ಕೆಎಸ್​ಆರ್​ಟಿಸಿಗೆ ಚೊಚ್ಚಲ 'ಇವಿ ಪವರ್ ಪ್ಲಸ್' ಬಸ್​ಗೆ ರಾಷ್ಟ್ರೀಯ ಪ್ರಶಸ್ತಿ: ಸಿಎಂ ಪ್ರಶಂಸೆ

Published : Sep 15, 2023, 09:23 PM IST
ಕೆಎಸ್​ಆರ್​ಟಿಸಿಗೆ ಚೊಚ್ಚಲ 'ಇವಿ ಪವರ್ ಪ್ಲಸ್' ಬಸ್​ಗೆ ರಾಷ್ಟ್ರೀಯ ಪ್ರಶಸ್ತಿ: ಸಿಎಂ ಪ್ರಶಂಸೆ

ಸಾರಾಂಶ

ಕೆಎಸ್​ಆರ್​ಟಿಸಿ ಚೊಚ್ಚಲ ವಿದ್ಯುತ್ ಚಾಲಿತ ಬಸ್ ಸೇವೆಯಾದ ಇವಿ ಪವರ್ ಪ್ಲಸ್​​ಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಲಭಿಸಿದೆ.

ಬೆಂಗಳೂರು (ಸೆ.15): ಕೆಎಸ್​ಆರ್​ಟಿಸಿ ಚೊಚ್ಚಲ ವಿದ್ಯುತ್ ಚಾಲಿತ ಬಸ್ ಸೇವೆಯಾದ ಇವಿ ಪವರ್ ಪ್ಲಸ್​​ಗೆ ವಿಶ್ವ ತಯಾರಿಕೆದಾರರ ಕಾಂಗ್ರೆಸ್ ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಲಭಿಸಿದೆ. ನಗರದ ತಾಜ್ ಹೋಟೆಲ್​ನಲ್ಲಿ ವಿಶ್ವ ತಯಾರಿಕೆದಾರರ ಕಾಂಗ್ರೆಸ್​  ಸ್ಥಾಪಿಸಿರುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 

ಕೆಎಸ್​ಆರ್​ಟಿಸಿ ಪರಿಚಯಿಸಿರುವ ಅಂತರ್​​ನಗರ ಎಲೆಕ್ಟ್ರಿಕ್ ಬಸ್ ಉಪಕ್ರಮಕ್ಕಾಗಿ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗುರ್ಗಾಂವ್​ನ ಅಡ್ವಾಂಟೇಜ್ ಕ್ಲಬ್​ನ ಸಿಇಒ ಹಾಗೂ ಸಹ ಸಂಸ್ಥಾಪಕಿ ಸ್ಮಿತಿ ಭಟ್​ ದಿಯೋರ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಉತ್ತಮ ವರ್ಷದ ಅಂತರನಗರ ಎಲೆಕ್ಟ್ರಿಕ್​ ಬಸ್​ - ಇವಿ ಪವರ್​ ಪ್ಲಸ್ ಬಸ್​ಗೆ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಅಧಿಕಾರಿಗಳಾದ ಎನ್.ಕೆ. ಬಸವರಾಜು, ಜಿ. ಅಂತೋಣಿ ಜಾರ್ಜ್ ಹಾಗೂ ಶಿವಕುಮಾರ್ ಜಂಟಿಯಾಗಿ ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು.

ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ಟಿಕೆಟ್​ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಕೊಪ್ಪಳದ ಬಿಜೆಪಿ ಮುಖಂಡ

ಈ ಬಗ್ಗೆ ಸಿಎಂ ಆಫ್ ಕರ್ನಾಟಕ ಟ್ವೀಟರ್‌ನಲ್ಲಿ, ರಾಜ್ಯದ ಮೂಲೆ ಮೂಲೆಗಳಿಗೆ ಸಂಪರ್ಕ ಕಲ್ಪಿಸುವ ನಾಡಿನ ಹೆಮ್ಮೆಯ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆಯಲ್ಲಿ ಎಲೆಕ್ಟ್ರಿಕ್‌ ಬಸ್‌ ಬಳಕೆಗೆ ಸರ್ಕಾರ ನೀಡುತ್ತಿರುವ ವ್ಯಾಪಕ ಉತ್ತೇಜನದ ಫಲವಾಗಿ ವರ್ಲ್ಡ್‌ ಮ್ಯಾನುಫ್ಯಾಕ್ಚರಿಂಗ್‌ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಮತ್ತು ವಿದ್ಯುತ್‌ ವಾಹನಗಳ ಉಪಕ್ರಮ ಪ್ರಶಸ್ತಿ ದೊರೆತಿರುವುದು ಸಂತಸ ಮೂಡಿಸಿದೆ. ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಸರ ಸ್ನೇಹಿ ಮತ್ತು ಪ್ರಯಾಣಿಕರ ಸ್ನೇಹಿಯಾಗಿಸುವ ನಮ್ಮ ಪ್ರಯತ್ನಕ್ಕೆ ಈ ಪ್ರಶಸ್ತಿಯು ಪುಷ್ಟಿ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪೋಸ್ಟ್‌ ಮಾಡಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ