್ಹೀಲಿಂಗ್ ಮಾಡುತ್ತಿದ್ದವನ ಬೈಕ್ ಅನ್ನೇ ಫ್ಲೈಓವರ್ ಮೇಲಿಂದ ಕೆಳಗೆ ಎಸೆದು ನುಜ್ಜುಗುಜ್ಜು ಮಾಡಿದ್ದಾರೆ. ಇನ್ನೊಮ್ಮೆ ವೀಲಿಂಗ್ ಮಾಡಲು ಬೈಕ್ ಇಲ್ಲದಂತೆ ಮಾಡು ಸಾರ್ವಜನಿಕರು ಬುದ್ಧಿ ಕಲಿಸಿದ್ದಾರೆ.
ಬೆಂಗಳೂರಿನ ಹೊರವಲಯದ ನೆಲಮಂಗಲದ ಫ್ಲೈಓವರ್ ಮೇಲೆ ವೇಗವಾಗಿ ಬೈಕ್ ಓಡಿಸಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡ. ಇದರಿಂದ ಅಕ್ಕಪಕ್ಕದ ವಾಹನ ಸವಾರರಿಗೂ ತೊಂದರೆ ಕೊಡುತ್ತಿದ್ದ. ಸ್ವಲ್ಪ ಯಾಮಾರಿದರು ವಾಹನ ಸವಾರರು ಪ್ರಾಣ ಕಳೆದುಕೊಳ್ಳಬೇಕು ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು. ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡನನ್ನು ಹಿಡಿದು ಗೂಸಾ ಕೊಟ್ಟಿದ್ದಾರೆ. ಬಳಿಕ ಫ್ಲೈ ಓವರ್ ಮೇಲಿಂದಲೇ ಪುಂಡನ ಬೈಕ್ ಎತ್ತಿ ಬಿಸಾಕಿದ್ದಾರೆ.
ಫ್ಲೈಓವರ್ ಮೇಲಿಂದ ವಾಹನ ಸವಾರರು ಬೈಕ್ ಎತ್ತಿ ಬಿಸಾಕುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ