
ಬೆಂಗಳೂರು (ಮೇ.6): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Police Sub Inspector) ನೇಮಕಾತಿ ಪರೀಕ್ಷೆಯಲ್ಲಿ (recruitment Exam) ರಾರಯಂಕ್ ಪಡೆದು ಆಯ್ಕೆಯಾಗಿದ್ದ ಒಂದೇ ಊರಿನ ಮೂವರು ಅಭ್ಯರ್ಥಿಗಳು, ಈಗ ಪರೀಕ್ಷಾ ಅಕ್ರಮ ಆರೋಪದಡಿ ಆರೋಪಿಗಳಾಗಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರು (Bengaluru) ಹೊರವಲಯದ ಕಗ್ಗಲಿಪುರ (Kaggalipura) ಸಮೀಪದ ಚಿನ್ನಕುರ್ತಿ ಗ್ರಾಮದ ಸಿ.ಜಿ.ರಾಘವೇಂದ್ರ, ಸಿ.ಎಂ.ನಾಗರಾಜ್ ಹಾಗೂ ಆತನ ಸೋದರ ಸಿ.ಎಂ.ನಾರಾಯಣ ವಿರುದ್ಧ ಪರೀಕ್ಷಾ ಆರೋಪ ಕೇಳಿ ಬಂದಿದ್ದು, ಈ ಮೂವರ ಪೈಕಿ ರಾಘವೇಂದ್ರ ಹಾಗೂ ನಾಗರಾಜ ಸಿಐಡಿಗೆ ಸೆರೆ ಸಿಕ್ಕಿದ್ದಾರೆ. ತಪ್ಪಿಸಿಕೊಂಡಿರುವ ನಾರಾಯಣ ಪತ್ತೆಗೆ ತನಿಖೆ ನಡೆದಿದೆ.
ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಈ ಮೂವರು ಪರೀಕ್ಷೆ ಬರೆದಿದ್ದರು. ಇದರಲ್ಲಿ ಸಾಮಾನ್ಯ ವರ್ಗದಲ್ಲಿ ರಾಜ್ಯಕ್ಕೆ 9ನೇ ರಾರಯಂಕ್ ( ಅಂಕಗಳು 157.5) ಸಿ.ಎಂ. ನಾರಾಯಣ, 11ನೇ ರಾರಯಂಕ್ (ಅಂಕಗಳು 157) ಆತನ ಅಣ್ಣ ಸಿ.ಎಂ.ನಾಗರಾಜ್ ಹಾಗೂ ರಾಘವೇಂದ್ರ 62ನೇ ರಾರಯಂಕ್ (ಅಂಕಗಳು 144) ಪಡೆದಿದ್ದರು. ಅಲ್ಲದೆ ಈ ಮೂವರು ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕಗಳಿಸಿದ್ದರು, ಎರಡನೇ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಿಐಡಿ (CID) ಅಧಿಕಾರಿಗಳು ಹೇಳಿದ್ದಾರೆ.
ನಾರಾಯಣನಿಗೆ ಮೊದಲ ಪತ್ರಿಕೆಯಲ್ಲಿ 24, ಎರಡನೇ ಪತ್ರಿಕೆಯಲ್ಲಿ 133.5 ಅಂಕಗಳು, ನಾಗರಾಜ್‌ಗೆ ಮೊದಲ ಪತ್ರಿಕೆಯಲ್ಲಿ 31 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕಗಳು ಹಾಗೂ ರಾಘವೇಂದ್ರನಿಗೆ ಮೊದಲ ಪತ್ರಿಕೆಯಲ್ಲಿ 18 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕಗಳು ಬಂದಿದ್ದವು. ಒಂದೇ ಗ್ರಾಮದ ಮೂವರು ಆಯ್ಕೆ ಅಚ್ಚರಿಯಾಗಿತ್ತು. ಈಗ ಅವರ ನಿಜ ಬಣ್ಣ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಡಿಜಿಪಿ ಪಿಎ, ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿಚಾರಣೆ
ಬೆಂಗಳೂರು (ಮೇ.6): ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಪ್ತ ಸಹಾಯಕ ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಸಿಐಡಿ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ. ಎಡಿಜಿಪಿ ಅಮೃತ್ ಪಾಲ್ ಅವರ ಆಪ್ತ ಸಹಾಯಕರು ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭದ ದಿನದಿಂದಲೂ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಪ್ತ ಸಹಾಯಕನನನ್ನು ಸಿಐಡಿ ವಿಚಾರಣೆ ನಡೆಸಿದೆ. ಅದೇ ರೀತಿ ಪರೀಕ್ಷೆ ನಿರ್ವಹಣೆ ಹೊತ್ತಿದ್ದ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಸಹ ತನಿಖೆ ಬಿಸಿ ತಟ್ಟಿದೆ ಎಂದು ಗೊತ್ತಾಗಿದೆ.
ನಾಲ್ವರು ಅಭ್ಯರ್ಥಿಗಳ ಜತೆಗೆ ಸಿಪಿಐ .2 ಕೋಟಿ ಡೀಲ್
ಕಲಬುರಗಿ (ಮೇ. 6): ಪಿಎಸ್‌ಐ ಪರೀಕ್ಷೆ ಅಕ್ರಮದ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಬಂಧಿತ ಸಿಪಿಐ ಆನಂದ ಮೇತ್ರೆ ಹಾಗೂ ಕಿಂಗ್‌ಪಿನ್ ಆರ್.ಡಿ. ಪಾಟೀಲ ನಡುವೆ .2 ಕೋಟಿ ಡೀಲ್ ನಡೆದಿತ್ತು. ಒಪ್ಪಂದದಂತೆ ಆರ್.ಡಿ. ಪಾಟೀಲಗೆ ಮೇತ್ರಿ .25 ಲಕ್ಷ ನೀಡೋದು ಬಾಕಿ ಇತ್ತು, ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಕೂಡ ಬೆಳೆದಿತ್ತು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಅಧಿಕೃತವಾಗಿ ಆರ್ಡರ್ ಕಾಪಿ ಮೊದಲೇ PSI ಡ್ರೆಸ್ ಧರಿಸಿ ಭಾಷಣ ಮಾಡಿದ್ದ ಕಾನ್ಸ್ಟೇಬಲ್ ಸಸ್ಪೆಂಡ್!
ಕಲಬುರಗಿಯ ಪ್ರಭಾವಿ ಬಿಜೆಪಿ ನಾಯಕನೊಬ್ಬ ನಾಲ್ವರು ಅಭ್ಯರ್ಥಿಗಳನ್ನು ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆಗೆ ಪರಿಚಯಿಸಿಕೊಟ್ಟಿದ್ದರು. ಈ ನಾಲ್ವರು ಅಭ್ಯರ್ಥಿಗಳನ್ನು ಪಿಎಸ್‌ಐ ಆಗಿ ನೇಮಕ ಮಾಡಲು ಸಲುವಾಗಿ ಆರ್.ಡಿ.ಪಾಟೀಲನ ಜತೆಗೆ ಮೇತ್ರೆ ಡೀಲ್ ಕುದುರಿಸಿದ್ದ. ಅದರಂತೆ ಅಭ್ಯರ್ಥಿಗಳಿಂದ 2 ಕೋಟಿ ಪಡೆಯಲಾಗಿದ್ದು, ಅದರಲ್ಲಿ ಆರ್.ಡಿ.ಪಾಟೀಲನಿಗೆ 1 ಕೋಟಿ ಕೊಡಬೇಕಿತ್ತು.
ಪಿಎಸ್‌ಐ ನೇಮಕಾತಿ ಹಗರಣ: ಪುರುಷ ವೇಷಭೂಷಣದಲ್ಲಿರುತ್ತಿದ್ದ ಫಸ್ಟ್ ರ‍್ಯಾಂಕ್ ಅಭ್ಯರ್ಥಿ ರಚನಾ ನಾಪತ್ತೆ!
ಡೀಲ್ ಆದ ಅಭ್ಯರ್ಥಿಗಳಿಗೆಲ್ಲರಿಗೂ ಬ್ಲೂಟೂತ್ ಮೂಲಕ ಉತ್ತರ ಪೂರೈಕೆಯಾಗಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅವರೆಲ್ಲರ ಹೆಸರೂ ಪ್ರಕಟವಾಗಿತ್ತು. ಒಪ್ಪಂದದಂತೆ ಪಟ್ಟಿಪ್ರಕಟವಾದ ಮಾರನೇ ದಿನವೇ ಆರ್.ಡಿ.ಪಾಟೀಲ್ಗೆ .1 ಕೋಟಿ ಬದಲು ಕೇವಲ .75 ಲಕ್ಷ ನೀಡಲಾಗಿತ್ತು. ಈ ವಿಚಾರವಾಗಿ ಆರ್.ಡಿ.ಪಾಟೀಲ ಮತ್ತು ಮೇತ್ರಿ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ