ಕರುನಾಡಿನ ಜೊತೆ ನಿಂತ ಮೋದಿ| ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊಡುಗೆಗಳು
ಬೆಂಗಳೂರು(ಸೆ.17): ಕರ್ನಾಟಕಕ್ಕೆ ಮೊದಲ ಐಐಟಿ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. 2015ರವರೆಗೆ ದೇಶದಲ್ಲಿ 16 ಐಐಟಿಗಳು ಇದ್ದವು . ಕರ್ನಾಟಕದಲ್ಲಿ ಒಂದೇ ಒಂದು ಐಐಟಿ ಇರಲಿಲ್ಲ . ಆ ಸಮಯದಲ್ಲಿ ಕರ್ನಾಟಕದ ಧಾರವಾಡಕ್ಕೆ ಮೊದಲ ಐಐಟಿ ಕೊಟ್ಟಿದ್ದು ಮೋದಿ ಸರ್ಕಾರ . ಕರ್ನಾಟಕದಲ್ಲಿರುವ 18 ಸರ್ಕಾರಿ ಮೆಡಿಕಲ… ಕಾಲೇಜ್‌ಗಳಲ್ಲಿ , ಮೂರು ಕಾಲೇಜ್‌ಗಳು ಮೋದಿ ಸರ್ಕಾರದ ಕೊಡುಗೆ. ವೈದ್ಯರಾಗುವ ಹಂಬಲವಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರ ನೀಡಿರುವ ವಿಶೇಷ ಕೊಡುಗೆ.
ಸ್ವಾತಂತ್ರ್ಯ ಬಂದರೂ ವಿದ್ಯುತ್ ತಲುಪದ ಕರ್ನಾಟಕದ 7 ಲಕ್ಷ ಮನೆಗಳಿಗೆ ವಿದ್ಯುತ್ ಒದಗಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಕೇಂದ್ರದ ವಿಶೇಷ ‘ಸೌಭಾಗ್ಯ’ ಯೋಜನೆಯಡಿ ರಾಜ್ಯದ ಜನರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ . ದೇಶದಾದ್ಯಂತ ಒಟ್ಟಾರೆ 18 ಸಾವಿರ ಹಳ್ಳಿಗಳಿಗೆ ಮೋದಿ ಸರ್ಕಾರ ವಿದ್ಯುತ್ ತಲುಪಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಮೋದಿ ಸರ್ಕಾರ ಹಸಿರು ನಿಶಾನೆ ತೋರಿಸಿ 600 ಕೋಟಿ ರು. ಬಿಡುಗಡೆ ಮಾಡಿದೆ . ಶಿವಮೊಗ್ಗ ಭಾಗದ ಮುಳುಗಡೆ ಸಂತ್ರಸ್ತರ ಎರಡು ದಶಕಗಳ ಬೇಡಿಕೆ ಇದಾಗಿತ್ತು .
ಚೆನೈ - ಬೆಂಗಳೂರು - ತುಮಕೂರು - ಚಿತ್ರದುರ್ಗ ಇಂಡಸ್ಟ್ರಿಯಲ… ಕಾರಿಡಾರ್, ಬೆಂಗಳೂರು - ಮುಂಬೈ ಎಕನಾಮಿಕ್ ಕಾರಿಡಾರ್ ತುಮಕೂರು ಮೂಲಕ ಹಾದುಹೋಗಲಿದೆ . ತುಮಕೂರಿಗೆ ಪವರ್‌ಗ್ರಿಡ್ , ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕಗಳೂ ಮಂಜೂರಾಗಿದೆ. ಬೀದರ್- ಕಲುಬುರಗಿ ನಡುವಿನ ರೈಲ್ವೆ ಮಾರ್ಗದ ಕನಸನ್ನು ಮಾಜಿ ಪ್ರಧಾನಿ ದಿವಂಗತ ಅಟಲ… ಬಿಹಾರಿ ವಾಜಪೇಯಿ ಕಂಡಿದ್ದರು . ಆದರೆ ಕಾಂಗ್ರೆಸ್ 10 ವರ್ಷಗಳ ಕಾಲ ಅದನ್ನ ನಿಲ್ಲಿಸಿತ್ತು . ಮೋದಿಯವರು ಕೇವಲ ಎರಡು ವರ್ಷದಲ್ಲಿ ಆ ಯೋಜನೆಯನ್ನ ಪೂರ್ತಿಗೊಳಿಸಿ, ಸ್ವತಃ ಬಂದು ಉದ್ಘಾಟಿಸಿದ್ದಾರೆ. ರಾಷ್ಟಾ್ರದ್ಯಂತ ಪ್ರಧಾನಮಂತ್ರಿ ಜನರಿಕ್ ಔಷಧಿ ಕೇಂದ್ರಗಳನ್ನು ತೆಗೆದು ಸಾಮಾನ್ಯ ಜನರಿಗೆ ಅತಿ ಕಡಿಮೆ ದರದಲ್ಲಿ ಔಷಧಿಗಳು ಸಿಗುವಂತೆ ಮೋದಿ ಮಾಡಿದ್ದಾರೆ . ಕರ್ನಾಟಕದಲ್ಲಿ ಈಗಾಗಲೇ 240 ಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಿ ಲಕ್ಷಾಂತರ ಜನ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
ರಾಯಚೂರಿನಲ್ಲಿ ರಾಜ್ಯದ ಮೊದಲ ಐಐಐಟಿ ಸ್ಥಾಪನೆ ಮಾಡುವ ಮೂಲಕ ವಿದ್ಯಾಭ್ಯಾಸಕ್ಕಾಗಿ ಪರರಾಜ್ಯಗಳಿಗೆ ಹೋಗಬೇಕಿದ್ದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕರ್ನಾಟಕದಲ್ಲೇ ಐಐಟಿ ಹಾಗೂ ಐಐಐಟಿ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ. ಕನ್ನಡಿಗರಿಗೆ ಇದೇ ಮೊದಲ ಬಾರಿಗೆ ರೈಲ್ವೇ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಿ ಮೋದಿ ಸರ್ಕಾರ ಹಲವು ದಶಕಗಳ ಕನ್ನಡಿಗರ ಕನಸು ಈಡೇರಿದೆ. ಯುಪಿಎ ಸರ್ಕಾರದ ಅವಧಿಯಲ್ಲಿನ ಹಣಕಾಸು ಆಯೋಗ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ 70 ಸಾವಿರ ಕೋಟಿ ರು. ಈಗ ಮೋದಿ ಸರ್ಕಾರ 2.19 ಲಕ್ಷ ಕೋಟಿ ಹಣವನ್ನು ಮಂಜೂರು ಮಾಡಿದೆ. ಇದು ಹಿಂದಿಗಿಂತಲೂ 180 ಪಟ್ಟು ಹೆಚ್ಚು . ಇದು ಕನ್ನಡಿಗರ ತೆರಿಗೆ ಹಣವೇ ಆಗಿರಬಹುದು, ಆದರೆ ಇಷ್ಟುವರ್ಷ ನಮಗೆ ಅನ್ಯಾಯವಾಗುತ್ತಿತ್ತು . ಈಗ ಮೋದಿ ಸರ್ಕಾರ ಸರಿದೂಗಿಸಿಕೊಂಡು ಸಾಗುತ್ತಿದೆ. ಪ್ರಧಾನಮಂತ್ರಿ ಫಸಲ… ಭೀಮಾ ಯೋಜನೆಯಡಿಯಲ್ಲಿ ಕರ್ನಾಟಕದ ರೈತರು 11 ಸಾವಿರ ಕೋಟಿ ರು. ಪರಿಹಾರ ಪಡೆದಿದ್ದಾರೆ . ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹಾಕುವುದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಸಂಕಷ್ಟದಲ್ಲಿರುವ ರೈತರಿಗೆ ಕೊಂಚ ಮಟ್ಟಿನ ನೆಮ್ಮದಿ ತಂದಿದೆ. ಈ ಹಿಂದೆ 50 ಕಿಲೋ ಎನ್‌ಪಿಕೆ ರಸಗೊಬ್ಬರ ಬೆಲೆ ಸುಮಾರು 400 ರು ಇದ್ದು ದರ ಏರುಗತಿಯಲ್ಲಿ ಇತ್ತು, ಈಗ ಅದರ ಬೆಲೆ ಕೇವಲ 260 ರು. ಇದೆ. ಇದಕ್ಕೆ ಕಾರಣ ಗೊಬ್ಬರದ ಮೇಲೆ ಕೇಂದ್ರದ ಭಾರೀ ಸಬ್ಸಿಡಿ. ಒಂದೇ ಬಾರಿಗೆ ಈ ಹಿಂದೆ ಕಂಡು ಕೇಳರಿಯದಂತ ರೀತಿಯಲ್ಲಿ ಧಾನ್ಯಗಳಿಗೆ ಕನಿಷ್ಟಬೆಂಬಲ ಬೆಲೆಯಲ್ಲಿ ( ಎಂಎಸ್‌ಪಿ ) ಶೇ.150 ರಷ್ಟುಏರಿಕೆ ಮಾಡಲಾಗಿದೆ.
ಬರ ಪರಿಹಾರ , ಅನುದಾನದ ವಿಷಯದಲ್ಲಿ ಹಿಂದಿನ ಯುಪಿಎ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದ ಅನುದಾನಕ್ಕಿಂತ ಹೆಚ್ಚಾಗಿ ಮೋದಿ ಸರ್ಕಾರದಲ್ಲಿ ಸಿಕ್ಕಿದೆ . ರಾಜ್ಯಕ್ಕೆ ಅತಿಹೆಚ್ಚು ಬರ ಪರಿಹಾರ ನೀಡಿದ ಖ್ಯಾತಿ ಮೋದಿ ಸರ್ಕಾರದ್ದಾಗಿದೆ. 48 ಗಂಟೆಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿದಾಗ ಅದು ನಿಮ್ಮ ಕೆಲಸವಲ್ಲ, ಸಂಸತ್ತಿನ ಕೆಲಸ ಎಂದು ಹಿಂದಿನ ಎಲ್ಲ ಸರ್ಕಾರಗಳಿಗಿಂತ ಗಟ್ಟಿಧ್ವನಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದು ಇದೇ ಮೋದಿ ಸರ್ಕಾರ . ಇದೇ ಮೊದಲ ಬಾರಿಗೆ ರೈಲ್ವೇ ಟಿಕೆಟ್‌ಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗಿದೆ . ಬೇರೆ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಇದುವರೆಗೂ ರೈಲ್ವೇ ಟಿಕೆಟ್‌ಗಳು ಪ್ರಕಟವಾಗಿಲ್ಲ. ಆ ಮೂಲಕ ಕನ್ನಡಿಗರ ಹಲವು ದಿನಗಳ ಬೇಡಿಕೆ ಈಡೇರಿದೆ.
ಶಿವಮೊಗ್ಗ, ಬಳ್ಳಾರಿ, ಮೈಸೂರು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಕೇಂದ್ರ ಸರ್ಕಾರ ತೆರೆದಿದೆ. ಈ ಮೊದಲು ನಾಡಿನ ಜನರು ಪಾಸ್‌ಪೋರ್ಟ್‌ಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯಬೇಕಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಗಾಗಿ ಕರ್ನಾಟಕಕ್ಕೆ 1960 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ . ಆದರೆ ಅದರಲ್ಲಿ ಬಹುತೇಕ ಅನುದಾನವನ್ನು ರಾಜ್ಯ ಸರ್ಕಾರ ಬಳಸಿಕೊಳ್ಳದೇ ಹಾಗೇ ಉಳಿಯುವಂತಾಗಿದೆ.ಕರ್ನಾಟಕಕ್ಕೆ ಅತಿ ಹೆಚ್ಚು ಬರ ಪರಿಹಾರದ ಜೊತೆಗೆ ಅತಿಹೆಚ್ಚು ನೆರೆ ಪರಿಹಾರ ನೀಡಿದ್ದು ಇದೇ ಮೋದಿ ಸರ್ಕಾರ. ಅಂತೆಯೇ ಕರ್ನಾಟಕಕ್ಕೆ ನೆರೆ ಪರಿಹಾರವಾಗಿ 171.69 ಕೋಟಿ ರೂಗಳು ಕಳೆದ ವರ್ಷ ಸಿಕ್ಕಿದೆ. ಬೆಳಗಾವಿ ವಿಷಯ ಬಂದಾಗ ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದು ಇದೇ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ. ಎರಡು ವರ್ಷಗಳಲ್ಲಿ ದಾವಣಗೆರೆ ಹಾಗೂ ಸುತ್ತಲಿನ ಜಿಲ್ಲೆಗಳು ಸೇರಿದಂತೆ ಮಧ್ಯ ಕರ್ನಾಟಕಕ್ಕೆ 76,000 ಕೋಟಿ ಅನುದಾನ. ಇದು ಕಳೆದ ಎಲ್ಲಾ ಸರ್ಕಾರಗಳು ನೀಡಿದ್ದಕ್ಕಿಂತಲೂ ಅತೀ ಹೆಚ್ಚಿನ ಅನುದಾನವಾಗಿದೆ.
ಈ ಹಿಂದೆ ನಾವುಗಳೆಲ್ಲಾ ಪತ್ರಿಕೆಗಳಲ್ಲಿ ಓದಿದ್ದೀವಿ. ರಸಗೊಬ್ಬರ ಕೊಳ್ಳಲು , ಬಿತ್ತನೆ ಬೀಜ ಕೊಳ್ಳಲು ಲಾಠಿ ಚಾಜ್‌ರ್, ಗೋಲಿಬಾರ್ ಆಗಿರುವ ಬಗ್ಗೆ. ಆದರೆ ಈ ನಾಲ್ಕು ವರ್ಷಗಲ್ಲಿ ಈ ಮಾತನ್ನ ಎಂದಾದರೂ ಕೇಳಿದ್ದೀರಾ? ಅಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ಬಿತ್ತನೆ ಬೀಜಗಳನ್ನು ರಾಜ್ಯಕ್ಕೆ ಪೂರೈಸಿದೆ. ರಾಜ್ಯದ ಹಲವು ನಗರಗಳು ಸ್ಮಾರ್ಟ್ ಸಿಟಿಗೆ ಆಯ್ಕೆ , ಅಮೃತ ಯೋಜನೆಗೂ ಹಲವು ಪ್ರಮುಖ ನಗರಗಳ ಆಯ್ಕೆ , ಮಂಗಳೂರನ್ನು ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ 107 ಕೋಟಿ ರು. ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರ 2,24,000 ಮೆಟ್ರಿಕ್ ಟನ್‌ನಷ್ಟುಪಡಿತರ ವಿತರಣೆ ಮಾಡುತ್ತಿದೆ . ಇದರಲ್ಲಿ 2,17,403 ಮೆಟ್ರಿಕ್ ಟನ್ ಕೇಂದ್ರ ಸರ್ಕಾರ ನೀಡುತ್ತಿದೆ . ಸುಮಾರು 7,000 ಮೆಟ್ರಿಕ್ ಟನ್ ಮಾತ್ರ ರಾಜ್ಯ ಸರ್ಕಾರ ಸೇರಿಸುತ್ತಿದೆ. ಕೇಂದ್ರ ಸರಕಾರ ಅಕ್ಕಿಯನ್ನು ಕೆ.ಜಿ.ಗೆ 29 ರು.ಗೆ ಖರೀದಿಸಿ ರಾಜ್ಯಕ್ಕೆ 3 ರು. ಗೆ , ಗೋಧಿಯನ್ನು ಕೆ.ಜಿ.ಗೆ 20 ರೂ.ಗೆ ಖರೀದಿಸಿ 2 ರು., ಹಾಗೆಯೇ ಸಕ್ಕರೆಯನ್ನು ಕೆ.ಜಿ.ಗೆ 24 ರು. ಗೆ ಖರೀದಿಸಿ 13.50 ರೂ.ಗೆ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಅಂದರೆ ರಾಜ್ಯ ಸರ್ಕಾರ ತನ್ನದು ಎಂದು ಹೇಳಿಕೊಳ್ಳುವ ಮಹತ್ವಾಕಾಂಕ್ಷೆಯ ‘ಅನ್ನ ಭಾಗ್ಯ’ ಯೋಜನೆಗೆ ಬಹುತೇಕ ಹಣ ನೀಡುತ್ತಿರುವುದು ಮೋದಿ ಸರ್ಕಾರ. ಕರ್ನಾಟಕದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ 27,482 ಕೋಟಿ ರೂ.ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. 3,546 ಕಿ ಮೀ ಉದ್ದದ 50 ಯೋಜನೆಗಳನ್ನು ಇದು ಒಳಗೊಂಡಿದೆ.
ಫಲಾನುಭವಿ ಪ್ರದೇಶಗಳು:
2009 ರಿಂದ 2013-14ರ ನಡುವೆ ಯುಪಿಎ ಸರ್ಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಕೊಡಮಾಡಿದ ಸರಾಸರಿ ವಾರ್ಷಿಕ ಮೊತ್ತ 835 ಕೋಟಿ ರು. 2014-15 ರಿಂದ 2016-17ರಲ್ಲಿ ಎನ್‌ಡಿಎ ಸರ್ಕಾರ ನೀಡಿರುವ ಸರಾಸರಿ ವಾರ್ಷಿಕ ಮೊತ್ತ 2,197.7 ಕೋಟಿ ರು.
ಭಾರತಮಾಲಾ ಯೋಜನೆಯಡಿಯಲ್ಲಿ ಘೋಷಣೆಯಾಗಿರುವ ವರ್ತುಲ ರಸ್ತೆಗಳು:
ಕಳೆದ ಎರಡು ವರ್ಷದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ 8,719 ಕೋಟಿ ರೂ . ಅನುದಾನ ನೀಡಿದೆ. ಬೆಂಗಳೂರು - ಮಲ್ಲಾಪುರ (323 ಕಿ.ಮೀ), ಬೆಂಗಳೂರು - ಮಂಗಳೂರು (319 ಕಿ.ಮೀ), ಬೆಂಗಳೂರು - ನೆಲ್ಲೂರು (286 ಕಿ.ಮೀ.), ಮಂಗಳೂರು - ರಾಯಚೂರು (461 ಕಿ.ಮೀ) , ಬಳ್ಳಾರಿ - ಸೊಲ್ಲಾಪುರ (434 ಕಿ.ಮೀ)
ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಕಾರಿಡಾರ್ ಅಡಿಯಲ್ಲಿ ರಸ್ತೆಗಳು ಘೋಷಣೆಯಾಗಿ ನಡೆಯುತ್ತಿರುವ ಕಾಮಗಾರಿಗಳು:
ಸ್ಮಾರ್ಟ್ ಸಿಟಿ ಮಿಷನ್‌ನಲ್ಲಿ ಕರ್ನಾಟಕದಲ್ಲಿ ಆಯ್ಕೆಯಾಗಿರುವ 6 ಸ್ಮಾರ್ಟ್ ಸಿಟಿಗಳಾದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ - ಧಾರವಾಡ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರಿನ ಅಭಿವೃದ್ಧಿಗೆ ನೂರಾರು ಕೋಟಿ ರು. ಬಿಡುಗಡೆಯಾಗಿದೆ. ಉದಯ್‌ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ 2014ರಲ್ಲಿ 14,269 ಮೆ. ವ್ಯಾಟ್‌ನಷ್ಟಿದ್ದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ, 2017ರಲ್ಲಿ 21,316 ಮೆ.ವ್ಯಾಟ್‌ವರೆಗೆ ಹೆಚ್ಚಿಸಲಾಗಿದೆ. ಕರ್ನಾಟಕದ ಹಲವಾರು ಜನರ ಪತ್ರಗಳಿಗೆ ಮೋದಿಯವರು ಸ್ಪಂದಿಸಿದ್ದಾರೆ . ಸ್ಥಳೀಯ ಆಡಳಿತದಿಂದ ನ್ಯಾಯ ದೊರಕದೇ ಇದ್ದಾಗ ಖುದ್ದು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ನ್ಯಾಯ ಪಡೆದ ನೂರಾರು ಉದಾಹರಣೆಗಳು ಕರ್ನಾಟಕದಲ್ಲಿವೆ.
ಎರಡು ವರ್ಷದ ಹಿಂದೆ ಅಡಿಕೆ ಧಾರಣೆಯಲ್ಲಿ ವ್ಯಾಪಕ ಕುಸಿತ ಕಂಡಿದ್ದಾಗ ಮೋದಿ ಸರ್ಕಾರದ ಬಳಿ ಕರ್ನಾಟಕದ ರೈತರು ನಿಯೋಗ ಕೊಂಡೊಯ್ದಿದ್ದರು. ಅದಕ್ಕೆ ಸ್ಪಂದಿಸಿದ್ದ ಮೋದಿ ಸರ್ಕಾರ, ವಿದೇಶದಿಂದ ಆಮದಾಗುತ್ತಿದ್ದ ಅಡಿಕೆ ಮೇಲಿನ ಸುಂಕ ಹೆಚ್ಚಿಸಿ, ಕರ್ನಾಟಕದ ಅಡಿಕೆಗೆ ಉತ್ತಮವಾದ ಮಾರ್ಕೆಟ್ ಒದಗಿಸಿದ್ದರು. ಪರಿಣಾಮವಾಗಿ ಕೆಲವೇ ದಿನದಲ್ಲಿ ಅಡಿಕೆ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದು ರೈತರು ನಿಟ್ಟುಸಿರು ಬಿಡುವಂತಾಗಿತ್ತು. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನ ಭಾಗ್ಯದ ಪ್ರತೀ ಕಿಲೋಗ್ರಾಂ ಅಕ್ಕಿಗೆ ಕೇಂದ್ರ ಸರ್ಕಾರ 29.64 ರು. ಕೊಟ್ಟರೆ, ರಾಜ್ಯ ಸರ್ಕಾರ ಕೊಡುವುದು ಕೇವಲ 3 ರು. ಗೋಧಿ , ಬೇಳೆ-ಕಾಳುಗಳಿಗೂ ಕೇಂದ್ರವೇ ಹಣ ಕೊಡುತ್ತದೆ.
ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಹಣ ನೀಡುತ್ತಿದೆ . ನಿಜ ಅರ್ಥದಲ್ಲಿ ಅನ್ನ ಭಾಗ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗು ಬಿಜೆಪಿಯ ಕೊಡುಗೆಯೇ ಹೊರತು ಕಾಂಗ್ರೆಸ್‌ನದ್ದಲ್ಲ. 17 ಸಾವಿರ ಕೋಟಿ ಹಣವನ್ನು ಬೆಂಗಳೂರಿನ ಸಬ್‌ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಘೋಷಿಸಿದ್ದಾರೆ . ಒಟ್ಟಾರೆ ಬಜೆಟ್‌ನಲ್ಲಿ 40 ಸಾವಿರ ಕೋಟಿಯಷ್ಟುಹಣವನ್ನು ಸಬ್‌ಅರ್ಬನ್ ರೈಲ್ವೆಗೆ ತೆಗೆದಿಡಲಾಗಿದೆ. ಇದರಲ್ಲಿ ಸಿಂಹಪಾಲು ಕರ್ನಾಟಕಕ್ಕೆ ಬಂದಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಯೋಜನೆಗೆ 500 ಕೋಟಿ ರು. ವೆಚ್ಚದಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಅಮೃತ್ ಯೋಜನೆಯಡಿಯಲ್ಲಿ ಕರ್ನಾಟಕದ ನಗರಗಳ ಅಭಿವೃದ್ಧಿಗಾಗಿ 4,900 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ರಾಜ್ಯದಲ್ಲಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ 34 ಲಕ್ಷ ಶೌಚಾಲಯಗಳ ನಿರ್ಮಾಣವನ್ನು ಕೇಂದ್ರ ಸರ್ಕಾರ ಮಾಡಿದೆ. ಜಿಲ್ಲಾ ಖನಿಜ ನಿಧಿಯಡಿಯಲ್ಲಿ ಕರ್ನಾಟಕಕ್ಕೆ 34,353 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ 4,300 ಕೋಟಿ ರು. ಅನುದಾನ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕದ ಲಕ್ಷಾಂತರ ಬಡ ಮಹಿಳೆಯರ ಮನೆಗಿಂದು ಉಚಿತ ಗ್ಯಾಸ್ ಸೌಲಭ್ಯ ಕಲ್ಪಿಸಲಾಗಿದೆ. ಕರ್ನಾಟಕದ ನೇಕಾರರ ಅಭಿವೃದ್ಧಿಗಾಗಿ 5 ಕೋಟಿ ರು. ವೆಚ್ಚದಲ್ಲಿ ನೂಲು ಬ್ಯಾಂಕ್ ಸ್ಥಾಪಿಸಲು ಅನುದಾನ ನೀಡಿದೆ. ನೇಕಾರರ ಬಾಳನ್ನ ಹಸನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 27,000 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣ ನಡೆಯುತ್ತಿದೆ .
ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿಯಲ್ಲಿ 405 ಕೋಟಿ ರು. ಕರ್ನಾಟಕಕ್ಕೆ ಬಂದಿದೆ. ರೈತರಿಗಾಗಿಯೇ ಮಾಡಲಾಗಿರುವ ಈ ಯೋಜನೆಯಿಂದ ಲಕ್ಷಾಂತರ ರೈತರು ಉಪಯೋಗ ಪಡೆಯುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯ ಸುಧಾರಣೆಗಾಗಿ ಕೇಂದ್ರ ಸರ್ಕಾರದಿಂದ 239 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ 204 ಕೋಟಿ ರು. ಅನುದಾನ ಕರ್ನಾಟಕಕ್ಕೆ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲು 31 ಕೋಟಿ ರು. ಕರ್ನಾಟಕಕ್ಕೆ ಬಿಡುಗಡೆಯಾಗಿದೆ. ಬಡವರಿಗೆ ನಿವಾಸಗಳನ್ನು ಕಟ್ಟಿಕೊಡಲೆಂದೇ ರೂಪಿಸಲಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 219 ಕೋಟಿ ರು. ಅನುದಾನ ಕನ್ನಡಿಗರಿಗೆ ಬಂದಿದೆ. ರಾಜ್ಯದ ಕಾಳುಮೆಣಸು ಬೆಳೆಗಾರರ ಮನವಿಗೆ ತಕ್ಷಣವೇ ಸ್ಪಂದಿಸಿದ್ದು ಇದೇ ಮೋದಿ ಸರ್ಕಾರ. ಕಾಳುಮೆಣಸಿಗೆ ಬೆಂಬಲ ಬೆಲೆ ಘೋಷಿಸಿದ್ದಲ್ಲದೇ, ಹೊರ ದೇಶಗಳಿಂದ ಆಮದಾಗುತ್ತಿದ್ದ ಕಾಳುಮೆಣಸನ್ನು ನಿಷೇಧಿಸಿ, ಕಾಳುಮೆಣಸು ಧಾರಣೆಯಲ್ಲಿ ಗಣನೀಯವಾಗಿ ಏರಿಕೆಯಾಗುವಂತೆ ಮಾಡಿದ್ದು ಮೋದಿ ಸರ್ಕಾರ .
ಪರಿಶಿಷ್ಟಪಂಗಡ (ಎಸ್‌ಟಿ) ವ್ಯಾಪ್ತಿಗೆ ಸೇರಿಸಬೇಕೆಂಬ ‘ಪರಿವಾರ’ ಮತ್ತು ‘ತಳವಾರ’ ಸಮುದಾಯಗಳ ಬಹುದಿನದ ಬೇಡಿಕೆಯನ್ನು ಮೋದಿ ಸರ್ಕಾರ ಈಡೇರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗು ಸಂಸದ ಶ್ರೀರಾಮುಲು ಅವರ ವಿಶೇಷ ಪ್ರಯತ್ನದ ಫಲವಾಗಿ ದಶಕಗಳ ಬೇಡಿಕೆ ಈಡೇರಿದೆ. ರೈಲ್ವೇ ಆದಾಯದಲ್ಲಿ ಸುಮಾರು 789 ಕೋಟಿ ರು. ಮೈಸೂರಿಗೆ ಬಂದಿದೆ. ಅಷ್ಟೇ ಅಲ್ಲದೇ, ಮೈಸೂರು-ಬೆಂಗಳೂರು ಡಬಲ್ ಟ್ರ್ಯಾಕ್ ಸಂಪೂರ್ಣ ಮುಗಿಸಿ , ಹೊಸ ರೈಲು ಸಂಚರಿಸುತ್ತಿದೆ. ಮೈಸೂರು-ಬೆಂಗಳೂರು ನಡುವೆ 8 ಲೈನ್ ಹೈವೇ ಶಂಕು ಸ್ಥಾಪನೆ ನೆರವೇರಿದ್ದು , 8,600 ಕೋಟಿ ರೂ ಅನುದಾನ ಘೋಷಿಸಲಾಗಿದೆ.