ಬೆಂಗಳೂರಿನಲ್ಲಿ ಹೊಸ ವರ್ಷದ ಪಾರ್ಟಿ ಜೋರಾಗಿದೆ. ಆದರೆ ತಂದೆ ತಾಯಿ ಜೊತೆ ಪಾರ್ಟಿಗೆ ಬಂದ ಮಗು ಇದೀಗ ಒಂಟಿಯಾಗಿದೆ. ಪಾರ್ಟಿ ಮತ್ತಲ್ಲಿ ಪೋಷಕರು ಮಗುವನ್ನೇ ಮರೆತಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿ ಅಳುತ್ತಾ ನಿಂತಿದ್ದ ಮಗುವನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು(ಡಿ.31) ಹೊಸ ವರ್ಷ ಪಾರ್ಟಿಯಲ್ಲಿ ಬೆಂಗಳೂರು ದೇಶ ವಿದೇಶಗಳಲ್ಲೇ ಖ್ಯಾತಿ ಪಡೆದಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಹೊಸ ವರ್ಷದ ಪಾರ್ಟಿ ಬಲು ಜೋರು. ನಗರದ ಬಹುತೇಕರು ಪಾರ್ಟಿ ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಮಗುವಿನ ಜೊತೆ ಹೊಸ ವರ್ಷದ ಪಾರ್ಟಿಗೆ ಆಗಮಿಸಿದ ಪೋಷಕರು, ಪಾರ್ಟಿ ಮತ್ತಲ್ಲಿ ಮಗುವನ್ನೇ ಮರೆತ ಘಟನೆ ಕೋರಮಂಗಲದಲ್ಲಿ ನಡೆದಿದೆ. ಪಾರ್ಟಿ ನಶೆಯಲ್ಲಿ ಪೋಷಕರು ತಾವು ಮಗುವನ್ನು ಕೆರೆದುಕೊಂಡು ಬಂದಿದ್ದೇವೆ ಅನ್ನೋದು ಮರೆತಿದ್ದಾರೆ. ಪರಿಣಾಮ ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದ ಮಗುವನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋರಮಂಗಲದಲ್ಲಿ ಕುಟುಂಬ ಪಾರ್ಟಿಗೆ ಹಾಜರಾಗಿದೆ. ಆದರೆ ಪಾರ್ಟಿ ನಶೆಯಲ್ಲಿ ಪೋಷಕರು ಮಗುವನ್ನು ಮರೆತಿದ್ದರೆ. ರಸ್ತೆಯಲ್ಲಿ ಒಂಟಿಯಾಗಿ ಅಳುತ್ತಾ ನಿಂತಿದ್ದ ಮಗುವನ್ನು ಪೊಲೀಸರು ಗಮನಿಸಿದ್ದಾರೆ. ಮಗುವಿನ ಬಳಿ ಬಂದ ಪೊಲೀಸರು ವಿಚಾರಿಸಿದ್ದಾರೆ. ಭಯ ಹಾಗೂ ಆತಂಕದಿಂದ ಅಳುತ್ತಿದ್ದ ಮಗುವನ್ನು ಸಮಾಧಾನಿಸಿರುವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪುಟ್ಟ ಮಗು ಪೊಲೀಸರ ರಕ್ಷಣೆಯಲ್ಲಿದೆ.
ಇತ್ತ ಮಗುವಿನ ಪೋಷಕರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದೆ.ಮಗುವನ್ನು ಬಿಟ್ಟು ಹೋದ ಪೋಷಕರ ಪತ್ತೆ ಹಚ್ಚಲು ತ್ವರಿತ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಈ ಘಟನೆ ಹಲವರಿಗೆ ಅಚ್ಚರಿ ತಂದಿದೆ. ಮಗುವನ್ನು ಕೆರೆದುಕೊಂಡು ಬಂದು, ಪಾರ್ಟಿ ನಡುವೆ ಮರೆತು ಹೋದ ಪೋಷಕರು ಯಾರು ಅನ್ನೋ ಕುತೂಹಲ ಇದೀಗ ಹಲವರಲ್ಲಿ ಹುಟ್ಟಿದೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ: ಮಧ್ಯರಾತ್ರಿ 2ರವರೆಗೆ ಬಿಎಂಟಿಸಿ ಬಸ್, ಮೆಟ್ರೋ ಸೇವೆ ವಿಸ್ತರಣೆ
ಕೋರಮಂಗಲದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. 800 ಪೊಲೀಸರ ನಿಯೋಜಿಸಲಾಗಿದೆ. 180ಸಿಸಿ, ಲೋಕಲ್ ಸಿಸಿ ಸೇರಿದಂತೆ ಎಲ್ಲಾ 500 ಕ್ಯಾಮೆರಾ ಬಳಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಕೋರಮಂಗಲದ ಪಾರ್ಟಿ ನಡೆಯುವ ಭಾಗದಲ್ಲಿ ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ಇನ್ನು ಕೋರಮಂಗಲ ಪಬ್‌ಗಳಿಗೆ ಡಿಸಿಪಿ ಸಾರಾ ಫಾತಿಮಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಪಬ್‌ಗಳಲ್ಲಿ ಲೇಡಿ ಬೌನ್ಸರ್ ಇರಬೇಕು ಎಂದು ಸೂಚಿಸಿದ್ದಾರೆ. ಇಷ್ಟೇ ಅಲ್ಲ, ಪಬ್‌ಗೆ ನಿಗದಿಪಡಿಸಿರುವಷ್ಟೇ ಜನರಿಗೆ ಅವಕಾಶ ನೀಡಬೇಕು. ಹೆಚ್ಚುವರಿ ಜನ, ಬೇಡಿಕೆ ತಕ್ಕಂತೆ ಅವಕಾಶ ನೀಡುವಂತಿಲ್ಲ ಎಂದು ಸೂಚಿಸಲಾಗಿದೆ. ಇಂದು ರಾತ್ರಿ 2.30ರ ವರೆಗೆ ಮಾತ್ರ ಪಬ್‌ನಲ್ಲಿ ಜನರಿಗೆ ಅವಕಾಶ ನೀಡಬೇಕು. ರಾತ್ರಿ 3 ಗಂಟೆ ಒಳಗೆ ಎಲ್ಲವೂ ಬಂದ್ ಆಗಬೇಕು. ಯಾರೂ ಇರಬಾರದು ಎಂದು ಸೂಚಿಸಲಾಗಿದೆ.
ಸಿಸಿಟಿವಿ ಮಾನಿಟರಿಂಗ್ ಮಾಡಲು ಮಿನಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಹೆಚ್ಚುವರಿ ಲೈಟ್ ಬಳಸಿಕೊಳ್ಳಲಾಗಿದೆ. ಮಹಿಳೆಯರ ಸುರಕ್ಷತೆಗೆ 15 ಸೇಫ್ಟಿ ಐಲ್ಯಾಂಡ್, 15 ವಾಚ್ ಟವರ್ ಸ್ಥಾಪಿಸಲಾಗಿದೆ. 500ಕ್ಕಿಂತ ಹೆಚ್ಚು ಹೋಂಗಾರ್ಡ್, 700 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನು ಕೋರಮಂಗಲದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಮೂರು ಆ್ಯಂಬುಲೆನ್ಸ್, 2 ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಡೆಯುತ್ತಿದೆ. ಎಲ್ಲಾ ಕಡೆಗಳಲ್ಲಿ ಪೊಲೀಸರು ಬಿಗಿ ಭದ್ರತೆ ಮಾಡಿದ್ದಾರೆ. ಸಿಸಿಟಿವಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಭದ್ರತೆ ಕಲ್ಪಿಸಿದ್ದಾರೆ. ಮಹಿಳಾ ಪೊಲೀಸರು, ಹೆಚ್ಚುವರಿ ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಆಗಮಿಸುವವರನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಮದ್ಯ, ಸಿಗರೇಟು, ಗುಟ್ಕಾ ಸೇರಿದಂತೆ ಯಾವುದೇ ವಸ್ತುಗಳನ್ನು ತರುವಂತಿಲ್ಲ. ಪೊಲೀಸರು ಎಲ್ಲರ ಬ್ಯಾಗ್ ತಪಾಸಣೆ ನಡೆಸಿ ಒಳ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ.
ಬಾಬಾ ವಂಗಾ-ನಾಸ್ಟ್ರಡಾಮಸ್ ನುಡಿದ 2025ರ ಸ್ಫೋಟಕ ಭವಿಷ್ಯ, ಹೊಸ ವರ್ಷದಲ್ಲಿ ಏನೆಲ್ಲಾ ಕಾದಿದೆ?