: ಹಾಸನ ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಂತ್ರಸ್ತೆಯನ್ನ ಹೆಚ್‌ಡಿ ರೇವಣ್ಣ ಅಪಹರಿಸಿದ್ದಾರೆಂದು ಆರೋಪಿಸಲಾಗಿತ್ತು. ಆದರೆ ಪ್ರಕರಣದ ಸಂತ್ರಸ್ತೆ ಮಹಿಳೆಯದ್ದು ಎನ್ನಲಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ
ಹಾಸನ (ಮೇ.12): ಹಾಸನ ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಂತ್ರಸ್ತೆಯನ್ನ ಹೆಚ್‌ಡಿ ರೇವಣ್ಣ ಅಪಹರಿಸಿದ್ದಾರೆಂದು ಆರೋಪಿಸಲಾಗಿತ್ತು. ಆದರೆ ಪ್ರಕರಣದ ಸಂತ್ರಸ್ತೆ ಮಹಿಳೆಯದ್ದು ಎನ್ನಲಾದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ "ನನ್ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ನಾನು ನಮ್ಮ ಊರಿಗೆ ನಾಲ್ಕು ದಿನ ಕಳೆದು ಬರಲು ಊರಿಗೆ ಹೋಗಿದ್ದೆ. ಆದರೆ ಊರಿಗೆ ಬರುವುದರೊಳಗೆ ಏನೇನೋ ವಿಡಿಯೋ ಮಾಡಿದ್ದಾರೆ' ಎಂದು ಹೇಳಿದ್ದಾಳೆ.
ಸುಮಾರು 2 ನಿಮಿಷ 32 ಸೆಕೆಂಡ್ ಇರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹೇಳಿದ್ದೇನೆಂದರೆ, ನಮ್ಮ ಊರಿನ ಜನರು ಏನೇನೋ ಮಾತನಾಡೋದನ್ನ ಕೇಳಿ ಬೇಸರವಾಗಿ ನೆಂಟರ ಮನೆಗೆ ಬಂದಿದ್ದೆ. ಆದರೆ ಇಂದು ಟಿವಿ ನೋಡಿದಾಗ ಗೊತ್ತಾಯ್ತು. ಈ ರೀತಿ ಮಾಡಿದ್ದಾರೆಂದು. ಯಾಕಪ್ಪ ಹೀಗೆ ಮಾಡಿದ್ರು ಎಂದು ಯೋಚನೆ ಬಂತು. ಆದರೆ ನನಗೆ ಯಾವುದೇ ತೊಂದರೆ ಆಗಿಲ್ಲ, ಯಾರೂ ಅಪಹರಿಸಿಲ್ಲ. ಯಾಕೆ ಈ ರೀತಿ ಮಾಡ್ತಾ ಮಾಡ್ತಿದ್ದಾರೆ. ನಮಗೆ ಭವಾನಿ ಅಕ್ಕಾ ಆಗಲಿ, ರೇವಣ್ಣ, ಪ್ರಜ್ವಲ್, ಬಾಬಾಣ್ಣ ಅವರಿಂದ ಯಾವುದೇ ತೊಂದರೆ ಆಗಿಲ್ಲ. ನಮ್ಮನ್ನು ಚೆನ್ನಾಗಿ ನೋಡಿಕೊಂಡು ಕಳಿಸಿದ್ದಾರೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಮತ್ತೊಂದು ತಿರುವು! ಶಾಸಕ ಎ ಮಂಜು ಕೈವಾಡ?
ಮೊಬೈಲ್ ಆಗಲಿ, ಅದಕ್ಕೂ(ಸೆಕ್ಸ್ ವಿಡಿಯೋ ಹಗರಣ) ನಮಗು ಯಾವುದೇ ಸಂಬಂಧ ಇಲ್ಲ. ನಮಗೆ ಯಾವುದಕ್ಕೂ ಅವರು ತೊಂದರೆ ಕೊಟ್ಟಿಲ್ಲ, ಯಾವ ಕಿಡ್ನಾಪ್ ಮಾಡಿಲ್ಲ. ನನ್ನ ಮಗನೇ ಭಯ ಪಡಬೇಡಾ ಏನೂ ಆಗಿಲ್ಲ. ಇನ್ನು ಎರಡು ದಿನದಲ್ಲಿ ಬರ್ತೇನೆ. ಯಾರು ಏನೇ ಅಂದರೂ ತಲೆಗೆ ಹಾಕೊ ಬೇಡಿ ಅರಾಮಾಗಿ ಇರಿ. ನಾನು ಸುರಕ್ಷಿತವಾಗಿ ಇದೀನಿ ಅವರಿಂದ ನಮಗೆ ತೊಂದರೆ ಆಗಿಲ್ಲ. ಬರ್ತೇನೆ ಎಲ್ಲಿ ಮಾಹಿತಿ ಕೊಡಬೇಕೊ ಕೊಡ್ತಿನಿ. ಆದರೆ ಪೊಲೀಸರನ್ನ ಕಳಿಸಿ ಮನೆ ಬಳಿ ಟಾರ್ಚರ್ ಕೊಡಬೇಡಿ. ಮಕ್ಕಳು ಮರಿ ಇರ್ತಾರೆ ಭಯಪಡುತ್ತಾರೆ, ಗಾಬರಿ ಆಗ್ತಾರೆ. ನಾವು ಕೂಲಿ ಮಾಡಿ ಜೀವನ ಸಾಗಿಸೋರು ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ. ಪೊಲೀಸರು ಬಂದು ಹೋಗ್ತಾ ಇದ್ದರೆ ಅಕ್ಕ ಪಕ್ಕದವರು ಏನಂದುಕೊಳ್ಳಲ್ಲ? ಕೂಲಿ ಮಾಡಿಕೊಂಡು ಇರೋರಿಗೆ ನೆಮ್ಮದಿಯಾಗಿ ಇರಲು ಬಿಡಿ. ನನಗೆ ಯಾರಿಂದ ತೊಂದರೆ ಆಗಿಲ್ಲ , ತೊಂದರೆ ಆಗಿದ್ದರೆ ನಾನೇ ಬಂದು ಹೇಳ್ತೇನೆ. ನನಗೆ ಏನೂ ತೊಂದರೆ ಇಲ್ಲ, ನೀವು ತೊಂದರೆ ಕೊಟ್ಟರೆ ನನಗೆ ಹಾಗು ಗಂಡನಿಗೆ ಏನಾದ್ರು ಆದರೆ ನೀವೇ ಜವಾಬ್ದಾರಿ ಆಗಬೇಕಾಗುತ್ತೆ. ನೀವೇ ಹೊಣೆ, ಹೊಣೆ ಆಗೋದಾದರೆ ಮನೆ ಹತ್ರ ಬನ್ನಿ ಎಂದು ಪೊಲೀಸರ ವಿರುದ್ಧ ಹರಿಹಾಯ್ದಿರುವ ಮಹಿಳೆ.