* ಹಣದ ಬೇಡಿಕೆ ಇಟ್ಟು, ಬ್ಲಾಕ್‌ಮೇಲ್ ಮಾಡಿದ ಆರೋಪ
* ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ
* ಗುರುವಾರವೂ ವಿಚಾರಣೆಗೆ ಹಾಜರಾಗದ ಜೀವರಾಜ್
ಚಿಕ್ಕಮಗಳೂರು(ಜೂ.19): ಪ್ರಕರಣವೊಂದರಲ್ಲಿ ಸಾಕ್ಷಿ ಹೇಳಲು ಪದೇ ಪದೇ ಗೈರು ಹಾಜರಾದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ವಿರುದ್ಧ ನರಸಿಂಹರಾಜಪುರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜಾಮೀನುರಹಿತ ವಾರಂಟ್ ಜಾರಿ ಮಾಡಿದೆ.
ತಮಗೆ ಹಣದ ಬೇಡಿಕೆ ಇಟ್ಟು, ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರ ಸಂಬಂಧಿ ಮನು ಎಂಬಾತನ ವಿರುದ್ಧ ಡಿ.ಎನ್.ಜೀವರಾಜ್ ದೂರು ನೀಡಿದ್ದರು. ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಿಂದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಬಳಿಕ 2020ರಿಂದಲೂ ಕೋರ್ಚ್‌ಗೆ ಜೀವರಾಜ್ ಗೈರುಹಾಜರಾಗಿದ್ದರು.
undefined
The Kashmir Files ಸಿನಿಮಾ ಉಚಿತ ಪ್ರದರ್ಶನ: ಜನರಿಗೆ ಫ್ರೀ ಶೋ ಏರ್ಪಡಿಸಿದ ಡಿ.ಎನ್.ಜೀವರಾಜ್!
ಗುರುವಾರವೂ ವಿಚಾರಣೆಗೆ ಬಂದಿರಲಿಲ್ಲ. ನ್ಯಾಯಾಧೀಶರು ಈ ಬಗ್ಗೆ ಪೊಲೀಸರನ್ನು ವಿಚಾರಿಸಿದಾಗ ಬೆಂಗಳೂರಿಗೆ ಹೋಗಿದ್ದರಿಂದ ಬಂದಿಲ್ಲ ಎಂದರು. ಇದನ್ನು ಒಪ್ಪದ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ.