ಅರೇ ಇದೇನಿದು Namma metro ದಲ್ಲಿ ಪ್ರಯಾಣಿಕರ ಬದಲಿಗೆ ಮರಳಿನ ಚೀಲ! ಕಾರಣ ಇಲ್ಲಿದೆ

Published : Aug 14, 2023, 06:49 AM IST
ಅರೇ ಇದೇನಿದು Namma metro ದಲ್ಲಿ ಪ್ರಯಾಣಿಕರ ಬದಲಿಗೆ ಮರಳಿನ ಚೀಲ! ಕಾರಣ ಇಲ್ಲಿದೆ

ಸಾರಾಂಶ

  ಬೆನ್ನಿಗಾನಹಳ್ಳಿ ಬಳಿ ಹಾದುಹೋದ ಸೇಲಂ ರೈಲ್ವೆ ಮಾರ್ಗದ ಮೇಲೆ ಅಳವಡಿಸಲಾದ ‘ನಮ್ಮ ಮೆಟ್ರೋ’ ತೆರೆದ ವೆಬ್‌ ಗರ್ಡರ್‌ (ಒಡಬ್ಲ್ಯುಜಿ) ಸಾಮರ್ಥ್ಯ ಪರೀಕ್ಷಿಸಲು ಮೆಟ್ರೋ ರೈಲಿನಲ್ಲಿ ಮರಳಿನ ಚೀಲವಿಟ್ಟು ಚಾಲನೆ ಮಾಡಲಾಗುತ್ತಿದೆ.

ಬೆಂಗಳೂರು (ಆ.14) :  ಬೆನ್ನಿಗಾನಹಳ್ಳಿ ಬಳಿ ಹಾದುಹೋದ ಸೇಲಂ ರೈಲ್ವೆ ಮಾರ್ಗದ ಮೇಲೆ ಅಳವಡಿಸಲಾದ ‘ನಮ್ಮ ಮೆಟ್ರೋ’ ತೆರೆದ ವೆಬ್‌ ಗರ್ಡರ್‌ (ಒಡಬ್ಲ್ಯುಜಿ) ಸಾಮರ್ಥ್ಯ ಪರೀಕ್ಷಿಸಲು ಮೆಟ್ರೋ ರೈಲಿನಲ್ಲಿ ಮರಳಿನ ಚೀಲವಿಟ್ಟು ಚಾಲನೆ ಮಾಡಲಾಗುತ್ತಿದೆ.

ನಮ್ಮ ಮೆಟ್ರೋ(Namma metro)ದ ‘ನೇರಳೆ’ ಮಾರ್ಗದ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಮಾರ್ಗ(Baiyyappanahalli-KR Pura Road)ದ ನಡುವಿನ ಪ್ರಾಯೋಗಿಕ ಚಾಲನೆ ಮುಂದುವರಿದಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಷ್ಟುಒತ್ತಡ ಹಾಗೂ ತೂಕ ಹೊರಬಹುದು ಎಂಬುದನ್ನು ತಿಳಿದುಕೊಳ್ಳಲು ಮೊದಲ ಬಾರಿ ಪ್ರಾಯೋಗಿಕವಾಗಿ ರೈಲಿನ ಆರು ಬೋಗಿಗಳಲ್ಲಿ ಮರಳು ಚೀಲಗಳನ್ನಿಟ್ಟು (ಶೇಕಡ 100ರಷ್ಟುಪ್ರಯಾಣಿಕರು ಇರುವಷ್ಟುತೂಕ) ಎರಡು ಟ್ರ್ಯಾಕ್‌ನಲ್ಲಿ ಪರೀಕ್ಷೆ ಮಾಡಲಾಗಿದೆ.

Independence Day in Bengaluru: 77ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ

ಇದರಿಂದ ಗರ್ಡರ್‌ (ಸ್ಪಾ್ಯನ್‌) ಮೇಲಾಗುವ ಪರಿಣಾಮವೇನು? ಅಂತಾರಾಷ್ಟ್ರೀಯ ಗುಣಮಟ್ಟದ ಮಾರ್ಗಸೂಚಿ ಅನುಸಾರ ಸಂಚಾರದ ವೇಳೆ ಪ್ರಯಾಣಿಕರನ್ನು (ತೂಕವನ್ನು) ತಡೆದುಕೊಳ್ಳುವ ಧಾರಣ ಶಕ್ತಿ ಗರ್ಡರ್‌ಗೆ ಇದೆಯಾ? ಈ ವೇಳೆ ಗರ್ಡರ್‌ನಲ್ಲಿ ಕದಲುವಿಕೆ ಏನಾದರೂ ಉಂಟಾಗುತ್ತದೆಯೆ? ಎಂಬುದು ತಿಳಿದುಕೊಳ್ಳಲಾಗುತ್ತದೆ. ಮುಂದಿನ ಆ.19ರವರೆಗೆ ಈ ಪರೀಕ್ಷೆ ನಡೆಯಲಿದೆ. ಈ ವೇಳೆ ಗರ್ಡರ್‌ ಕೆಳಭಾಗದಲ್ಲಿ ರೈಲುಗಳು ಕೂಡ ಸಂಚರಿಸಿದ್ದು, ಹೇಳಿಕೊಳ್ಳುವ ಯಾವುದೇ ದೊಡ್ಡ ಮಟ್ಟದ ಸಮಸ್ಯೆಗಳು ಕಂಡಬಂದಿಲ್ಲ. ಆದರೂ ಸಣ್ಣಪುಟ್ಟನ್ಯೂನತೆಗಳನ್ನು ಹಾಗೂ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಬಿಎಂಆರ್‌ಸಿಎಲ್‌ ತಾಂತ್ರಿಕ ಎಂಜಿನಿಯರಿಂಗ್‌ ವಿಭಾಗದಿಂದ ಕ್ರಮ ವಹಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಕಳೆದ ಫೆಬ್ರವರಿಯಲ್ಲಿ ಈ ಓಪನ್‌ ವೆಬ್‌ ಗರ್ಡರ್‌ ಅಳವಡಿಸಲಾಗಿದೆ. ಇದೀಗ ಅದರ ಸಾಮರ್ಥ್ಯದ ಅಂತಿಮ ಪರೀಕ್ಷೆ ನಡೆದಿದೆ. 65 ಮೀಟರ್‌ ಉದ್ದ, 11.450 ಮೀಟರ್‌ ಅಗಲವಿರುವ ಇದು, 650 ಮೀಟರ್‌ ಎತ್ತರವಿದೆ ಹಾಗೂ ಒಟ್ಟಾರೆ 550 ಟನ್‌ ತೂಕವಿದೆ. ಇದರಲ್ಲಿ ಸ್ಪೀರಿಕಲ್‌ ಬೇರಿಂಗ್‌ ಮಾದರಿಯ ಬೇರಿಂಗನ್ನು ಅಳವಡಿಸಲಾಗಿದೆ. ಇನ್ನು, ಕೆಳಭಾಗದಲ್ಲಿ ರೈಲ್ವೆ ಸುಗಮ ಸಂಚಾರಕ್ಕಾಗಿ 8.45 ಮೀಟರ್‌ ಅಂತರ ಇಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್‌.ಪುರ, ಕೆಂಗೇರಿಯಲ್ಲಿ ಗರಿಷ್ಠ ವೇಗ ಪರೀಕ್ಷೆ ಬಾಕಿ

ಈ ವಾರವೂ ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಹಾಗೂ ಕೆಂಗೇರಿ- ಚಲ್ಲಘಟ್ಟಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದೆ. ಗರಿಷ್ಠ ವೇಗದ ಪರೀಕ್ಷೆ ಸೇರಿ ಇನ್ನೂ ಕೆಲ ತಪಾಸಣೆ ಬಾಕಿ ಇದೆ. ಆ.28ರವರೆಗೆ ಪ್ರಾಯೋಗಿಕ ಸಂಚಾರ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತಿಂಗಳಾಂತ್ಯಕ್ಕೆ ಮೆಟ್ರೋ ಸುರಕ್ಷತಾ ಆಯುಕ್ತರನ್ನು ತಪಾಸಣೆಗಾಗಿ ಆಹ್ವಾನಿಸುವ ಗುರಿಯಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚೌಹಾಣ್‌ ತಿಳಿಸಿದರು.

ಅಂತಿಮವಾಗಿ ಅವರು ಸೂಚಿಸುವ ಬದಲಾವಣೆಗಳನ್ನು ಮಾಡಿಕೊಂಡ ಬಳಿಕ ರಾಜ್ಯ ಸರ್ಕಾರಕ್ಕೆ ಈ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿಗೆ ಕೋರಿ ಪತ್ರ ಬರೆಯಲಾಗುವುದು. ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕ ನೇರಳೆ ಮಾರ್ಗದ ಸಂಪೂರ್ಣ 43 ಕಿ.ಮೀ. ಜನಸಂಚಾರಕ್ಕೆ ಮುಕ್ತವಾದಂತಾಗಲಿದೆ ಎಂದು ಬಿಎಂಆರ್‌ಸಿಎಲ್‌ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru: ಕೆಂಗೇರಿ-ಬೈಯಪ್ಪನಹಳ್ಳಿ, ಕೆಆರ್‌ಪುರ-ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ವ್ಯತ್ಯಯ

ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಮರಳಿನ ಚೀಲ ಇಟ್ಟು ಗರ್ಡರ್‌ ಮೇಲೆ ಮೆಟ್ರೋ ರೈಲನ್ನು ಚಾಲನೆ ಮಾಡಲಾಗಿದೆ. ಹೈಸ್ಪೀಡ್‌ ಟೆಸ್ಟ್‌ ಬಾಕಿಯಿದ್ದು, ತಿಂಗಳಾಂತ್ಯಕ್ಕೆ ಪ್ರಾಯೋಗಿಕ ತಪಾಸಣೆ ಮುಗಿಯಬಹುದು.

-ಯಶವಂತ್‌ ಚೌಹಾಣ್‌, ಬಿಎಂಆರ್‌ಸಿಎಲ್‌ ಸಿಪಿಆರ್‌ಒ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!