ಮೈಸೂರು ದಸರಾಕ್ಕೆ ಕೊಡಗಿನಿಂದ 8 ಆನೆಗಳ ಆಯ್ಕೆ ಬಹುತೇಕ ಖಚಿತ

By Ravi Janekal  |  First Published Aug 8, 2023, 1:21 PM IST

ಆಕ್ಟೋಬರ್ 15ರಿಂದ 24ರವರೆ  ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಿಲ್ಲೆಯಿಂದ ಪಾಲ್ಗೊಳ್ಳಲಿರುವ 8 ಆನೆಗಳ ಪಟ್ಟಿ ಬಹುತೇಕ ಖಚಿತವಾಗಿದೆ.


ಕೊಡಗು (ಆ.8) : ಆಕ್ಟೋಬರ್ 15ರಿಂದ 24ರವರೆ  ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜಿಲ್ಲೆಯಿಂದ ಪಾಲ್ಗೊಳ್ಳಲಿರುವ 8 ಆನೆಗಳ ಪಟ್ಟಿ ಬಹುತೇಕ ಖಚಿತವಾಗಿದೆ.

ದಸರಾದಲ್ಲಿ ಭಾಗಿಯಾಗಲಿರುವ ಆನೆಗಳು ಆಯ್ಕೆ ಮಾಡಲಾಗಿದ್ದು ಗೋಪಿ(43), ಪ್ರಶಾಂತ್‌ (52),  ಧನಂಜಯ (42), , ವಿಕ್ರಮ್‌ (59), ವಿಜಯ (53), ಲಕ್ಷ್ಮಣ (34)  ಕಾವೇರಿ ಹಾಗೂ ಕಾಂಚನ್  (44) ಗಳು ದಸರಾ ಜಂಬುಸವಾರಿಯಲ್ಲಿ ಹೆಜ್ಜೆ ಹಾಕಲಿವೆ. ಸದ್ಯ

Latest Videos

undefined

ಸದ್ಯ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿರುವ ದಸರಾ ಆನೆಗಳಿಗೆ ವಿಶೇಷ ಕಾಳಜಿವಹಿಸಿ ನೋಡಿಕೊಳ್ಳಲಾಗ್ತಿದೆ. ಮೈಸೂರು ವನ್ಯಜೀವಿ ವಿಭಾಗ ಡಿಸಿಎಫ್ ಸೌರಭ್(Mysore Wildlife Department DCF Saurabh) ನೇತೃತ್ವದ ತಂಡದಿಂದ ಆನೆಗಳ ಆಯ್ಕೆ ಮಾಡಲಾಗಿದ್ದು ಮುಂದಿನ ತಿಂಗಳು ಸೆಪ್ಟೆಂಬರ್ 1 ರಂದು ದುಬಾರೆ ಸಾಕಾನೆ ಶಿಬಿರದಿಂದ ಮೈಸೂರಿನತ್ತ  ಹೊರಡಲಿರುವ ಗಜಪಡೆ.

ನಾಡಹಬ್ಬ ದಸರಾದಲ್ಲಿ ಸಕ್ರೆಬೈಲಿನ ಆನೆಗಳಿಗೆ ಅವಕಾಶ ಸಿಗಲಿದೆಯೇ?

 ಈ ಬಾರಿಯ ದಸರಾ ಮಹೋತ್ಸವಕ್ಕೆ ಸೆಪ್ಟೆಂಬರ್‌ 1ಕ್ಕೆ ಗಜಪಯಣ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 14 ಆನೆಗಳು ಮೈಸೂರಿಗೆ ಬರಲಿದ್ದು, ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಸಾಂಪ್ರ ದಾಯಿಕವಾಗಿ ಗಜಪಯಣ ಆಯೋಜಿಸಲಾಗಿದೆ 

Mysuru Dasara: ಈ ಸಲ ಮೈಸೂರು ದಸರಾದಲ್ಲಿ ಗ್ಯಾರಂಟಿ ಟ್ಯಾಬ್ಲೋ!

click me!