ಗೊಂದಲ ಬೇಡ, ರಾಜೀವ್ ಗಾಂಧಿ ಹಾಸ್ಪಿಟಲ್‌ ಕೋವಿಡ್‌ ಆಸ್ಪತ್ರೆ ಎಂದು ಘೋಷಿಸಿಲ್ಲ!

By Suvarna NewsFirst Published May 5, 2021, 12:49 PM IST
Highlights

ಕೊರೋನಾತಂಕ ಮಧ್ಯೆ ಸುಳ್ಳು ಸುದ್ದಿ ಹಾವಳಿ| ರಾಜೀವ್ ಗಾಂಧಿ ಆಸ್ಪತ್ರೆಯನ್ನು ಕೊರೋನಾ ಆಸ್ಪತ್ರೆಯಾಗಿ ಘೋಷಿಸಿದ್ದಾರೆಂದು ತಪ್ಪು ಮಾಹಿತಿ| ಸುಳ್ಳು ಸುದ್ದಿ ಬಗ್ಗೆ ನಿರ್ದೆಶಕರ ಸ್ಪಷ್ಟನೆ

ಬೆಂಗಳೂರು(ಮೇ.05): ಕೊರೋನಾ ಎರಡನೇ ಅಲೆ ಇಡೀ ದೇಶವನ್ನು ಬೆಂಬಿಡದೆ ಕಾಡುತ್ತಿದೆ. ಕರ್ನಾಟಕವನ್ನೂ ಕಾಡುತ್ತಿರುವ ಈ ಮಹಾಮಾರಿ ರಾಷ್ಟ್ರ ರಾಜಧಾನಿ ಬೆಂಗಳೂರಿನ ನಿದ್ದೆಗೆಡಿಸಿದೆ. ದಿನೇ ದಿನೇ ಸೋಂಕಿತ ಪ್ರಮಾಣ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಈ ಎಲ್ಲಾ ವಿಷಮ ಪರಿಸ್ಥಿತಿ ನಡುವೆ ನಕಲಿ ಮಾಹಿತಿ ಹಾವಳಿಯೂ ಹೆಚ್ಚಾಗಿದ್ದು, ಇದು ಜನರನ್ನು ಗೊಂದಲಕ್ಕೀಡು ಮಾಡಿದೆ. 

ಹೌದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಜಯನಗರದ ರಾಜೀವ್ ಗಾಂಧಿ ಆಸ್ಪತ್ರೆಯನ್ನು ಸರ್ಕಾರ ಕೋವಿಡ್‌ ಆಸ್ಪತ್ರೆಯಾಗಿ ಘೋಷಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಜನರನ್ನೂ ಗೊಂದಲಕ್ಕೆಡ ದೂಡಿದೆ. ಈ ಮಾಹಿತಿ ಪಡೆದ ಅನೇಕರು ಆಸ್ಪತ್ರೆಯತ್ತ ಧಾವಿಸುತ್ತಿದ್ದು, ಭಾರೀ ಅವಾಂತರ ಸೃಷ್ಟಿಸಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್‌ಗಳು ಭರ್ತಿಯಾಗಿವೆ. ಹೀಗಿರುವಾಗ ಈ ಮಾಹಿತಿ ಪಡೆದ ಜನರು ರಾಜೀವ್ ಗಾಂಧಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಲ್ಲದೇ ಕೋವಿಡ್‌ ಆಸ್ಪತ್ರೆ ಎಂದು ಘೋಷಿಸಿದ್ದರೂ ಬಿಬಿಎಂಪಿ ವೆಬ್‌ಸೈಟಿನಲ್ಲಿ ಇಲ್ಲಿನ ಬೆಡ್‌ಗಳ ಮಾಹಿತಿ ಯಾಕೆ ನೀಡಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ. 

"

ಹೀಗಿರುವಾಗ ಈ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿರುವ ರಾಜೀವ್ ಗಾಮದಿ ಆಸ್ಪತ್ರೆ ನಿರ್ದೇಶಕರು ಇದೊಂದು ಸುಳ್ಳು ಮಾಹಿತಿ. ಈವರೆಗೆ ಸರ್ಕಾರ ಇಂತಹ ಯಾವುದೇ ಘೋಷಣೆ ಮಾಡಿಲ್ಲ. ಸದ್ಯ ಇಲ್ಲಿ ಸಾರಿ ಕೇಸ್‌ಗಳಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಕೊರೋನಾ ಶಂಕಿತ ಪ್ರಕರಣಗಳನ್ನಷ್ಟೇ ನೋಡಲಾಗುತ್ತಿದೆ. ಹೀಗಾಗಿ ಯಾವುದೇ ಗೊಂದಲ ಬೇಡ. ಮುಂದೆ ಸರ್ಕಾರ ರಾಜೀವ್ ಗಾಂಧಿ ಆಸ್ಪತ್ರೆ ಎಂದು ಘೋಚಷಿಸಿದರೆ ನಾವೇ ಈ ಬಗ್ಗೆ ಮಾಹಿತಿ ನಿಡುತ್ತೇವೆ ಎಂದಿದ್ದಾರೆ.

ಕೊರೋನಾದಂತಹ ವಿಷಮ ಪರಿಸ್ಥಿತಿಯಲ್ಲಿ ಇಂತಹ ಅನೇಕ ನಕಲಿ ಮಾಹಿತಿಗಳು ಹರಿದಾಡಿ ಎಡವಟ್ಟು ಸಂಭವಿಸುತ್ತವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಮಾಹಿತಿ ನಿಜವೋ? ಸುಳ್ಳೋ ಎಂದು ಖಚಿತಪಡಿಸಿದ ಬಳಿಕವಷ್ಟೇ ಮುಂದುವರೆಯುವುದು ಜಾಣತನ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!