ಇನ್ಮುಂದೆ ಐತಿಹಾಸಿಕ ಹಂಪಿಯ ಕಲ್ಲಿನ ತೇರಿನ ಮುಂದೆ ಸೆಲ್ಫಿ‌ ಕ್ಲಿಕ್ಕಿಸಲು ಆಗಲ್ಲ: ಕಾರಣವೇನು ಗೊತ್ತಾ?

By Kannadaprabha NewsFirst Published Jul 5, 2023, 8:03 AM IST
Highlights

ವಿಶ್ವವಿಖ್ಯಾತ ಹಂಪಿಯಲ್ಲಿ ಜು. 9ರಿಂದ 16ರ ವರೆಗೆ ಜಿ- 20 ಶೃಂಗಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಿದೆ. ಹಂಪಿಯ ಕಲ್ಲಿನತೇರಿನ ಸುತ್ತ ಕಟ್ಟಿಗೆಯ ರಕ್ಷಣಾ ಬೇಲಿ ನಿರ್ಮಾಣ ಮಾಡಲಾಗಿದೆ. 

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಜು.05): ವಿಶ್ವವಿಖ್ಯಾತ ಹಂಪಿಯಲ್ಲಿ ಜು. 9ರಿಂದ 16ರ ವರೆಗೆ ಜಿ- 20 ಶೃಂಗಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಿದೆ. ಹಂಪಿಯ ಕಲ್ಲಿನತೇರಿನ ಸುತ್ತ ಕಟ್ಟಿಗೆಯ ರಕ್ಷಣಾ ಬೇಲಿ ನಿರ್ಮಾಣ ಮಾಡಲಾಗಿದೆ. ವಿಜಯ ವಿಠ್ಠಲ ದೇವಾಲಯದ ಎದುರು ಇರುವ ಕಲ್ಲಿನತೇರು ಸ್ಮಾರಕವನ್ನು ಐದು ರು. ನೋಟಿನಲ್ಲಿ ಮುದ್ರಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಅದರ ಬಳಿ ತೆರಳಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ. ಹಾಗಾಗಿ ಕಲ್ಲಿನತೇರು ಸ್ಮಾರಕದ ಸಂರಕ್ಷಣೆಗೆ ಸಣ್ಣದೊಂದು ಬೇಲಿ ಹಾಕಲಾಗಿತ್ತು. ಇದಕ್ಕೂ ಪ್ರವಾಸಿಗರು ಜಗ್ಗದ್ದರಿಂದ ಈಗ ಕಟ್ಟಿಗೆಯ ರಕ್ಷಣಾ ಬೇಲಿ ನಿರ್ಮಿಸಲಾಗಿದೆ.

ಹಂಪಿಯ ಕಲ್ಲಿನತೇರು ಸ್ಮಾರಕದ ನೈಜತೆಗೂ ಧಕ್ಕೆಯಾಗದಂತೆ ಪುರಾತತ್ವ ಇಲಾಖೆಯ ಪರಿಣತ ಎಂಜಿನಿಯರ್‌ಗಳ ಸಲಹೆ ಮೇರೆಗೆ ಈ ಕಾರ್ಯವನ್ನು ಭಾರತೀಯ ಪುರಾತತ್ವ ಇಲಾಖೆ ಮಾಡಿದೆ. ಹಂಪಿಯ ಕಲ್ಲಿನ ತೇರಿನ ಸ್ಮಾರಕ ನಿರ್ಮಾಣ ಕಾಲಕ್ಕೆ ಗೋಪುರ ಕೂಡ ಹೊಂದಿತ್ತು. ವಿಷ್ಣು ದೇವಾಲಯದ ಎದುರು ಗರುಡವನ್ನು ಪ್ರತಿಷ್ಠಾಪಿಸುವುದು ಸಂಪ್ರದಾಯವಾಗಿದೆ. ಆದರೆ, ವಿಜಯ ವಿಠ್ಠಲ ದೇವಾಲಯದ ಎದುರು ಕಲ್ಲಿನತೇರು ಗರುಡ ರೂಪದಲ್ಲಿದೆ. ಈ ಸ್ಮಾರಕದ ವೀಕ್ಷಣೆಗೆ ದೇಶ-ವಿದೇಶಿ ಪ್ರವಾಸಿಗರು ಹಾತೊರೆಯುತ್ತಾರೆ. ಅದರಲ್ಲೂ ಐದು ರು. ನೋಟಿನಲ್ಲಿ ಕಲ್ಲಿನತೇರಿನ ಸ್ಮಾರಕ ಅಳವಡಿಕೆ ಮಾಡಿದ ಬಳಿಕ ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಪುರಾತತ್ವ ಇಲಾಖೆ ಈಗ ಕಟ್ಟಿಗೆಯ ರಕ್ಷಣಾ ಬೇಲಿ ನಿರ್ಮಾಣ ಮಾಡಿದೆ.

ಬಿಜೆಪಿ ಕಾಲದ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್‌ ಇಲ್ಲ?: ತಜ್ಞರುಗಳ ಅಭಿಪಾಯ ಪಡೆದು ಮುಂದಿನ ನಡೆ

ಸಪ್ತಸ್ವರ ಮಂಟಪಕ್ಕೆ ರಕ್ಷಣೆ: ವಿಜಯ ವಿಠ್ಠಲ ದೇವಾಲಯದ ಸಪ್ತಸ್ವರ ಮಂಟಪಕ್ಕೆ ರಕ್ಷಣೆಗಾಗಿ ಮೂರು ಕಂಬಗಳನ್ನು ಪುರಾತತ್ವ ಇಲಾಖೆ ಅಳವಡಿಸಿದೆ. ಕಳೆದ ಹದಿನೈದು ವರ್ಷಗಳಿಂದ ಈ ಮಂಟಪಕ್ಕೆ ರಕ್ಷಣಾ ಕಂಬಗಳನ್ನು ಅಳವಡಿಸುವ ಇರಾದೆಯನ್ನು ಪುರಾತತ್ವ ಇಲಾಖೆ ಹೊಂದಿತ್ತು. ಆದರೆ, ಇದುವರೆಗೆ ಕೈಗೂಡಿರಲಿಲ್ಲ. ವಿಜಯನಗರದ ಆಳರಸರ ಕಾಲದ ಸಪ್ತಸ್ವರ ಮಂಟಪ ಜೀರ್ಣೋದ್ಧಾರ ಮಾಡಿದರೂ ರಕ್ಷಣಾ ಕಂಬಗಳನ್ನು ಅಳವಡಿಕೆ ಮಾಡಿರಲಿಲ್ಲ. ಈಗ ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಸಪ್ತಸ್ವರ ಮಂಟಪಕ್ಕೆ ರಕ್ಷಣಾ ಕಂಬಗಳನ್ನು ಅಳವಡಿಸಿದೆ.

ಸ್ವಚ್ಛತೆಗೆ ಆದ್ಯತೆ: ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿಯ ತಳವಾರಘಟ್ಟದ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಇನ್ನೂ ಹಂಪಿಯಲ್ಲಿ ರಸ್ತೆಗಳಿಗೆ ಗ್ರ್ಯಾವೆಲ್‌ಗಳನ್ನು ಹಾಕಿ; ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ ಮತ್ತು ಸ್ಮಾರಕಗಳ ಬಳಿಯೂ ಸ್ವಚ್ಛತೆ ಮಾಡಲಾಗಿದೆ

ಪ್ರತಿಪಕ್ಷ ನಾಯಕ, ಅಧ್ಯಕ್ಷ ಬಿಜೆಪಿ ಕಸರತ್ತು: ಅಭಿಪ್ರಾಯ ಪಡೆದು ವೀಕ್ಷಕರು ದಿಲ್ಲಿಗೆ ವಾಪಸ್‌

ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಪುರಾತತ್ವ ಇಲಾಖೆಯಿಂದ ಪ್ರಮುಖ ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಕಲ್ಲಿನತೇರು ಮತ್ತು ಸಪ್ತಸ್ವರ ಮಂಟಪಗಳ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಪರಿಣತ ಎಂಜಿನಿಯರ್‌ಗಳ ಸಲಹೆ ಮೇರೆಗೆ ಹಂಪಿಯಲ್ಲಿ ಸಂರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ.
ನಿಹಿಲ್‌ದಾಸ್‌, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ, ಹಂಪಿ

click me!