ಕಡಿಮೆ ವಿದ್ಯುತ್‌ ಬಳಕೆದಾರರಿಗೆ ಗೃಹಜ್ಯೋತಿ ಅಡಿ ಹೆಚ್ಚು ಯುನಿಟ್‌: ಸಚಿವ ಎಚ್‌.ಕೆ.ಪಾಟೀಲ್‌

Published : Jan 19, 2024, 05:23 AM IST
ಕಡಿಮೆ ವಿದ್ಯುತ್‌ ಬಳಕೆದಾರರಿಗೆ ಗೃಹಜ್ಯೋತಿ ಅಡಿ ಹೆಚ್ಚು ಯುನಿಟ್‌: ಸಚಿವ ಎಚ್‌.ಕೆ.ಪಾಟೀಲ್‌

ಸಾರಾಂಶ

ಗೃಹಜ್ಯೋತಿ ಅಡಿಯಲ್ಲಿ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರ ಅರ್ಹತಾ ಬಳಕೆ ಪ್ರಮಾಣವನ್ನು ಶೇ.10ರ ಬದಲಿಗೆ 10 ಯುನಿಟ್‌ಗೆ ಬದಲಾವಣೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದೆ. 

ಬೆಂಗಳೂರು (ಜ.19): ಗೃಹಜ್ಯೋತಿ ಅಡಿಯಲ್ಲಿ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರ ಅರ್ಹತಾ ಬಳಕೆ ಪ್ರಮಾಣವನ್ನು ಶೇ.10ರ ಬದಲಿಗೆ 10 ಯುನಿಟ್‌ಗೆ ಬದಲಾವಣೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ರಾಜ್ಯದಲ್ಲಿ ಗೃಹ ಜ್ಯೋತಿ ಫಲಾನುಭವಿಗಳ ವಿದ್ಯುತ್‌ ಬಳಕೆಯ ಅರ್ಹತಾ ಯುನಿಟ್‌ ಅನ್ನು ವಾರ್ಷಿಕ ಬಳಕೆಯ ವಿದ್ಯುತ್‌ನ ಶೇ.10ರಷ್ಟು ನಿಗದಿ ಮಾಡಲಾಗಿದೆ. 

ಅದರಂತೆ ಸದ್ಯ ರಾಜ್ಯದಲ್ಲಿ ಸದ್ಯ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯುನಿಟ್‌ ಬಳಕೆ ಮಾಡುತ್ತಿದ್ದಾರೆ. ಅದರ ಆಧಾರದಲ್ಲಿ ಆ ಗ್ರಾಹಕರಿಗೆ 58 ಯುನಿಟ್‌ಗಳನ್ನು ಅರ್ಹತಾ ಯುನಿಟ್‌ಗಳನ್ನಾಗಿ ನಿಗದಿ ಮಾಡಲಾಗಿದೆ. ಅದೇ 30 ಯುನಿಟ್‌ಗಳನ್ನು ಬಳಸುವ ಗ್ರಾಹಕರ ಅರ್ಹತಾ ಯುನಿಟ್‌ ಕೇವಲ 33 ಯುನಿಟ್‌ಗಳಾಗಿದೆ. ಇದರಿಂದ ಕಡಿಮೆ ವಿದ್ಯುತ್‌ ಬಳಸುವವರಿಗೆ ಕಡಿಮೆ ಅರ್ಹತಾ ಯುನಿಟ್ ನಿಗದಿಯಾಗಿದೆ.

ರಾಮಮಂದಿರ ಒಂದೇ ಇಟ್ಟುಕೊಂಡು ಬಿಜೆಪಿ ಮುಖಂಡರಿಂದ ರಾಜಕಾರಣ: ಸಚಿವ ಎಚ್.ಕೆ.ಪಾಟೀಲ್‌

ಈ ಸಮಸ್ಯೆಯನ್ನು ಮನಗಂಡು 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಗ್ರಾಹಕರ ವಾರ್ಷಿಕ ಸರಾಸರಿಯಂತೆ ಲೆಕ್ಕ ಹಾಕುವ ಅರ್ಹತಾ ಯುನಿಟ್‌ಗಳನ್ನು ಶೇ.10ರಷ್ಟರ ಬದಲಿಗೆ 10 ಯುನಿಟ್‌ಗಳಿಗೆ ನಿಗದಿ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಅದರಿಂದ 48 ಯುನಿಟ್‌ ಬಳಕೆ ಮಾಡುವವರ ಅರ್ಹತಾ ಯುನಿಟ್‌ 58 ಯುನಿಟ್‌ಗೆ ನಿಗದಿ ಮಾಡಿದಂತಾಗಲಿದೆ. ಈ ಕ್ರಮದಿಂದಾಗಿ ಬೆಸ್ಕಾಂನಲ್ಲಿ 69.73 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಅಲ್ಲದೆ, 10 ಯುನಿಟ್‌ಗಳ ಹೆಚ್ಚಳದಿಂದ 33 ಕೋಟಿ ರು. ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಗ್ಯಾಸ್ ಸಿಲಿಂಡರ್ ಸ್ಫೋಟ - ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು