ಜಿ20 ಶೃಂಗಸಭೆಗೆ ಬುದ್ಧಿ ಇರೋರನ್ನ ಕರೆಸ್ತಾರೆ, ರಾಹುಲ್ ಗಾಂಧೀನ ಕರೆಸಿ ಏನು ಮಾಡಬೇಕು: ಯತ್ನಾಳ

By Ravi Janekal  |  First Published Sep 9, 2023, 2:30 PM IST

ಬುದ್ಧಿ ಇರಲಾರದವರನ್ನ ಜಿ20 ಶೃಂಗಸಭೆಗೆ ಕರೆದು ವಿಶ್ವದ ಮುಂದೆ ಅವಮಾನ ಯಾಕೆ ಮಾಡ್ಕೊಳ್ಬೇಕು ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರನ್ನು ಔತಣಕೂಟಕ್ಕೆ ಆಹ್ವಾನಿಸದಿರುವ ಬಗ್ಗೆ ಸಮರ್ಥಿಸಿಕೊಂಡರು.


ವಿಜಯನಗರ (ಸೆ.9): ಬುದ್ಧಿ ಇರಲಾರದವರನ್ನ ಜಿ20 ಶೃಂಗಸಭೆಗೆ ಕರೆದು ವಿಶ್ವದ ಮುಂದೆ ಅವಮಾನ ಯಾಕೆ ಮಾಡ್ಕೊಳ್ಬೇಕು ಎಂದು ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರನ್ನು ಔತಣಕೂಟಕ್ಕೆ ಆಹ್ವಾನಿಸದಿರುವ ಬಗ್ಗೆ ಸಮರ್ಥಿಸಿಕೊಂಡರು.

ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಔತಣಕೂಟಕ್ಕೆ  ಆಹ್ವಾನಿಸದಿರುವುದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ರೆ, ಬಂದು ಏನಾದ್ರೂ ಸಂಬಂಧವಿಲ್ಲದ್ದು ಮಾತಾಡಿ ಅನಾಹುತ ಮಾಡಿದ್ರೆ ಏನು ಮಾಡೋದು. ಇದು ದೇಶದ ಮರ್ಯಾದೆ ಪ್ರಶ್ನೆ ವಿಶ್ವದ ನಾಯಕರ ಎದುರು ಮಾತನಾಡುವಾಗ ಸ್ವಲ್ಪ ಬುದ್ದಿಗಿದ್ದಿ ತಿಳಿವಳಿಕೆ ಇರೋರನ್ನ ಕರಿತಾರೆ. ಸದ್ಯ ರಾಹುಲ್ ಗಾಂಧಿನ ಕರೆಯಲಾರದೆ ಬರೋಬ್ಬರಿ ಮಾಡ್ಯಾರ ಎಂದು ವ್ಯಂಗ್ಯ ಮಾಡಿದರು.

Tap to resize

Latest Videos

undefined

ದೇಶಾದ್ಯಂತ ವಕ್ಫ್ ಬೋರ್ಡ್ ರದ್ದಾಗಬೇಕು: ಶಾಸಕ ಯತ್ನಾಳ್

ಇಡೀ ವಿಶ್ವವೇ ಇಂದು ಭಾರತದಲ್ಲಿ ಬಂದು ಕುಳಿತಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಪಂಚದ ಗಣ್ಯವ್ಯಕ್ತಿಗಳು ಬಂದು ಕುಳಿತಿದ್ದಾರೆ.     ಆರ್ಥಿಕತೆ, ವೈಜ್ಞಾನಿಕವಾಗಿ ನಾವು ಇತರೆ ರಾಷ್ಟಗಳಿಗಿಂತ ಮುಂದಿದ್ದೇವೆ. ಇಂದಿನ ಜಿ 20 ಸಭೆಯಲ್ಲಿ ಭಾರತದ ಆರ್ಥಿಕ, ತಂತ್ರಜ್ಞಾನದ ಶಕ್ತಿಯಿಂದಾಗಿ ಭಾರತ ವಿಶ್ವಗುರುವಾಗುತ್ತದೆ ಅಂತಾ ಸಂದೇಶ ಹೋಗುತ್ತದೆ ಎಂದರು.
 
ಇಂಡಿಯಾ-ಭಾರತ ಚರ್ಚೆ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂದಾಗಲಿ, ಮುಂದಾಗಲಿ ಭಾರತ ಭಾರತವಾಗಿಯೇ ಇರುತ್ತೆ. ಇಂಡಿಯಾ ಅನ್ನೋದು ನಮ್ಮ ದೇಶದ ಹೆಸರಲ್ಲ, ಅದು ಬ್ರಿಟಿಷರು ಇಟ್ಟು ಹೋಗಿರೋ ಹೆಸರು. ಬ್ರಿಟಿಷರಿಗೆ ಕೆಲವೊಂದು ಊರಿನ ಹೆಸರು ಹೇಳೋಕೆ ಬರ್ತಿದ್ದಿಲ್ಲ ಹಾಗಾಗಿ ತಮ್ಮ ಅನುಕೂಲಕ್ಕಾಗಿ ಭಾರತವನ್ನ ಇಂಡಿಯಾ ಮಾಡಿರೋದು ಬ್ರಿಟಿಷರು. ನಾವು ಇಂಡಿಯಾ ಅಲ್ಲ, ಭಾರತ ಎಂದರು. ಇದೇ ವೇಳೆ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ನಮಗೆ ಗೊತ್ತಿಲ್ಲ. ನಮಗೆ ಯಾವುದೆ ಅಧಿಕೃತ ಆದೇಶವಿನ್ನೂ ಬಂದಿಲ್ಲ. ಯಡಿಯೂರಪ್ಪನವರು ಹೇಗೆ ಹೇಳಿದ್ದಾರೋ ಅದು ನಮಗೆ ಗೊತ್ತಿಲ್ಲ ಹೀಗಾಗಿ ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು

Loksabha election: ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ; ಯಾರಿಂದಲೂ ತಪ್ಪಿಸೋಕೆ ಆಗಲ್ಲ: ಯತ್ನಾಳ್

click me!