ಕಂದಾಯ ಇಲಾಖೆಯಲ್ಲಿ ಹಲವಾರು ಸುಧಾರಣೆ, ಸರಳೀಕರಣ ಮಾಡುವ ಮೂಲಕ ಜನಸ್ನೇಹಿ ಮಾಡಲಾಗುತ್ತಿದ್ದು, ಮುಂದುವರೆದು ಕೆ-2 ಸಾಫ್‌್ಟವೇರ್ ಮೂಲಕ ಜಮೀನು, ಆಸ್ತಿಗಳನ್ನು ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ.
ವಿಧಾನಪರಿಷತ್ (ಡಿ.29) : ಕಂದಾಯ ಇಲಾಖೆಯಲ್ಲಿ ಹಲವಾರು ಸುಧಾರಣೆ, ಸರಳೀಕರಣ ಮಾಡುವ ಮೂಲಕ ಜನಸ್ನೇಹಿ ಮಾಡಲಾಗುತ್ತಿದ್ದು, ಮುಂದುವರೆದು ಕೆ-2 ಸಾಫ್ಟ್‌ವೇರ್ ಮೂಲಕ ಜಮೀನು, ಆಸ್ತಿಗಳನ್ನು ಅಪ್‌ಲೋಡ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯಾದ್ಯಂತ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಕಾಂಗ್ರೆಸ್‌ನ ಗೋವಿಂದರಾಜು ಅವರ ಪರವಾಗಿ ಕೆ.ಎ. ತಿಪ್ಪೇಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕೆ-2 ಸಾಫ್‌್ಟವೇರ್‌ನಲ್ಲಿ ಕಂದಾಯ ಇಲಾಖೆಯ ಎಲ್ಲ ಆಸ್ತಿ ದಾಖಲಾಗಿರುತ್ತದೆ. ಹೀಗಾಗಿ ಯಾರೂ ಕೂಡಾ ದಾಖಲೆಗಳನ್ನು ಸಲ್ಲಿಸುವ ಪ್ರಶ್ನೆಯೇ ಬರುವುದಿಲ್ಲ. ಒಂದು ಆಸ್ತಿಯ ಮೇಲೆ ಜನರು ಹಕ್ಕು ಪ್ರತಿಪಾದಿಸಿ ನಕಲಿ ದಾಖಲೆ ಸಲ್ಲಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವೇ ಇರುವುದಿಲ್ಲ’ ಎಂದರು.
ಲವ್ ಜಿಹಾದ್ ಬಗ್ಗೆ ಎಷ್ಟೇ ಹೇಳಿದ್ರೂ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ: ಸಚಿವ ಆರ್.ಅಶೋಕ್
‘ಆದರೆ ಯಾವುದೇ ಒಂದು ಕುಟುಂಬದ ಸದಸ್ಯರು ತಮ್ಮೊಳಗೆ ಆಸ್ತಿಯನ್ನು ಹಂಚಿಕೆ ಮಾಡಿ ನಕ್ಷೆಯಲ್ಲಿ ಗುರುತಿಸುವ ಜತೆಗೆ ಆಧಾರ್ ಮಾಹಿತಿಯನ್ನು ಆ್ಯಪ್ ಮೂಲಕ ಅಪ್‌ಲೋಡ್ ಮಾಡಿದರೆ ಅವರ ಹೆಸರಿಗೆ ಆಸ್ತಿ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು. ತಾವು ಸಚಿವರಾದ ನಂತರ ಇಲಾಖೆಯಲ್ಲಿ ಹಲವಾರು ಸುಧಾರಣೆ ತರಲಾಗಿದೆ. ಟೇಬಲ್‌ಗಳ ಸಂಖ್ಯೆ ಕಡಿಮೆಯಾದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಕಡತಗಳ ವಿಳಂಬ ಕಡಿಮೆ ಮಾಡಲಾಗಿದೆ ಎಂದರು.
ಸರ್ವೆಯರ್ ನೇಮಕ:
ಪೋಡಿ ಸೇರಿದಂತೆ ಹಲವಾರು ಪ್ರಕರಗಳ ಇತ್ಯರ್ಥಕ್ಕೆ ಸರ್ವೇಯರ್ ಕೊರತೆ ತೀವ್ರವಾಗಿತ್ತು. ಈಗ 3000 ಸರ್ವೆಯರ್‌ಗಳನ್ನು ಮೂರು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ನಿರ್ದಿಷ್ಟಕೆಲಸವನ್ನು ಮಾತ್ರ ನೀಡಲಾಗುವುದು. ಒಂದು ಆಸ್ತಿಯ ಸರ್ವೆಗೆ 1200 ರು. ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Grama Vastavya: ಗಿರಿಜನ ಹಾಡಿ ನಿವಾಸಿಗಳ ಕಷ್ಟ ಸುಖ ಆಲಿಸಿದ ಸಚಿವ ಆರ್.ಅಶೋಕ್