ಗಣಿಗಾರಿಕೆ ಬಗ್ಗೆ ಸಚಿವ ನಿರಾಣಿ ಎಚ್ಚರಿಕೆ

By Kannadaprabha NewsFirst Published Jan 31, 2021, 7:04 AM IST
Highlights

ರಾಜ್ಯದಲ್ಲಿರುವ ಎಲ್ಲಾ ಗಣಿಗಾರಿಕೆಗಳನ್ನು ಸಕ್ರಮ ಮಾಡಲಾಗುವುದಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಹುಣಸೋಡು ಪ್ರಕರಣ ಬೆನ್ನಲ್ಲೇ ಎಲ್ಲಾ ಗಣಿಗಾರಿಕೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. 

ಬೆಳಗಾವಿ(ಜ.31):  ಶಿವಮೊಗ್ಗ ತಾಲೂಕಿನ ಹುಣಸೋಡಿನಲ್ಲಿ ಸ್ಫೋಟ ಪ್ರಕರಣ ಕುರಿತು ಲೀಗಲ್‌, ಇಲ್ಲೀಗಲ್‌ ಅಂತಿಲ್ಲ. ಎಲ್ಲಾ ಲೈಸೆನ್ಸ್‌ಗಳು ಲೀಗಲ್ ಇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಡೀಮ್‌್ಡ ಎಕ್ಸ್‌ಟೆನ್ಷನ್‌ ಅಂತಾ ಕೇಂದ್ರ ಸರ್ಕಾರ ಪರ್ಮಿಷನ್‌ ಕೊಟ್ಟಿದೆ. 

ಆದರೆ ಇಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಸಾಗಾಟವಾಗಿದೆ. ರಾಯಲ್ಟಿತುಂಬದೇ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಸ್ಯಾಟ್‌ಲೈಟ್‌ ಮೂಲಕ ಗೂಗಲ್ ಸರ್ವೇ ಮಾಡಿ ಪತ್ತೆ ಹಚ್ಚಿ ದಂಡ ವಿಧಿಸುತ್ತೇವೆ. ಎಲ್ಲಾ ಗಣಿಗಾರಿಕೆಗಳನ್ನು ಸಕ್ರಮ ಮಾಡುತ್ತಿಲ್ಲ. ಕಾನೂನು ಬದ್ಧವಾಗಿ ಗಣಿಗಾರಿಕೆಗಳನ್ನು ಸಕ್ರಮ ಮಾಡುತ್ತೇವೆ. ಶಿವಮೊಗ್ಗ ದುರಂತದಲ್ಲಿ ಮೃತಪಟ್ಟಆರು ಜನರ ಕುಟುಂಬಕ್ಕೆ ತಲಾ 5 ಲಕ್ಷ ಸರ್ಕಾರದಿಂದ ಪರಿಹಾರ ನೀಡಲಾಗಿದ್ದು, ಮಾಲಿಕರಿಂದಲೂ ಪರಿಹಾರ ನೀಡುವಂತೆ ಸೂಚಿಸಿದ್ದೇವೆ ಎಂದರು.

ಗಣಿಗಾರಿಕೆ ನಡೆಸುವವರಿಗೆ ಸರ್ಕಾರದಿಂದ ತರಬೇತಿ .

ಸ್ಫೋಟ ಪ್ರೊಡಕ್ಷನ್‌, ಸಾಗಾಟ ಮಾಡುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು. ಈ ರೀತಿ ದುರ್ಘಟನೆ ಆಗಬಾರದೆಂಬ ದೃಷ್ಟಿಯಿಂದ ಉನ್ನತ ಮಟ್ಟದ ತನಿಖಾ ತಂಡ ರಚಿಸಿದ್ದೇವೆ. ಇದು ಅನ್‌ಸ್ಕಿಲ್ಡ… ಸ್ಟ್ರಕ್ಚರ್‌ ಮೈನಿಂಗ್‌ ಬಗ್ಗೆ ತಿಳಿವಳಿಕೆ ನೀಡಲು ಮೈನಿಂಗ್‌ ಯೂನಿವರ್ಸಿಟಿ ಸ್ಥಾಪಿಸಲು ನಿರ್ಧಾರ ಮಾಡಲಿದೆ ಎಂದರು.

click me!