ಹೊಸ ವರ್ಷಕ್ಕೆ ಹೊಸ ರೂಲ್ಸ್: ವಾಹನ ಸವಾರರಿಗೆ ಕಾದಿದೆ ಬಿಗ್ ಶಾಕ್, ಇನ್ನು ಬೇಕಾಬಿಟ್ಟಿ ರೈಡ್ ಮಾಡಿದ್ರೆ ಹುಷಾರ್!

Kannadaprabha News   | Kannada Prabha
Published : Nov 17, 2026, 06:38 AM IST
Karnataka to Ban Half Helmets and Seize Vehicles on Footpaths

ಸಾರಾಂಶ

Karnataka to Ban Half Helmets ರಾಜ್ಯಾದ್ಯಂತ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹಾಫ್‌ ಹೆಲ್ಮೆಟ್‌ ನಿಷೇಧಿಸಲು ಸಾರಿಗೆ ಇಲಾಖೆ ಹೊಸ ಕಾನೂನು ತರುತ್ತಿದೆ. ಹಾಗೆಯೇ ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ ಹಾಗೂ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಹೊಸ ನಿಯಮ ಏಕೆ?

  • ಅಪಘಾತದ ವೇಳೆ ಹಾಫ್‌ ಹೆಲ್ಮೆಟ್‌ ಧರಿಸಿದವರಿಗೆ ಪ್ರಾಣಾಪಾಯ ಹೆಚ್ಚು
  • ಹೀಗಾಗಿ ರಾಜ್ಯಾದ್ಯಂತ ಜ.1ರಿಂದ ಹಾಫ್‌ ಹೆಲ್ಮೆಟ್‌ ಧರಿಸುವುದು ನಿಷೇಧ
  • ಇದಕ್ಕಾಗಿ ಶೀಘ್ರವೇ ಹೊಸ ಕಾನೂನು ಸಿದ್ಧಪಡಿಸಲು ಸರ್ಕಾರ ನಿರ್ಧಾರ
  • ಫುಟ್ಪಾತ್‌ ಮೇಲೆ ವಾಹನ ಸಂಚಾರ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆ
  • ಇಂಥ ನಿಯಮ ಉಲ್ಲಂಘನೆಗೆ ಇರುವ ದಂಡದ ಪ್ರಮಾಣ ಹೆಚ್ಚಳ ನಿರ್ಧಾರ
  • ಮೊದಲ ಸಲ ₹5000, 2ನೇ ಸಲ ₹10000 ದಂಡ, 3ನೇ ಸಾಲ ವಾಹನ ಜಪ್ತಿ

ಬೆಂಗಳೂರು (ನ.17): ದ್ವಿಚಕ್ರ ವಾಹನ ಚಾಲಕರು ಮತ್ತು ಸಹ ಪ್ರಯಾಣಿಕರ ರಕ್ಷಣೆ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಹಾಫ್‌ ಹೆಲ್ಮೆಟ್‌ ನಿಷೇಧ ಮಾಡಲಾಗುತ್ತಿದ್ದು, ಈ ಕುರಿತು ಶೀಘ್ರದಲ್ಲಿ ಕಾನೂನು ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ತಿಳಿಸಿದ್ದಾರೆ.

ಹಾಫ್ ಹೆಲ್ಮೆಟ್ ಧರಿಸಿದ್ರೆ ದಂಡ, ಜನೆವರಿಯಿಂದ ಹೊಸ ರೂಲ್ಸ್

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಪಘಾತದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಹಾಫ್‌ ಹೆಲ್ಮೆಟ್‌ ಧರಿಸಿದ್ದರೆ, ಅವರ ಪ್ರಾಣಕ್ಕೆ ಅಪಾಯವುಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹಾಫ್‌ ಹೆಲ್ಮೆಟ್‌ ನಿಷೇಧಿಸಲು ಹೊಸದಾಗಿ ಕಾನೂನು ರೂಪಿಸಲಾಗುತ್ತಿದೆ. ಅದು ಅಂತಿಮವಾಗಿದ್ದು, ಶೀಘ್ರದಲ್ಲಿ ಪ್ರಕಟಿಸಲಾಗುವುದು. ಹೊಸ ವರ್ಷದ ವೇಳೆಗೆ ನೂತನ ಕಾನೂನು ಜಾರಿಗೊಳಿಸಿ, ಹಾಫ್‌ ಹೆಲ್ಮೆಟ್‌ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗುತ್ತದೆ ಎಂದು ಹೇಳಿದರು.

ಫುಟ್ಬಾತಲ್ಲಿ ಗಾಡಿ ಓಡ್ಸಿದ್ರೆ ಸೀಜ್‌

ಹಾಗೆಯೇ, ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ದಂಡ ದುಪ್ಪಟ್ಟು ಮಾಡಲಾಗುತ್ತಿದೆ. ಮೊದಲ ಬಾರಿ ಕಾನೂನು ಉಲ್ಲಂಘನೆಗೆ 5 ಸಾವಿರ ರು. ಮತ್ತು ಎರಡನೇ ಬಾರಿಗೆ 10 ಸಾವಿರ ರು. ದಂಡ ವಿಧಿಸಲಾಗುತ್ತದೆ. ಮೂರನೇ ಬಾರಿ ಉಲ್ಲಂಘಿಸಿದರೆ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಈ ಸಂಬಂಧ ಕಾನೂನು ರೂಪಿಸಲಾಗುತ್ತಿದ್ದು, ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಲಾಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಕ್ಷಿಣ ಕನ್ನಡ: ರೈತರ ಸಂಕಷ್ಟಕ್ಕೆ ಆಸರೆಯಾಗಿ ಏಷ್ಯಾದ ಅತಿದೊಡ್ಡ ಸಂಸ್ಥೆಯಾಗಿ ಬೆಳೆದ ಪುತ್ತೂರಿನ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆ ಯಶೋಗಾಥೆ!
ಉತ್ತರ ಕರ್ನಾಟಕದ ಪ್ರಮುಖ ಆಹಾರ ಜೋಳ ಕೆಜಿಗೆ 100 ರೂ., ಖಾನಾವಳಿ ರೊಟ್ಟಿ ಊಟಕ್ಕೆ ಸಂಕಷ್ಟ!