
ಬೆಳ್ತಂಗಡಿ (ಮೇ.29) : ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲಾ ಗಡಿ ಪ್ರದೇಶದ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಚಾರಣಕ್ಕಾಗಿ ಬಂದಿಳಿದಿದ್ದ ಮಹಾರಾಷ್ಟ್ರದ ನಾಗಪುರ ನಿವಾಸಿ, ಬೆಂಗಳೂರಿನಲ್ಲಿ ಸಾ¶್ಟ…ವೇರ್ ಎಂಜಿನಿಯರ್ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಅವರನ್ನು ಆಹೋರಾತ್ರಿ ಕಾರ್ಯಾಚರಣೆಯ ಬಳಿಕ ಸ್ಥಳೀಯರ ತಂಡ ಪತ್ತೆಹಚ್ಚಿದ್ದು, ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿ ಪಾಲ್ಸ್ ಕಡೆಯಿಂದ ಬಂಡಾಜೆ ಎರ್ಮಾಯಿ ಫಾಲ್ಸ್ ಅರಣ್ಯದ ಕಡೆಗೆ ಇಳಿದಿದ್ದ ಟ್ರಕ್ಕಿ, ರಾತ್ರಿಯಾಗುತ್ತಿದ್ದಂತೆ ಹಸಿವಿನಿಂದ ನಿತ್ರಾಣಕ್ಕೊಳಗಾಗಿ ದಾರಿ ಕಾಣದೆ ಅರಣ್ಯದಲ್ಲಿ ಬಾಕಿಯಾಗಿದ್ದ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ: ಕೂದಲೆಳೆ ಅಂತರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಾರು
ದಾರಿ ಕಾಣದೆ ಬೆಂಗಳೂರಿನ ಸಹೋದ್ಯೋಗಿಗೆ ತಾನಿರುವ ಲೊಕೇಶನ್ ಕಳಿಸಿದ್ದ. ಅವರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಅಲ್ಲದೆ ಆ ಸಂದೇಶವನ್ನು ಬೆಂಗಳೂರಿನ ಗ್ರೂಪಿನಲ್ಲಿ ಹಂಚಿಕೊಂಡಿದ್ದರು. ಅದು ಸಂಜೆ ವೇಳೆಗೆ ಚಾರ್ಮಾಡಿಯ ಹೊಟೇಲ್‌ನ ಹನೀಫ್ ಅವರಿಗೆ ಗೊತ್ತಾಗಿ ಅವರು ಚಾರ್ಮಾಡಿಯ ಗ್ರೂಪಿಗೆ ಹಾಕಿದ್ದರು. ಇದನ್ನು ನೋಡಿದ ಸಿನಾನ್ ಚಾರ್ಮಾಡಿ ಅವರು ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಚಾರ್ಮಾಡಿ ವ್ಯಾಪ್ತಿಯ ಸ್ಥಳೀಯರಾದ ಮುಬಾಶಿರ್(ಮುಬ್ಬು), ಕಾಜೂರಿನ ಎರ್ಮಾಲ್ಪಲ್ಕೆ ಅಶ್ರಫ್, ಕಾಜೂರಿನ ಶಂಶು, ನಾಸೀರ್ ಕಾಜೂರ್ ಅವರ ತಂಡ ಸೇರಿ ಹುಡುಕಾಟ ಕಾರ್ಯಾಚರಣೆ ನಡೆಸಿದರು.
ಸುಧೀರ್ ವಳಂಬ್ರ(Sudheer balambra), ಜನಾರ್ದನ, ಪೊಲೀಸ್ ಇಲಾಖೆಯ ಶಶಿಧರ, ಆಸಿಫ್ ಸೋಮಂತಡ್ಕ, ಜೀವರಕ್ಷಕ ಆಂಬುಲೆ®್ಸ ಚಾಲಕ ಜಲೀಲ್ ಬಾಬಾ ಅವರು ಸೇರಿ ಪತ್ತೆಗೆ ಸಾಥ್ ಕೊಟ್ಟಿದ್ದಾರೆ.
ರಾತ್ರಿ ಇಡೀ ಕಾರ್ಯಾಚರಣೆ
ಸಿನಾನ್ ಚಾರ್ಮಾಡಿ ನೇತೃತ್ವದ ಒಂದು ತಂಡ ಮತ್ತು ಜಲೀಲ…, ಶಶಿಧರ ಅವರ ನೇತೃತ್ವದ ಎರಡು ತಂಡಗಳಾಗಿ ಪತ್ತೆ ಕಾರ್ಯಾಚರಣೆ ನಡೆದಿದೆ. ಸಂಜೆ 5 ಗಂಟೆಗೆ ಹೊರಟ ತಂಡ 12 ಗಂಟೆ ರಾತ್ರಿಗೆ ದಟ್ಟಅರಣ್ಯದಲ್ಲಿ ಚಾರಣಿಗನನ್ನು ಪತ್ತೆ ಹಚ್ಚಿದೆ. ಆವರಿಸಿದ ಕತ್ತಲೆ, ಜಾರುವ ಬಂಡೆಕಲ್ಲುಗಳ ಅಪಾಯಕಾರಿ ಇಳಿಜಾರು ಪ್ರದೇಶ, ಇಂಬಳಗಳ ತೀವ್ರ ಕಾಟ ಇದರ ಮಧ್ಯೆ ಮರಗಳ ಮೇಲೆ ಹತ್ತಿಕೊಂಡು ಸಾಹಸಮಯವಾಗಿ ತಂಡ ಅಲ್ಲಿ ತಲುಪುವಷ್ಟರಲ್ಲಿ ಟ್ರಕ್ಕಿ ಹಸಿವು ಮತ್ತು ಭಯದಿಂದ ತತ್ತರಿಸಿ ತೀವ್ರ ಬಸವಳಿದು ಹೋಗಿದ್ದ. ಬಿಸ್ಕೆಟ್ ಮತ್ತು ಪಾನೀಯ ಕುಡಿಸಿ ಸ್ವಲ್ಪ ಸುಧಾರಿಸಿಕೊಂಡು ಅಲ್ಲಿಂದ ಆತನನ್ನು ಹೊತ್ತುಕೊಂಡು ಬೆಳಗ್ಗೆ 4.30ರ ವೇಳೆಗೆ ಕಾಜೂರಿಗೆ ಕರೆತರಲಾಯಿತು. ತಂಡಕ್ಕೆ ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟರಲ್ಲಿ ಎಲ್ಲರೂ ದೈಹಿಕವಾಗಿ ಸೋತುಹೋಗಿದ್ದರು.
ಟ್ರಕ್ಕಿ ಸಿಲುಕಿಕೊಂಡಿದ್ದ ಪ್ರದೇಶದಲ್ಲಿ ಸಮರ್ಪಕ ನೆಟ್ವರ್ಕ್ ಕೂಡ ಇರಲಿಲ್ಲ. ಆಗಾಗ ಅಲ್ಪ ಸ್ವಲ್ಪ ಸಂಪರ್ಕ ಬಳಸಿ ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಎದುರಿಗೇ ಸಿಕ್ಕಿದ ಕಾಡಾನೆಯಿಂದ ತಂಡ ಪಾರು
ಟ್ರಕ್ಕಿಯನ್ನು ಸುರಕ್ಷಿತವಾಗಿ ಕರೆತರುವ ಮಧ್ಯೆ ಕಡಿರುದ್ಯಾವರ, ಮಿತ್ತಬಾಗಿಲು ಗ್ರಾಮದ ವ್ಯಾಪ್ತಿಗೆ ಬರುತ್ತಿದ್ದಂತೆ ಬೆಳಗ್ಗಿನ ಜಾವ 4 ಗಂಟೆಗೆ ಕಾಡಾನೆಯೊಂದು ತಂಡಕ್ಕೆ ಎದುರಾಯಿತು. ತಂಡದಲ್ಲಿದ್ದ ಜನಾರ್ದನ ಅವರಿಗೆ ಪೂರ್ವ ಮಾಹಿತಿ ಇದ್ದುದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಇಳಿಜಾರಿಗೆ ಇಳಿದು ಆನೆಯಿಂದ ರಕ್ಷಿಸಿಕೊಂಡೆವು ಎಂದು ತಂಡದಲ್ಲಿದ್ದ ಜಲೀಲ್ ಅವರು ಪ್ರತಿಕ್ರಿಯಿಸಿದ್ದಾರೆ.
ದುಬಾರಿಯಾಯ್ತು ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟ ಪ್ರವೇಶ: ಚಾರಣಿಗರ ಆಕ್ರೋಶ
* ಆಂಬುಲೆನ್ಸ್… ಮೂಲಕ ಬಾಳುಪೇಟೆ ಠಾಣೆಗೆ ರವಾನೆ
ಪತ್ತೆಯಾದ ಚಾರಣಿಗ ಎಂಜಿನಿಯರ್‌ನನ್ನು ಉಪಚರಿಸಿ ಬಳಿಕ ಜಲೀಲ್ ಅವರ ಆಂಬುಲೆ®್ಸ… ಮೂಲಕ ಅವರು ತಂಗಿದ್ದ ರೆಸಾರ್ಚ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಬ್ಯಾಗ್ ತೆಗೆದುಕೊಂಡು ಅವರು ಅರಣ್ಯಕ್ಕೆ ಪ್ರವೇಶಿಸಿದ್ದ ರಾಣಿಗೇರಿ ಗುಡ್ಡೆಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರ ಬೈಕ್ ತೆಗೆದುಕೊಂಡು ಬಳಿಕ ಅವರನ್ನು ಬಾಳುಪೇಟೆ ಠಾಣೆಗೆ ಕರೆದೊಯ್ಯಲಾಯಿತು.
ಒಬ್ಬಂಟಿಯಾಗಿ ಚಾರಣಕ್ಕೆ ಬಂದಿದ್ದ ಎಂಜಿನಿಯರ್ ಬೆಳಗ್ಗೆ ಮ್ಯಾಗಿ ತಿಂದು ಕಾಡಿನ ಕಡೆಗೆ ಬಂದಿದ್ದ. ಸಂಜೆಯಾಗುತ್ತಿದ್ದಂತೆ ಹಸಿವಿನಿಂದ ಬಳಲಿ ದಾರಿ ಕಾಣದೆ ತೊರೆಯ ನೀರು ಸೇವಿಸಿ ಅಲ್ಪ ತ್ರಾಸ ನೀಗಿಸಿಕೊಂಡಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ