ಕಳೆದ 20 ದಿನಗಳ ಹಿಂದೆ ಆರು ಮಂದಿ ನಕಲೀಯರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಸ್ವಾಗತವನ್ನು ಕೋರುವ ಜತೆಗೆ ತಕ್ಷಣಕ್ಕೆ ತಲಾ 3 ಲಕ್ಷ ರುಪಾಯಿ ಪ್ಯಾಕೇಜ್ ಸಹ ನೀಡಿತ್ತು. ಆದರೆ, ರವೀಂದ್ರ ಅವರನ್ನು ವಶಕ್ಕೆ ಪಡೆಯಬೇಕೆಂಬ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಬರಲು ಕಾರಣ ಏನು? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಆರ್.ತಾರಾನಾಥ್ ಅಟೋಕರ್
ಚಿಕ್ಕಮಗಳೂರು(ಜ.29): ಮಲೆನಾಡು ಮತ್ತು ಕರಾವಳಿ ನಕ್ಸಲ್ ಸಂಘಟನೆಯ ಕೊನೆಯ ವ್ಯಕ್ತಿ ರವೀಂದ್ರನನ್ನು ವಶಕ್ಕೆ ಪಡೆಯಬೇಕೆಂದು ತೆರೆಮರೆಯಲ್ಲಿ ಪೊಲೀಸ್ ಇಲಾಖೆ ಪ್ರಯತ್ನ ಮಾಡುತ್ತಿದೆ. ಈ ಬೆಳವಣಿಗೆ ರವೀಂದ್ರ ಅವರನ್ನು ಸಂಪರ್ಕಿಸಲು ತೊಡಕಾಗಿದೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಮುಖಂಡರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕಳೆದ 20 ದಿನಗಳ ಹಿಂದೆ ಆರು ಮಂದಿ ನಕಲೀಯರು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಸ್ವಾಗತವನ್ನು ಕೋರುವ ಜತೆಗೆ ತಕ್ಷಣಕ್ಕೆ ತಲಾ 3 ಲಕ್ಷ ರುಪಾಯಿ ಪ್ಯಾಕೇಜ್ ಸಹ ನೀಡಿತ್ತು. ಆದರೆ, ರವೀಂದ್ರ ಅವರನ್ನು ವಶಕ್ಕೆ ಪಡೆಯಬೇಕೆಂಬ ತೀರ್ಮಾನಕ್ಕೆ ಪೊಲೀಸ್ ಇಲಾಖೆ ಬರಲು ಕಾರಣ ಏನು? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಆರು ಮಂದಿ ನಕ್ಸಲರು ಡಿಎಆರ್ ಘಟಕದಲ್ಲಿ: ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ!
ಮಲೆನಾಡಿನ ದಾರಿಯಲ್ಲಿ ಪೊಲೀಸರು ಮಾರುವೇಷದಲ್ಲಿ ಓಡಾಡುತ್ತಿದ್ದಾರೆ. ಟೀ ಸ್ಟಾಲ್, ಗೂಡಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಲೆನಾಡಿನ ಕುಗ್ರಾಮಗಳಲ್ಲಿ ಅಪರಿಚಿತರು ಓಡಾಡುತ್ತಿರುವುದನ್ನು ಸ್ಥಳೀಯರು ತಕ್ಷಣವೇ ಗುರುತಿಸುತ್ತಾರೆ. ಆ ರೀತಿಯ ವ್ಯಕ್ತಿಗಳು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಂಡು ಬರುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ.
ರವೀಂದ್ರ ಎಸ್ಕೆಪ್:
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆ ಹೊಂಡ ಗ್ರಾಮದ ರವೀಂದ್ರ (32) ನಕ್ಸಲ್ ಸಂಘಟನೆಯ ಕೊನೆಯ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆತ ಸಮಾಜದ ಮುಖ್ಯವಾಹಿನಿಗೆ ಬಂದರೆ ಮಲೆನಾಡು ಹಾಗೂ ಕರಾವಳಿಯಲ್ಲಿನ ನಕ್ಸಲ್ ಸಂಘಟನೆ ಕೊನೆಯಾಗಲಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೂ ನಕ್ಸಲ್ ಪ್ಯಾಕೇಜ್ ನೀಡಬೇಕಾದೀತು: ಲೆಹರ್‌ಸಿಂಗ್
ಕರಾವಳಿ ತಂಡದಲ್ಲಿ ವಿಕ್ರಂಗೌಡ, ರವೀಂದ್ರ, ಕೆ. ವಸಂತ್, ಜಿಷಾ ಇದ್ದರು. ಮಲೆನಾಡಿನ ತಂಡದಲ್ಲಿ ಮುಂಡಗಾರು ಲತಾ, ವನಜಾಕ್ಷಿ, ಮಾರಪ್ಪ ಹಾಗೂ ಸುಂದರಿ ಇದ್ದರು. ಈ ಒಟ್ಟು 8 ಜನರ ಪೈಕಿ
ವಿಕ್ರಂಗೌಡ ಪೊಲೀಸರ ಗುಂಡೇಟಿಗೆ ಬಲಿಯಾದರು. ಇನ್ನು 6 ಮಂದಿ ಜ.8 ರಂದು ಶರಣಾಗತಿಯಾಗಿದ್ದಾರೆ. ಉಳಿದುಕೊಂಡಿರುವುದು ರವೀಂದ್ರ ಮಾತ್ರ. ಈಗ ವಿಕ್ರಂಗೌಡ, ರವೀಂದ್ರ, ಕೆ ವಸಂತ್ ಹಾಗೂ ಜಿಷಾ ಅವರು ಒಂದೆ ಕಡೆಯಲ್ಲಿ ಇದ್ದ ದಿನದಂದು ವಿಕ್ರಂಗೌಡ ಎನ್ ಕೌಂಟರ್ ಆಗಿದ್ದು, ಇದನ್ನು ಅತ್ಯಂತ ಸಮೀಪದಿಂದ ಕಣ್ಣಾರೆ ಕಂಡ ರವಿಂದ್ರ ಸ್ಥಳದಿಂದ ಎಸ್ಕೆಪ್ ಆಗಿ ಹೋದವರು ಇಂದಿಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಫೋನ್ ಬಳಕೆ ಇಲ್ಲ:
ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡರು ಯಾರೂ ಸಹ ಮೊಬೈಲ್ ಬಳಕೆ ಮಾಡುವುದಿಲ್ಲ, ಏನಾದರೂ ಹೇಳಬೇಕು, ಕೇಳ ಬೇಕೆಂದರೆ ಅತ್ಯಂತ ನಂಬಿಕಸ್ಥರನ್ನು ಸಂಪರ್ಕಿಸಿ ಪತ್ರದ ಮೂಲಕ ಮಾಹಿತಿಯನ್ನು ರವಾನೆ ಮಾಡುತ್ತಾರೆ. 6 ಮಂದಿ ನಕ್ಸಲಿಯರು ಶರಣಾಗಲು ಗೌರಮ್ಮ ಅವರನ್ನು ಸಂಪರ್ಕಿಸಿದ್ದರು. ಒಮ್ಮೆ ಸಂಪರ್ಕ ಕಡಿದು ಹೋದರೆ ಮತ್ತೆ ಭೇಟಿಯಾಗಬೇಕಾದರೆ ಕನಿಷ್ಠ 2-3 ತಿಂಗಳುಗಳಾಗಬಹುದು ಎನ್ನಲಾಗಿದೆ.