ಮೂಡಿಗೆರೆ ಶಾಸಕಿ 'ನಯನಾ ಮೋಟಮ್ಮ' ಲಿಬರಲ್ ಹಾ? ಪಾರಂಪರಿಕಳಾ? ಅವರದ್ದೇ ಉತ್ತರ ಇಲ್ಲಿದೆ ನೋಡಿ!

Published : Jul 30, 2025, 04:19 PM ISTUpdated : Jul 30, 2025, 04:21 PM IST
Nayana Motamma

ಸಾರಾಂಶ

ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಲಿಬರಲ್ ಮತ್ತು ಪಾರಂಪರಿಕ ನಡುವಿನ ತೂಗಾಟದ ಬಗ್ಗೆ ಚರ್ಚೆ. ಕೇಸರಿ ಶಾಲು ಧರಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಆಧುನಿಕ ಉಡುಗೆ ತೊಡುಗೆಗಳನ್ನು ಧರಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

ಚಿಕ್ಕಮಗಳೂರು (ಜು.30): ಮೂಡಿಗೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ಹೆಂಗೆ ಎಂದು ಜಡ್ಜ್ ಮಾಡುವುದೇ ದೊಡ್ಡ ಸವಾಲಾಗಿದೆ. ಒಂದೊಂದು ಬಾರಿ ಮಾಡ್ರನ್ ಆಗಿ ಕಂಡರೆ, ಮತ್ತೊಮ್ಮೆ ಸೀರೆಯುಟ್ಟು ಅಪ್ಪಟ ಭಾರತೀಯ ನಾರಿ ಆಗಿಬಿಡುತ್ತಾರೆ. ಅಪ್ಪಟ ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದರೂ, ಕೆಲವೊಮ್ಮೆ ಕೇಸರಿ ಶಾಲು ಹಾಕಿ ಭಗವಾಧ್ವಜ ಕಟ್ಟೆ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಇವರು ಲಿಬರಲ್ ಹಾ? ಪಾರಂಪರಿಕಳಾ ಎಂಬ ಬಗ್ಗೆ ಸ್ವತಃ ನಯನಾ ಮೋಟಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ನಾನು ಹೇಗೆ ಅಂತಾ ಅರ್ಥ ಮಾಡಿಕೊಳ್ಳಲಾಗದ ಕೆಲವರ ಸ್ಥಿತಿ ಕಂಡು ನನಗೆ ಆಶ್ಚರ್ಯ ಆಗುತ್ತದೆ. ಇವರೇನು 'ಲಿಬರಲ್' ಹಾ ? ಇಲ್ಲಾ ಪಾರಂಪರಿಕಳಾ ? ಈ ಪ್ರಶ್ನೆ ಹಲವರ ತಲೆ ಕೆಡಿಸಿದೆ. ಆಧುನಿಕತೆಗೆ ಹೊಂದಿಕೊಂಡಂತೆ ನಾ ಕಾಣಿಸಿದ್ರೆ, ಅತಿರೇಕ ಮನೋಭಾವದವರು ನನ್ನ ವೈಯಕ್ತಿಕ ಫೋಟೋ-ವಿಡಿಯೋಗಳನ್ನ ಹರಿಬಿಟ್ಟು ಟೀಕೆ ಮಾಡ್ತಾರೆ.

ಅದೇ ನಾನು ಕೇಸರಿ ಶಾಲು ಹಾಕಿದ್ರೆ, ಕೆಲ ಲಿಬರಲ್ಸ್ ಗಳು ನನ್ನ ಉದ್ದೇಶ ಅಥವಾ ನಿಷ್ಠೆಯನ್ನೇ ವಿಚಿತ್ರವಾಗಿ ಪ್ರಶ್ನೆ ಮಾಡ್ತಾರೆ. ವಿಶೇಷ ಅಂದ್ರೆ ಇವರ್ಯಾರು ನನಗೆ ಬೆಂಬಲ ನೀಡಲ್ಲ. ನೋಡಿ‌... ಈ ಯಾವುದೇ ವಿಷಯಗಳ ಬಗ್ಗೆ ಬೇಸರ ಅಥವಾ ಗೊಂದಲ ನನಗಿಲ್ಲ. ನನ್ನ ಆಯ್ಕೆಗಳ ಬಗ್ಗೆ ನನಗೆ ಸ್ಪಷ್ಟತೆಯಿದೆ. ನಿಮ್ಮಲ್ಲೊಬ್ಬರೂ ಸಹ ನನ್ನನ್ನು ನೀವು ಬಯಸೋ ಆ ಚೌಕಟ್ಟಿನಲ್ಲಿಡಲು ಪ್ರಯತ್ನ ಮಾಡ್ಬೇಡಿ – ನಾನು ಅದಕ್ಕೆ ಸರಿ ಹೊಂದಲ್ಲ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಪೋಸ್ಟ್ ಹಂಚಿಕೊಳ್ಳುವುದಕ್ಕೂ ಒಂದು ಕಾರಣವಿದೆ.

ನಿನ್ನೆ ಮೂಡಿಗೆರೆಯಲ್ಲಿ ಹಿಂದು ಸಂಗಮ ಮಹಾರ್ಯಾಲಿ ಮತ್ತು ನೂತನ ಭಗವಧ್ವಜ ಕಟ್ಟೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪರ ವಿರೋಧ ಚರ್ಚೆಗಳು ನಡೆದಿದ್ದವು. ಪಾರ್ವತೀಶ ಬಿಳಿದಾಲೆ ಎನ್ನುವವರು 'ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರ ಕೊಲೆಯನ್ನು ಸಮರ್ಥಿಸಿಕೊಂಡವರ, ಕರ್ನಾಟಕದಲ್ಲಿ ಭಜರಂಗ ದಳದ ಹೆಸರಿನಲ್ಲಿ ಕೋಮುವಾದಿ ಬ್ರಾಹ್ಮಣ್ಯ ಹಾಗೂ ಭಯೋತ್ಪಾದನೆಯನ್ನು ಹರಡುತ್ತಿರುವ ಪ್ರಮೋದ್ ಮುತಾಲಿಕ್ ಜೊತೆ ವೇದಿಕೆಯಲ್ಲಿ ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮನವರು. ಇಂಥವರೇ ಕರ್ನಾಟಕ ದ್ರೋಹಿಗಳು' ಎಂದು ಪೋಸ್ಟ್ ಹಂಚಿಕೊಂಡಿದ್ದರು. ಹೀಗೆ ಹಲವು ಪೋಸ್ಟ್‌ಗಳು ತಮ್ಮ ಪರ-ವಿರೋಧ ಬಂದಿದ್ದಕ್ಕಾಗಿ ಇದೀಗ ಸ್ಪಷ್ಟನೆ ಕೊಡುವಂತೆ ನಯನಾ ಮೋಟಮ್ಮ ಒಂದು ಸಂದೇಶ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

ಇನ್ನು ನಯನಾ ಮೋಟಮ್ಮ ಅವರ ಪೋಸ್ಟ್ ಬಗ್ಗೆ ಕಾಮೆಂಟ್ ಮಾಡಿದ ಹರೀಶ್ ಯಗಚೀಕಟ್ಟೆ ಎನ್ನುವವರು 'ನೀವು ಶಾಸಕರಾಗಲಿ ರಾಜಕೀಯ ಅಧಿಕಾರ ವಾಗಲಿ, ಬಂದಿರುವುದು ಯಾವುದೇ ಧರ್ಮ ಆರ್‌ ಎಸ್ ಎಸ್‌ ನಿಂದಲ್.ಲ ಅಲ್ಲಿನ ವಾಸ್ತವ ಅಲ್ಲಿನ ರಾಜಕಾರಣ ಅಲ್ಲಿನ ರಾಜಕೀಯ ಅಧಿಕಾರಕ್ಕೆ ಹಿಂದುತ್ವವಾದಿ ಆಗಿದ್ದೀರಷ್ಟೇ.. ಆದರೆ ನಿಮ್ಮ ಅಧಿಕಾರದ ಮೂಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಹೊರತು, ನಿಮ್ಮ ಹಿಂದೂ ಧರ್ಮ ಅಲ್ಲ. ನೀವು ಅದನ್ನು ಪ್ರತಿನಿಧಿಸಿದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಅದನ್ನು ಪ್ರತಿನಿಧಿಸುವ ಅದನ್ನು ಪ್ರತಿಬಿಂಬಿಸುವ ಯಾವುದಾದರೂ ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿ ಸಂವಿಧಾನದ ತೂಕವನ್ನು, ಮೂಡಿಗೆರೆ ಶಾಸಕ ಸ್ಥಾನದ ಘನತೆ ಗೌರವವನ್ನು, ಎತ್ತಿ ಹಿಡಿಯಬೇಕೆಂದು ಈ ಮೂಲಕ ಮಾನ್ಯ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೆ ತರುತ್ತೇವೆ ತಂದೆ ತರುತ್ತೇವೆ ಎಂದು ಟೀಕೆ ಮಾಡಿದ್ದಾರೆ.

ಅನಿಲ್ ಚಂದ್ರು (Anil Chandru) ಅವರು ಕಾಮೆಂಟ್ ಮಾಡಿ, 'ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರ ನಡೆ, ಸರಿ ಇಲ್ಲಾ, ಬುದ್ಧಿ ಕಮ್ಮಿಯಾಗಿದೆ, ಕೋಮುವಾದಿಗಳೊಂದಿಗೆ ಕೈ ಜೋಡಿಸದ್ದಾರೆ ಇವೆಲ್ಲ ಬರವಣಿಗೆಗಳಿಗೆ, ಯಾರು ನೊಂದುಕೊಳ್ಳುವುದು ಇಲ್ಲಾ, ಬೇಸರ ಪಡೋದು ಇಲ್ಲಾ. ಕಾರಣ ಇಷ್ಟೇ ಗಣಪತಿ ಎಂಬ ದೇವರು ಕೋಮುವಾದಿಯು ಅಲ್ಲಾ, ಬಿಜೆಪಿಯ ಸದಸ್ಯನು ಅಲ್ಲಾ. ಗಣೇಶ ಚತುರ್ಥಿ, ಪ್ರತಿಷ್ಠಾಪನೆ ಕಾರ್ಯಕ್ಕೆ ಶ್ರೀಮತಿ ನಯನ ಮೋಟಮ್ಮ ಕಾರ್ಯಧ್ಯಕ್ಷರು, ಧರ್ಮ ಕೆಲಸದಲ್ಲಿ ಪಾಲ್ಗೊಂಡಿದ್ದು ಅಪರಾಧವೆ? ನಡೆದ ಕಾರ್ಯಕ್ರಮ ಯಾವುದೇ ಪಕ್ಷದ ಸಭೆ ಅಥವಾ ಸಮಾರಂಭ ಅಲ್ಲಾ. ಸ್ವಲ್ಪ ವಿವೇಚನೆ ಇಟ್ಟು ಆಲೋಚಿಸಿ,,,, ಮೊಸರಲ್ಲೂ ಕಲ್ಲು ಹುಡುಕುವ ಮನಸ್ಥಿತಿಯಿಂದ ಹೊರ ಬನ್ನಿ. ಕಾಂಗ್ರೆಸ್ ಪಕ್ಷದ ಶಾಸಕಿಯಾದ ಮಾತ್ರಕ್ಕೆ ಧರ್ಮದ ಕಾರ್ಯದಲ್ಲಿ ಪಾಲ್ಗೊಂಳ್ಳಬಾರದಾ? ಹಾಗಾದರೇ ನಯನ ಮೋಟಮ್ಮ ಚರ್ಚ್ ಗೆ ಹೋಗಿದ್ದಾರೆ, ಮಸೀದಿಗೆ ಹೋಗಿದ್ದಾರೆ, ಜೈನ ಬಸದಿಗಳಿಗೆ ಹೋಗಿದ್ದಾರೆ ಆವಾಗ ಯಾಕಿಲ್ಲ ಈ ಪ್ರಶ್ನೆ? ಹಿಂದೂ ಗಣಪತಿಯ ಸೇವೆಗೆ ಮುಂದಾದರೆ ತಪ್ಪೇ? ಎಂದು ಕೇಳಿದ್ದಾರೆ.

ಮುಂದುವರೆದು ನಯನಾ ಮೋಟಮ್ಮ ಭಾಗಿಯಾಗಿದ್ದು ಸರಿಯಲ್ಲ ಎಂದಾದರೆ, ಬಿಜೆಪಿ ನಾಯಕರು, ಸಂಘ ಪಾರಿವಾರದ ನಾಯಕರುಗಳು ಬೇರೆ ಯಾವುದೇ ವೇದಿಕೆ ಹಂಚಿಕೊಂಡಿಲ್ಲವೇ? ನಿಮಗೆ ಯಾರಿಗೂ ಗೊತ್ತಿಲ್ಲವೇ? ಯಾರ ಮೇಲು ಪ್ರಶ್ನೆ ಮಾಡದ ನೀವು, ಒಬ್ಬ ಮಹಿಳಾ ಶಾಸಕಿಯ ಮೇಲೆ ಪ್ರಶ್ನೆಗಳ, ಮೇಲೆ ಪ್ರಶ್ನೆಯನ್ನು ಹಾಕುತ್ತಿರುವ ಉದ್ದೇಶ ಒಂದೇ..., ಮಹಿಳಾ ಶಾಸಕಿಯ ಏಳ್ಗೆಯನ್ನು ನಿಮ್ಮಿಂದ ಸಹಿಸಲು ಆಗುತ್ತಿಲ್ಲ ಎಂಬುದು ಬಿಟ್ಟರೆ ಬೇರೆ ಉದ್ದೇಶ ನಿಮ್ಮದಲ್ಲ. ಒಂದು ಮಾತಿದೆ ಶತ್ರುವನ್ನು ಮಣಿಸಲು, ಆಗದೆ ಇರುವಾಗ ಅಪಪ್ರಚಾರ ಒಂದೇ ಅಸ್ತ್ರ. ಅದನ್ನೇ ನೀವು ಇವಾಗ ಮಾಡುತ್ತಾ ಇರುವುದು ಧನ್ಯವಾದಗಳು ನಿಮಗೆಲ್ಲಾ. ಕಾಂಗ್ರೆಸ್ ಪಕ್ಷಕ್ಕೂ, ನಿನ್ನೆ ನಡೆದ ಗಣಪತಿ ಉತ್ಸವದ ಕಾರ್ಯಕ್ರಮಕ್ಕೂ ನಂಟು ಹುಡುಕುವುದು ಹಾಸ್ಯಸ್ಪದವಲ್ಲದೆ ಬೇರೇನೂ ಇಲ್ಲಾ. ಧಾರ್ಮಿಕ ನಂಬಿಕೆಗೂ, ಪಕ್ಷಕ್ಕೂ ವ್ಯತ್ಯಾಸ ಬಹಳಷ್ಟು ಇದೆ ಅರ್ಥೈಸಿಕೊಳ್ಳಿ. ವಿರೋಧ ಮಾಡೋದು ತಪ್ಪಲ್ಲ, ವಿರೋಧ ಮಾಡಲೇಬೇಕು ಎಂದು ಮಾಡಿದರೆ ಅದು ತಪ್ಪು. ಶಾಸಕರ ಜೊತೆ ನಮ್ಮ ನಡೆ' ಎಂದು ಅನಿಲ್ ಚಂದ್ರು ಅವರು ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌