ವಿದ್ಯುತ್‌ ಬಿಲ್‌ ಪ್ರಿಪೇಯ್ಡ್‌ ಮೀಟರ್‌ ಬಗ್ಗೆ ಅಳವಡಿಕೆಯಾಗುತ್ತಾ.?

By Kannadaprabha NewsFirst Published Aug 24, 2021, 8:10 AM IST
Highlights
  •   ವಿದ್ಯುತ್‌ ಬಿಲ್‌ ಪ್ರಿಪೇಯ್ಡ್ ಮೀಟರ್‌ ವಿಚಾರ ಬಗ್ಗೆ ಇಲಾಖೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.
  •  ಸ್ಮಾರ್ಟ್‌ ಮೀಟರ್‌ ಮತ್ತು ಪ್ರಿಪೇಯ್ಡ್‌ ಮೀಟರ್‌ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಸಾಧಕ ಬಾಧಕ ಕುರಿತು ಯೋಚಿಸಿ ನಿರ್ಧರಿಸುತ್ತೇನೆ  

ಉಡುಪಿ (ಆ.24): ವಿದ್ಯುತ್‌ ಬಿಲ್‌ ಪ್ರಿಪೇಯ್ಡ್ ಮೀಟರ್‌ ವಿಚಾರ ಬಗ್ಗೆ ಇಲಾಖೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್‌ ಮೀಟರ್‌ ಮತ್ತು ಪ್ರಿಪೇಯ್ಡ್‌ ಮೀಟರ್‌ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಸಾಧಕ ಬಾಧಕ ಕುರಿತು ಯೋಚಿಸಿ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ಕೃಷಿ ಪಂಪ್‌ಸೆಟ್‌ಗೂ ಬರಲಿದೆ ಪ್ರಿಪೇಯ್ಡ್‌ ಮೀಟರ್‌

 ವಿದ್ಯುತ್‌ ಮಸೂದೆ-2021 ಪ್ರಕಾರ, ಕೃಷಿ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಮೀಟರ್‌ ಅಳವಡಿಕೆಯಾಗಲಿದೆ. ಅಷ್ಟೇ ಅಲ್ಲ, ಈವರೆಗೆ 10 ಎಚ್‌ಪಿ ಪಂಪ್‌ಸೆಟ್‌ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿದ್ದ ರೈತರೂ ಸೇರಿದಂತೆ ಎಲ್ಲರೂ ವಿದ್ಯುತ್‌ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಯ ನಂತರ ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು ಎನ್ನಲಾಗಿತ್ತು.

ಆದರೆ ಇದೀಗ ವಿದ್ಯುತ್‌ ಬಿಲ್‌ ಪ್ರಿಪೇಯ್ಡ್ ಮೀಟರ್‌ ವಿಚಾರ ಬಗ್ಗೆ ಇಲಾಖೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚವರು ಸ್ಪಷ್ಟಪಡಿಸಿದ್ದಾರೆ.

click me!