ರಾಜ್ಯದ ಸಾರಿಗೆ ಸಂಸ್ಥೆ ನೌಕರರು ಕಳೆದ ನಾಲ್ಕು ದಿನಗಳಿಂದಲೂ ಮುಷ್ಕರ ನಡೆಸುತ್ತಿದ್ದು ಸಚಿವ ಆರ್ ಅಶೋಕ್ ಮುಷ್ಕರ ನಿರತ ನೌಕರರಲ್ಲಿ ಮನವಿ ಮಾಡಿದ್ದಾರೆ. ಮುಷ್ಕರ ನಿಲ್ಲಿಸಲು ಕೋರಿದ್ದಾರೆ,
ಬೆಳ್ತಂಗಡಿ (ಏ.10): ಇಂದಿನ ಸಂಕಷ್ಟಸಮಯದಲ್ಲೂ ಸಾರಿಗೆ ನೌಕರರು ಹಲವಾರು ಬೇಡಿಕೆ ಇರಿಸಿ ಮುಷ್ಕರ ನಡೆಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಮುಳುಗುತ್ತಿರುವ ಹಡಗುಗಳಾಗಿದ್ದು ಇವುಗಳನ್ನು ಇನ್ನಷ್ಟು ರಂಧ್ರ ತೋಡಿ ಮುಳುಗಿಸುತ್ತಿರುವ ಪ್ರಯತ್ನ ಸರಿಯಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಶುಕ್ರವಾರ ಬೆಳ್ತಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶ, ರಾಜ್ಯ ಕಷ್ಟದಲ್ಲಿದೆ. ಸಂಬಳ ಕೊಡಲಿಕ್ಕಾಗದೆ ಬಹಳಷ್ಟುರಾಜ್ಯಗಳು ಅಲ್ಲಿನ ಕಾರ್ಮಿಕರಿಗೆ ಶೇ.60 ಸಂಬಳ ಕೊಡುತ್ತಿದೆ.
undefined
ಉತ್ತರ ಕರ್ನಾಟಕ ಜನರು ತೋರಿದ ಪ್ರೀತಿಗೆ ನಾನು ಋಣಿ: ಸಚಿವ ಅಶೋಕ್
ಆದರೆ, ನಮ್ಮ ಸರ್ಕಾರ ಎಲ್ಲ ಕಾರ್ಮಿಕರಿಗೂ ಪೂರ್ತಿ ಸಂಬಳ ಕೊಟ್ಟಿದೆ. ಸಾರಿಗೆ ನೌಕರರಿಗೆ ಲಾಕ್‌ಡೌನ್ ಸಮಯದಲ್ಲೂ ಸಂಬಳ ಕೊಟ್ಟಿದ್ದೇವೆ. ಸಾರಿಗೆ ಸಂಸ್ಥೆಗಳು ಮುಳುತ್ತಿರುವ ಹಡಗಿನಂತಿದ್ದು, ನಷ್ಟದಲ್ಲಿವೆ. ಇಂತಹ ಸಂದರ್ಭದಲ್ಲೂ ಸರ್ಕಾರ ಸಾಲ ಮಾಡಿ ಸಂಬಳ ಕೊಡುತ್ತಿದೆ. ಆದರೂ ಯಾರದ್ದೋ ಮಾತು ಕೇಳಿ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದು ಸರಿಯಲ್ಲ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಅವರಿಂದಾಗಿ ಇಡೀ ಕರ್ನಾಟಕದಲ್ಲಿ ರೈತರು ತಾವು ಬೆಳೆದ ಬೆಳೆ, ತರಕಾರಿಯನ್ನು ಮಾರುಕಟ್ಟೆಗೆ ತಂದು ಹಾಕಲಾಗದ ಸ್ಥಿತಿ ನಿರ್ಮಾಣವಾಗಿದೆ. ರೈತರು ಕಂಗಾಲಾಗಿದ್ದಾರೆ. ರೈತರಿಗೆ, ಜನಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ ಎಂದರು.