Latest Videos

ಕೋಟಿ ಕಂಠ ಗಾಯನ, ಕಂಠೀರವ ಸ್ಟೇಡಿಯಂನಲ್ಲಿ 50 ಸಾವಿರ ಮಂದಿ ಗಾನ ಸುಧೆ

By Gowthami KFirst Published Oct 27, 2022, 5:35 PM IST
Highlights

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಅ. 28 ರಂದು ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ಕೋಟಿ ಕಂಠ ಗಾಯನ ವಿಶೇಷ ಕಾರ್ಯಕ್ರಮ ರಾಜ್ಯದ್ಯಂತ ನಡೆಸಲು ಯೋಚಿಸಿದೆ.  ಈ ಹಿನ್ನೆಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಕಂಠೀರವ ಸ್ಟೇಡಿಯಂ ಸಜ್ಜಾಗಿದೆ.

ಬೆಂಗಳೂರು (ಅ.27): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಅ. 28 ರಂದು ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ಕೋಟಿ ಕಂಠ ಗಾಯನ ವಿಶೇಷ ಕಾರ್ಯಕ್ರಮ ರಾಜ್ಯದ್ಯಂತ ನಡೆಸಲು ಯೋಚಿಸಿದೆ.  ಈ ಹಿನ್ನೆಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಕಂಠೀರವ ಸ್ಟೇಡಿಯಂ ಸಜ್ಜಾಗಿದೆ.  ನಾಳೆ ಬೆಳಗ್ಗೆ 11 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಲಿದ್ದು, ಕಂಠೀರವ ಸ್ಟೇಡಿಯಂನಲ್ಲಿ ಸುಮಾರು 50 ಸಾವಿರ ಮಂದಿ ಗಾನ ಸುಧೆ ಹರಿಸಲಿದ್ದಾರೆ. ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಕಳೆದ ನಾಲ್ಕೈದು ದಿನಗಳಿಂದ ತಯಾರಿ ನಡೆಸಲಾಗುತ್ತಿದೆ. ಸ್ಟೇಡಿಯಂನಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. 50 ಕ್ಕೂ ಹೆಚ್ಚು ಮೈಕ್ ಅಳವಡಿಸಲಾಗಿದೆ. ಸ್ಟೇಡಿಯಂ ಸುತ್ತಲೂ ಸ್ಪೀಕರ್, ಎಲ್ಇಡಿ ಅಳವಡಿಕೆ ಮಾಡಲಾಗಿದೆ. ಕಂಠೀರವ ಸ್ಟೇಡಿಯಂ ಮಾತ್ರವಲ್ಲದೇ, ವಿಧಾನಸೌಧ ಮೆಟ್ಟಿಲು, ಹೈಕೋರ್ಟ್, ಗಾಂಧಿ ಪ್ರತಿಮೆ, ಚಿತ್ರದುರ್ಗ ಕೋಟೆ, ಸಮುದ್ರ ತೀರ ಹೀಗೆ ಹಲವು ಕಡೆ ಕೋಟಿ ಕಂಠ ಗಾಯನ ನಡೆಯಲಿದೆ.  ಜಯಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ವಿಶ್ವವಿನೂತನ ವಿದ್ಯಾಚೇತನ, ಉದಯವಾಗಲೀ ನಮ್ಮ ಚೆಲುವ ಕನ್ನಡ ನಾಡು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಹಚ್ಚೇವು ಕನ್ನಡದ ದೀಪ ಈ ಆರು ಕನ್ನಡ ಹಾಡುಗಳನ್ಮ ಹಾಡಲಾಗತ್ತೆ.  ಈಗಾಗಲೇ 1.20 ಕೋಟಿ ಜನ ಕೋಟಿ ಕಂಠ ಗಾಯನಕ್ಕೆ ನೋಂದಾಯಿಸಿಕೊಂಡಿದ್ದಾರೆ. 25 ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡಿಗರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮುಖ್ಯ ಅತಿಥಿ ಯಾರು?: ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ವಿಶೇಷ ಮುಖ್ಯ ಅತಿಥಿಯಾಗಿ ಯಾರನ್ನು ಆಹ್ವಾನಿಸಬೇಕೆಂದು ಇನ್ನೂ ಸ್ಪಷ್ಟ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ. ಮೂರ್ನಾಲ್ಕು ಗಣ್ಯರನ್ನು ಸಂಪರ್ಕ ಮಾಡಿ, ಆಹ್ವಾನಿಸ್ತೇವೆ ಎಂದ ಮುಖ್ಯಮಂತ್ರಿಗಳು ರಂಜಿನಿಕಾಂತ ಕರೆಸುವ ವಿಚಾರಕ್ಕೆ ಅವರ ಸಮೀಪದಲ್ಲಿದ್ದೇವೆ ಎಂದು ಹೇಳಿ ಹೊರಟು ಹೋಗಿದ್ದಾರೆ.

ಕರ್ನಾಟಕದ ಎಲ್ಲ ಶಾಲೆಗಳಲ್ಲಿ 28ಕ್ಕೆ ‘ಕೋಟಿ ಕಂಠ ಗಾಯನ’

ಅ.30 ರಂದು ರಾಜ್ಯೋತ್ಸವ ಪಟ್ಟಿ ಪ್ರಕಟ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗಣ್ಯರ ಪಟ್ಟಿಯನ್ನು ಅ.30 ರಂದು ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಕೋಟಿ ಕಂಠಗಾಯನ ಕಾರ್ಯಕ್ರಮ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಾಡುತ್ತಿದ್ದೇವೆ. 1 ಕೋಟಿ 15 ಲಕ್ಷ ಜನ ಭಾಗಿ ಆಗಲಿದ್ದಾರೆ. ದೇಶದ ಇತಿಹಾಸದಲ್ಲಿ ಭಾಷೆಯ ವಿಚಾರದಲ್ಲಿ ಇಷ್ಟು ಜನ ಸೇರುತ್ತಿರೋದು ಮೊದಲು. ಕರ್ನಾಟಕದ ಹತ್ತು ಸಾವಿರ ಕಡೆ ಕಾರ್ಯಕ್ರಮ ನಡೆಯಲಿದೆ. 45 ದೇಶ, 26 ರಾಜ್ಯದಲ್ಲಿ ನೊಂದಣಿ ಆಗಿದೆ. ನೆಲ ಜಲ ಆಕಾಶ ಮೂರು ಕಡೆ ಕಾರ್ಯಕ್ರಮ ನಡೆಯಲಿದೆ. ಜೋಗ ಜಲಪಾತ, ಚಿತ್ರದುರ್ಗ ಕೋಟೆ, ರಾಯಚೂರು ಥರ್ಮಲ್ ಪ್ಲಾಂಟ್, ಪಾವಗಡ ಸೋಲಾರ್ ಪ್ಲಾಂಟ್ ,ವಿಧಾನಸೌಧ, ಸಮುದ್ರ, ವಿಮಾನದಲ್ಲಿ ಹಾಡು ಹಾಡುತ್ತಾರೆ. ಕಂಠೀರವ ಸ್ಟೇಡಿಯಂ ನಲ್ಲಿ ನಾಳೆ ಐವತ್ತು ಸಾವಿರ ಜನ ಸೇರುತ್ತಾರೆ.  ಕನ್ನಡ ಚಲನ ಚಿತ್ರದವರು ನಾಳೆ ಎಷ್ಟು ಜನ ಬರ್ತಾರೆ ನೋಡಬೇಕು.ನಾವು ಅವರಿಗೆ ಪತ್ರ ಬರೆದಿದ್ದೇವೆ ಎಂದು ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಕೋಟಿ ಕಂಠ ಗಾಯನಕ್ಕೆ ನಾಳೆ ಚಾಲನೆ: 1 ಕೋಟಿ ಮಂದಿ ನೋಂದಣಿ

ನಾಳೆ ವಿಧಾನಸೌಧದಲ್ಲಿ‌ ಕೋಟಿ ಕಂಠ ಗೀತಗಾಯನ ಕಾರ್ಯಕ್ರಮದ ಹಿನ್ನೆಲೆ, ವಿಧಾನಸೌಧದಲ್ಲಿ ಕಾರ್ಯ ನಿಋವಹಿಸುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ಹಾಜರಾತಿ ಕಡ್ಡಾಯ. ಕಡ್ಡಾಯವಾಗಿ ಹಾಜರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸೂಚನೆ ನೀಡಿದ ಸರ್ಕಾರ.

click me!