ಕರ್ನಾಟಕದಲ್ಲಿ ಕೊರೋನಾ ವೈರಸ್: ಇಲ್ಲಿದೆ ಜು.9ರ ಅಂಕಿ-ಸಂಖ್ಯೆ

By Suvarna News  |  First Published Jul 9, 2021, 9:39 PM IST

* ಕರ್ನಾಟಕದಲ್ಲಿ ಕೊರೋನಾ ವೈರಸ್ ಅಂಕಿ ಸಂಖ್ಯೆ
* ಹೊಸದಾಗಿ 2290 ಜನರಿಗೆ ಕೊರೋನಾ ಪಾಸಿಟಿವ್ ಕೇಸ್, 68 ಸಾವು
* ಪಾಸಿಟಿವಿಟಿ ದರ ಶೇಕಡ 1.48 ರಷ್ಟು 


ಬೆಂಗಳೂರು, (ಜುಲೈ.09): ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 2290 ಜನರಿಗೆ ಕೊರೋನಾ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, 68 ಸೋಂಕಿತರು ಮೃತಪಟ್ಟಿದ್ದಾರೆ.

 ಒಟ್ಟು ಸೋಂಕಿತರ ಸಂಖ್ಯೆ 28,67,158 ಕ್ಕೆ ಏರಿಕೆಯಾಗಿದೆ. ಇದುವರೆಗೆ 35,731 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Tap to resize

Latest Videos

ಕಪ್ಪ ರೂಪಾಂತರಿ ಕೊರೋನಾ ಪತ್ತೆ..! ವೇಗವಾಗಿ ಹರಡೋದೆ ಇದರ ವಿಶೇಷತೆ

ಇವತ್ತು 3045 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದರೊಂದಿಗೆ 27,93,498 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 37,906 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.48ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ, ಶುಕ್ರವಾರ ಹೊಸದಾಗಿ 472 ಜನರಿಗೆ ಸೋಂಕು ತಗುಲಿದ್ದು, 12 ಮಂದಿ ಮೃತಪಟ್ಟಿದ್ದಾರೆ. 814 ಜನ ಬಿಡುಗಡೆಯಾಗಿದ್ದಾರೆ. 13,536 ಸಕ್ರಿಯ ಪ್ರಕರಣಗಳು ಇವೆ.

click me!