ಕೊರೊನಾ ವ್ಯಾಕ್ಸಿನೇಷನ್ ಅಂದ್ರೆ ಭಯ ಇದೆಯಾ..? ವ್ಯಾಕ್ಸಿನೇಷನ್ ಟ್ರಯಲ್‌ಗೆ ಒಳಗಾದವರ ಅನುಭವದ ಮಾತುಗಳಿವು.. ಇಲ್ಲಿ ಓದಿ
ಬೆಂಗಳೂರು(ಜ.05): ಸಾಯುವವರಿದ್ದರೆ ನಾಯಿ ಕಚ್ಚಿಯೂ ಸಾಯುತ್ತಾರೆ. ಕೊರೊನಾ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಭಯ ಬೇಡ ಎಂದು ವ್ಯಾಕ್ಸಿನೇಷನ್ ಟ್ರಯಲ್‌ಗೆ ಒಳಗಾದವರು ಹೇಳಿದ್ದಾರೆ.
ಈಗಾಗಲೇ ಕೊರೋನಾ ವಾಕ್ಸಿನೇಷನ್ ಬಗ್ಗೆ ಬಹಳಷ್ಟು ಜನರಲ್ಲಿ ಮಾಹಿತಿ ಕೊರತೆ, ಭಯ, ಗೊಂದಲಗಳಿರುವ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಪಡೆದಿದೆ. ಕೊರೊನಾಗಿಂತ ವ್ಯಾಕ್ಸಿನೇಷನ್ ಕೆಟ್ಟದಲ್ಲ ಎಂದು ವ್ಯಾಕ್ಸಿನೇಷನ್ ಟ್ರಯಲ್‌ಗೆ ಒಳಗಾದವರು ಅನುಭವದ ಹಂಚಿಕೊಂಡಿದ್ದಾರೆ.
undefined
ಗ್ರಾಪಂ ಚುನಾವಣಾ ವೈಷಮ್ಯಕ್ಕೆ ಗೆದ್ದ ಅಭ್ಯರ್ಥಿಯ ಸಂಬಂಧಿ ಬಲಿ
ವಾಕ್ಸಿನೇಷನ್‌ಗೆ ಒಳಗಾದ ಖಾಸಗಿ ಆಸ್ಪತ್ರೆ ಅಕೌಂಟೆಂಟ್ ಶರತ್ ಮಾತನಾಡಿದ್ದು, 28 ಅಕ್ಟೋಬರ್ 2020ರಲ್ಲಿ ಮೊದಲ ಡೋಸೇಜ್, ನವೆಂಬರ್ 27 ಎರಡನೇ ಡೋಸೇಜ್ ತೆಗೆದುಕೊಂಡೆವು. ಯಾವುದೇ ರೀತಿಯ ತೊಂದರೆ ಆಗಲಿಲ್ಲ ಎಂದಿದ್ದಾರೆ.
ಪ್ರತಿ ಡೋಸೇಜ್ ನಂತರ 7 ದಿನಗಳ ನಿಗಾ ಇತ್ತು. ಜ್ವರ, ಹೂತ, ವಾಂತಿ, ಭೇದಿ ಹೀಗೆ ಯಾವುದೇ ತೊಂದರೆ ಬಗ್ಗೆಯೂ ವಹಿಸಿದ್ದರು. ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಮೂರು ತಿಂಗಳಿಂದ ಸದಾ ನಿಗಾ ವಹಿಸುತ್ತಲೇ ಇದ್ದಾರೆ ಎಂದಿದ್ದಾರೆ.
ಬ್ರಿಟನ್ ರಿಟರ್ನ್ಡ್ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆ
ವ್ಯಾಕ್ಸಿನೇಷನ್ ಟ್ರಯಲ್ ನಲ್ಲಿ ನನಗೆ ಯಾವುದೇ ತೊಂದರೆ ಆಗಿಲ್ಲ. ಜನರು ಯಾವುದೇ ಭಯ ಇಲ್ಲದೆ ವ್ಯಾಕ್ಸಿನ್ ಪಡೆಯಬಹುದು ಎಂದು ಹೇಳಿರುವ ಶರತ್ ವ್ಯಾಕ್ಸಿನ್ ಕುರಿತು ಭಯಪಡುವಂತದ್ದೇನೂ ಇಲ್ಲ ಎಂದು ಹೇಳಿದ್ದಾರೆ.