ರಾಜ್ಯದಲ್ಲಿ 2010ರಲ್ಲಿ ನಡೆದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ.
ಬೆಂಗಳೂರು (ಅ.24): ರಾಜ್ಯದಲ್ಲಿ 2010ರಲ್ಲಿ ನಡೆದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಹೊರಡಿಸಿದೆ. ಆದರೆ, ನಾಳೆಗೆ ಶಿಕ್ಷೆ ಪ್ರಮಾಣವನ್ನೂ ಕಾಯ್ದಿರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಕೋರ್ಟ್‌ನಿಂದ ಸೂಚನೆ ನೀಡಲಾಗಿದೆ.
ಬೆಲೇಕೆರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳಲ್ಲಿ ಇಂದು ಅಂತಿಮ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದ ತನಿಖಾ ಸಂಸ್ಥೆ ಸಿಬಿಐನಿಂದ ಬೇಲೇಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ ದಾಖಲಾದ 6 ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಾದ ಪ್ರತಿವಾದ ಆಲಿಸಿ ಅಂತಿಮ ಆದೇಶವನ್ನು ಹೊರಡಿಸಿದ್ದಾರೆ. ಶಾಸಕ ಸತೀಶ್ ಸೈಲ್, ಅರಣ್ಯಾಧಿಕಾರಿ ಮಹೇಳ್ ಬಿಲಿಯಾ ಸೇರಿ ಹಲವರ ವಿರುದ್ಧದ ಕೇಸ್ ಇದೆ. ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಮಹೇಶ್ ಬಿಳೆಯಿ, ಶಾಸಕ ಸತೀಶ್ ಸೇರಿ ಎಲ್ಲಾ ಆರೋಪಿಗಳು ದೋಷಿಗಳು ಎಂದು ಕೋರ್ಟ್ ತೀರ್ಪು ನೀಡಿದೆ.
ಇದನ್ನೂ ಓದಿ: ಯಾಸೀರ್ ಅಹಮದ್‌ಗೆ ಶಿಗ್ಗಾವಿ ಟಿಕೆಟ್ ಕೊಟ್ಟ ಕಾಂಗ್ರೆಸ್; 6ನೇ ಬಾರಿಯೂ ಮುಸ್ಲಿಮರಿಗೆ ಮಣೆ!
ಇನ್ನು ಬೆಲೇಕೆರಿ ಅದಿರು ನಾಪತ್ತೆ ಕೇಸಿನಲ್ಲಿ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಆದೇಶ ನೀಡಿದ ಬೆನ್ನಲ್ಲಿಯೇ ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟ ಮಾಡಲಿದೆ. ಇದರಿಂದ ಶಾಸಕ ಸತೀಶ್ ಸೈಲ್ ಅವರನ್ನು ಇಂದು ವಶಕ್ಕೆ ಪಡೆಯುವಂತೆ ಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ. ಇನ್ನು ಎಲ್ಲ ಅಪರಾಧಿಗಳಿಗೂ ನಾಳೆ ಶಿಕ್ಷೆ ಪ್ರಮಾಣ ಪ್ರಕಟ ಆಗಲಿದ್ದು, ನಾಳೆಯೇ ಜೈಲಿಗೆ ಕಳುಹಿಸುವ ಸಾಧ್ಯತೆಯಿದೆ. ಆದರೆ, ಶಿಕ್ಷೆಯ ಪ್ರಮಾಣ ಎಷ್ಟು? ಯಾವ ಮಾನದಂಡದ ಮೇಲೆ ಶಿಕ್ಷೆ ನೀಡಲಾಗಿದೆ ಎಂಬುದು ನಾಳೆ ಸಂಜೆ ವೇಳೆಗೆ ಕೋರ್ಟ್ ಆದೇಶದ ನಂತರ ತಿಳಿಯಲಿದೆ.
ಎರಡನೇ ಪ್ರಕರಣದಲ್ಲಿ ಅರಣ್ಯಾಧಿಕಾರಿ ಆಗಿದ್ದ ಮಹೇಶ್ ಬಿಲಿಯೆ ಹಾಗೂ ಶಾಸಕ ಸತೀಶ್ ಕೃಷ್ಣ ಸೈಲ್ ದೋಷಿ ಆಗಿದ್ದಾರೆಎ. ಜೊತೆಗೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಹಾಗೂ ಆಶಾಪುಮೈನೆಚಮ್ ಕಂಪನಿ ಕೂಡ ತಪ್ಪಿತಸ್ಥರೆಂದು ಆದೇಶ ಹೊರಡಿಸಲಾಗುದೆ. ಆದರೆ, ಈ ಆದೇಶದ ನಂತರ ಶಾಸಕ ಸತೀಶ್ ಸೈಲ್ ವಕೀಲರು ಆರೋಪಿಗಳನ್ನ ಇಂದೇ ವಶಕ್ಕೆ ಪಡೆಯದಂತೆ ಮನವಿ ಮಾಡಿದರು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟ ಆಗುವವರೆಗೂ ವಶಕ್ಕೆ ಪಡೆಯದಂತೆ ಮನವಿ ಮಾಡಿದರು. ಆದರೆ, ವಕೀಲರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.
ಇದನ್ನೂ ಓದಿ: ಚನ್ನಪಟ್ಟಣದ ಸೈನಿಕನ ಚಕ್ರವ್ಯೂಹ ಬೇಧಿಸಲು ಅಭಿಮನ್ಯು ಕಳಿಸಿದ ಎನ್‌ಡಿಎ ಮೈತ್ರಿಕೂಟ!
ಮೂರನೇ ಮತ್ತು ನಾಲ್ಕನೇ ಪ್ರಕರಣದಲ್ಲಿಯೂ ಶಾಸಕ ಸತೀಶ್ ಸೈಲ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ನಾಲ್ಕನೇ ಕೇಸಿನಲ್ಲಿ ಮಹೇಶ್ ಬಿಳಿಯೇ, ಸ್ವಸ್ತಿಕ್ ನಾಗರಾಜ್, ಕೆವಿಎನ್ ಗೋವಿಂದರಾಜು ಹಾಗೂ ಶಾಸಕ ಸತೀಶ್ ಕೃಷ್ಣ ಸೈಲ್ ಅಪರಾಧಿಗಳಾಗಿದ್ದಾರೆ. ಇನ್ನು ಐದನೇ ಪ್ರಕರಣದಲ್ಲಿಯೂ ಶಾಸಕ ಸತೀಶ್ ಸೈಲ್ ದೋಷಿ ಆಗಿದ್ದು, ಇವರೊಂದಿಗೆ ಮಹೇಶ್ ಬಿಳಿಯೇ, ಮಹೇಶ್ ಕುಮಾರ್ ಕೆ ಅಪರಾಧಿಗಳಾಗಿದ್ದಾರೆ. ಮತ್ತೊಂದೆಡೆ ಕೊನೆಯ ಪ್ರಕರಣ 6ನೇ ಪ್ರಕರಣದಲ್ಲೂ ಶಾಸಕ ಸತೀಶ್ ಸೈಲ್ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಮಹೇಶ್ ಬಿಳಿಯೇ, ಪ್ರೇಮ್ ಚಂದ್ ಗರ್ಗ್, ಸುಶೀಲ್ ಕುಮಾರ್ ವಲೇಚ, ಸತೀಶ್ ಕೃಷ್ಣ ಸೈಲ್ ಹಾಗೂ ರಾಜ್ ಕುಮಾರ್ ಅಪರಾಧಿಗಳಾಗಿದ್ದಾರೆ.
ನಾಳೆ ಎಲ್ಲ ಆರೋಪಿಗಳು ಹಾಜರಿರಬೇಕು: ಇನ್ನು ಕೋರ್ಟ್ನಿಂದ ನಾಳೆ ಶಿಕ್ಷೆಯ ಪ್ರಮಾಣ ಪ್ರಟಿಸುವ ವೇಳೆ ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರುಪಡಿಸುವಂತೆ ಜಡ್ಜ್ ಸೂಚನೆ ನೀಡಿದೆ. ತಪ್ಪಿತಸ್ಥರೆಂದು ಆದೇಶ ಹೊರಡಿಸಲಾದ ಮಹೇಶ್ ಬಿಲೆಯ, ಶಾಸಕ ಸತೀಶ್ ಸೈಲ್, ಚೇತನ್ ಸಾಹ, ಕೆ.ವಿ.ನಾಗರಾಜ್@ ಸ್ವಸ್ತಿಕ್ ನಾಗರಾಜ್, ಕೆ.ವಿ.ಗೋವಿಂದರಾಜ್, ಖಾರದಪುಡಿ ಮಹೇಶ್, ಪ್ರೇಮ್ ಚಂದ್ ಗರ್ಗ್ ಸೇರಿ ಒಟ್ಟು 7 ದೋಷಿಗಳು ಕೋರ್ಟ್‌ನಲ್ಲಿ ಹಾಜರು ಇರಬೇಕು ಎಂದು ಸೂಚನೆ ನೀಡಿದೆ.