ಸಿಎಂ ಸಿದ್ದರಾಮಯ್ಯನವರು ಬಜೆಟ್ ಓಪನ್ ಮಾಡುವ ಮೊದಲೇ ಬಿಜೆಪಿಯವರು ಬಜೆಟ್‌ನಲ್ಲಿ ಏನಿಲ್ಲ.., ಅದು ಇಲ್ಲ, ಇದು ಇಲ್ಲ ಅಂತಾ ವಿರೋಧ ಮಾಡಿದ್ರು. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ನಂಬಿಕೆ ಇಲ್ಲದವರು ಮಾತ್ರ ಹೀಗೆ ವಿರೋಧ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ಸಚಿವ ಎನ್‌ಎಸ್ ಬೋಸರಾಜು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು (ಫೆ.17): ಸಿಎಂ ಸಿದ್ದರಾಮಯ್ಯನವರು ಬಜೆಟ್ ಓಪನ್ ಮಾಡುವ ಮೊದಲೇ ಬಿಜೆಪಿಯವರು ಬಜೆಟ್‌ನಲ್ಲಿ ಏನಿಲ್ಲ.., ಅದು ಇಲ್ಲ, ಇದು ಇಲ್ಲ ಅಂತಾ ವಿರೋಧ ಮಾಡಿದ್ರು. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ನಂಬಿಕೆ ಇಲ್ಲದವರು ಮಾತ್ರ ಹೀಗೆ ವಿರೋಧ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ಸಚಿವ ಎನ್‌ಎಸ್ ಬೋಸರಾಜು ಆಕ್ರೋಶ ವ್ಯಕ್ತಪಡಿಸಿದರು.
ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬರುತ್ತಾ ಬರುತ್ತಾ ಸಂವಿಧಾನ ವಿರೋಧಿಗಳು ಆಗುತ್ತಿದ್ದಾರೆ. ಅವರಿಗೆ ನಮ್ಮ ಸರ್ಕಾರ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದು ಸಹಿಸಲಾಗುತ್ತಿಲ್ಲ. ಈಗಲೇ ಅಸಮಾಧಾನ ಶುರುವಾಗಿದೆ. ರಾಜ್ಯದಲ್ಲಿ ಹೇಳಲು ಅವರಿಗೆ ಯಾವುದೇ ಅವಕಾಶಗಳಿಲ್ಲ. ಹೀಗಾಗಿ ಬಿಜೆಪಿ ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಮಾಡುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತವೆ ಎಂದರು.
undefined
ಸಿಎಂ ಸಿದ್ದರಾಮಯ್ಯ ವಿಶ್ವಗುರು ಬಸವಣ್ಣರಂತೆ: ಸಚಿವ ಶಿವರಾಜ ತಂಗಡಗಿ
ನಾವು ಅಧಿಕಾರಕ್ಕೆ ಬರುವ ಮೊದಲು ರಾಜ್ಯದ ಜನತೆ ಗ್ಯಾರಂಟಿ ಆಶ್ವಾಸನೆ ಕೊಟ್ಟಿದ್ದೆವು ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಕೊಡಲು ಆಗೊಲ್ಲ ಎಂದು ಪ್ರಧಾನಿ ಮೋದಿ ಸೇರಿದಂತೆ ಎಲ್ಲರೂ ಹೇಳಿದ್ದರು. ಗ್ಯಾರಂಟಿ ಯೋಜನೆಗೆ ಸರ್ಕಾರದ ಬಳಿ ಹಣವಿಲ್ಲ ಎಂದರು. ಆದರೆ ಇಂದು ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳಿಗೇ 52 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ನಾವು ಬಡವರಿಗಾಗಿ ಇರುವ ಗ್ಯಾರಂಟಿಗೆ ದುಡ್ಡು ಇಟ್ಟಿದ್ದು ವಿರೋಧ ಪಕ್ಷಗಳಿಗೆ ಆತಂಕಕಾರಿಯಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗೃಹ ಸಚಿವ ಅಮಿತ್ ಶಾ ಸಹ ಮೈಸೂರಿಗೆ ಬಂದಿದ್ದರು. ಅವರು ಗ್ಯಾರಂಟಿ ಬಗ್ಗೆ ಮಾತನಾಡಿದ್ದಾರೆ. ಅಮಿತ್ ಶಾ ಬಹಳ ಜವಾಬ್ದಾರಿ ಇರುವಂತವರು. ಗ್ಯಾರಂಟಿ ಬಗ್ಗೆ ಮಾತನಾಡಿರುವ ಇವರು ಬರಪೀಡಿತ ರಾಜ್ಯಕ್ಕೆ ಕೇಂದ್ರದಿಂದ ಇದುವರೆಗೆ ಹಣ ನೀಡುತ್ತಿಲ್ಲ. ರಾಜ್ಯಕ್ಕೆ ಬಂದರೂ ಕೇಂದ್ರ ಸಚಿವರಾಗಿ ಒಂದು ಮೀಟಿಂಗ್ ಸಹ ಮಾಡಲು ಸಿದ್ದರಿಲ್ಲ. ರಾಜ್ಯದಲ್ಲಿ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಬೆಳೆಗಳು ನಾಶವಾಗಿವೆ. ಕೇಂದ್ರ ತಂಡ ಬಂದು ಹೋಗಿದ್ದಷ್ಟೇ ಬಂತು ಇದುವರೆಗೂ ರೈತರಿಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದರು.
ಮುಸ್ಲಿಮರು ಹಿಂದುಳಿದ ಸಮುದಾಯದವರು ಅವರಿಗೆ ಹೆಚ್ಚು ಅನುದಾನ ಕೊಟ್ಟರೆ ತಪ್ಪೇನು: ಗೃಹ ಸಚಿವ ಪರಮೇಶ್ವರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿಹಾಕಬೇಕು. ಜನರಿಗೆ ಈ ಸರ್ಕಾರದಿಂದ ಏನೂ ಮಾಡಲು ಆಗಿಲ್ಲ ಎಂದು ತೋರಿಸಬೇಕು ಇಂತಹ ಏಕೈಕ ಉದ್ದೇಶದಿಂದ ಬಿಜೆಪಿ ನಾಯಕರು ಹೀಗೆ ಮಾಡುತ್ತಿದ್ದಾರೆ. ಆದರೆ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮೇಲೆ ಸಾಕಷ್ಟು ವಿಶ್ವಾಸವಿದೆ. ನಾವು ಕೊಟ್ಟ ಗ್ಯಾರಂಟಿ ಎಲ್ಲಾ ಜನರಿಗೆ ಮುಟ್ಟಿಸುತ್ತೇವೆ ಎಂದು ಭರವಸೆ ನೀಡಿದರು.