ಪಿಎಫ್‌ಐ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಸಚಿವ ನಿರಾಣಿ-ಮಾಜಿ ಸಚಿವ ಈಶ್ವರಪ್ಪ

By Govindaraj S  |  First Published Sep 28, 2022, 10:02 AM IST

ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿ, ಸಾರ್ವಜನಿಕರ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಒಂದು ಐತಿಹಾಸಿಕ ಕ್ರಮವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಶಂಸಿದ್ದಾರೆ.


ಬೆಂಗಳೂರು (ಸೆ.28): ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡಿ, ಸಾರ್ವಜನಿಕರ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಒಂದು ಐತಿಹಾಸಿಕ ಕ್ರಮವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಶಂಸಿದ್ದಾರೆ. ಕೇಂದ್ರ ಸರಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ನಿಷೇಧ ಕ್ರಮ ಕೈಗೊಂಡಿದೆ. 

ಇದಕ್ಕಾಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವರಾದ ಅಮಿಶ್ ಷಾ  ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ  ಸಚಿವ ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಘಟನೆಗೆ ನಿಷೇಧ ಹೇರಬೇಕು ಎಂಬುದು ದಶಕಗಳ ಬೇಡಿಕೆಯಾಗಿತ್ತು.  ಎಲ್ಲಿಯ ತನಕ ದೇಶದಲ್ಲಿ ಮೋದಿ ಅವರಂತಹ ಬಲಿಷ್ಟ ನಾಯಕ ಅಧಿಕಾರದಲ್ಲಿ ಇರುತ್ತಾರೋ ಅಲ್ಲಿಯ ತನಕ ಭಯೋತ್ಪಾದನೆ, ಭಯೋತ್ಪಾದಕರು, ಮೂಲಭೂತವಾದಿಗಳು ಸೇರಿದಂತೆ ಸಮಾಜಘಾತುಕ ಶಕ್ತಿಗಳಿಗೆ ದೇಶದಲ್ಲಿ ಉಳಿಗಾಲ ಇರುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ ಎಂದು ನಿರಾಣಿ ಅವರು ಎಚ್ಚರಿಸಿದ್ದಾರೆ. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟಿಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ರಾಜಕಾರಣ ಮಾಡಬಾರದು ಎಂದು ಸಚಿವ ನಿರಾಣಿ ಅವರು ಮನವಿ ಮಾಡಿದ್ದಾರೆ.

Tap to resize

Latest Videos

PFI Ban: ಇಷ್ಟು ಸಾಕಾಗುವುದಿಲ್ಲ, ಸಮಾಜವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೆಕು: ಸಿ.ಟಿ.ರವಿ

Koo App
ಮಾನ್ಯ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು, ಪಿಎಫ್‌ಐ ಹಾಗೂ ಇತರ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳವರೆಗೆ UAPA ಕಾಯಿದೆ ಅಡಿ ನಿಷೇಧಿಸಿರುವುದನ್ನು ಸ್ವಾಗತಿಸುತ್ತೇನೆ. ದೇಶದಲ್ಲಿ ಕೋಮು ಸೌಹಾರ್ದವನ್ನು ಕೆಡಿಸಿ, ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಿಷೇಧ ಕ್ರಮ ವಹಿಸಲಾಗಿದೆ. @AmitShah @bsbommai @blsanthosh @nalinkumarkateel @BJP4Karnataka - Araga Jnanendra (@aragajnanendra) 28 Sep 2022

ಭಗತ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಜಯ: ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನಾಚರಣೆ ದಿನ ಪಿಎಫ್ಐ ನಿಷೇಧ ಮಾಡಿದ್ದು ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಜಯ ಎಂದು ಬಿಜೆಪಿಯ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ವಿದೇಶಿ ವಹಿವಾಟು ದೇಶದ್ರೋಹಿ ಚಟುವಟಿಕೆಗಳಲ್ಲಿ ಪಿಎಫ್‌ಐ ಸಂಘಟನೆಗಳು ತೊಡಗಿದ್ದರು. ಹಸ್ ಕರ್ ಲಞಿಯಾ ಪಾಕಿಸ್ತಾನ ಲಡತೇ ಲಹೇ ಹಿಂದೂಸ್ತಾನ ಎಂದು ಘೋಷಣೆ ಮಾಡಿದ್ದರು. ಇಂತಹ ದೇಶದ್ರೋಹಿಗಳಿಗೆ ಅಮಿತ್ ಷಾ ಸರಿಯಾದ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡ ಪಿಎಫ್ಐ ನಿಷೇಧ ಮಾಡಲು ಮನವಿ ಮಾಡಿ ದಾಖಲೆ ಸಲ್ಲಿಸಿತ್ತು. ಹರ್ಷನ ಕೊಲೆಯನ್ನು ಪಿಎಫ್ಐ ಸಂಘಟನೆಯವರು ಮಾಡಿದ್ದರು. ಪ್ರೇಮ್ ಸಿಂಗ್‌ಗೆ ಚಾಕು ಇರಿತದ ಪ್ರಕರಣದಲ್ಲಿ ಪಿಎಫ್ಐ ಇತ್ತು. ಪುರಲೆಯಲ್ಲಿ ಐಸಿಸ್ ಉಗ್ರರು ಬಾಂಬ್ ಸ್ಫೋಟದ ತಯಾರಿ ನಡೆಸಿದರು. ಮುಸ್ಲಿಂ ಯುವಕರ, ಮುಖಂಡರಿಗೆ ಮನವಿ ಪಾಕಿಸ್ತಾನದ ಪರ ಇನ್ನೂ ಕೆಲವರಿಗೆ ಮನಸ್ಸು ಇದೆ ಅದನ್ನು ಬದಲಾವಣೆ ಮಾಡಿಕೊಳ್ಳಬೇಕು, ಮುಸ್ಲಿಂ ಯುವಕರನ್ನು ರಾಷ್ಟ್ರಭಕ್ತಿಗೆ ಪ್ರೇರೆಪಣೆ ಮಾಡಿ ಎಂದು ಈಶ್ವರಪ್ಪ ಹೇಳಿದ್ದಾರೆ.

ನಾಯಿ ನರಿಗಳೆಲ್ಲ ಓಡಿ ಹೋಗ್ತಾ ಇರುತ್ತವೆ: ಕಾಂಗ್ರೆಸ್ ಪಕ್ಷ ಪಿಎಫ್ಐ ಸಂಘಟನೆಯನ್ನು ಬೆಳೆಸಿದೆ. ದೇಶದ್ರೋಹಿ ಸಂಘಟನೆ ಗಳ ಕಡೆಗೆ ಮುಸ್ಲಿಂ ಸಮುದಾಯದ ಯುವಕರು ಹೋಗದಂತೆ ನೋಡಿಕೊಳ್ಳಿ. ನಲಪಾಡ್ ನಿರುದ್ಯೋಗ ಸಮಸ್ಯೆಯಿಂದ ಬಾಂಬ್ ತಯಾರಿ ಮಾಡಿದ್ದ ಎಂದು ಹೇಳಿದ್ದಾನೆ, ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ. ನಮ್ಮ ಸಿಂಹ ಅಮಿತ್ ಷಾ ಇನ್ಮುಂದೆ ಪಿಎಫ್ಐ ಸಂಘಟನೆ ಯಾವುದೇ ರೂಪದಲ್ಲಿ ಬಂದರೂ ಬಿಡೊದಿಲ್ಲ. ಪಿಎಫ್ಐ ಸಂಘಟನೆ ಮೊದಲೇ ನಿಷೇಧ ಮಾಡಿದ್ದರೇ ಹಿಂದೂ ಕಾರ್ಯಕರ್ತರ ಹತ್ಯೆ ತಡೆಯಬಹುದಿತ್ತು.  ಯಾವುದೇ ಕಳ್ಳ ಕೊನೆಯ ತನಕ ಕಳ್ಳನಾಗಿ ಇರೊಲ್ಲ ಹಾಗಾಗಿ ಪಿಎಫ್ಐ ಸಂಘಟನೆಗೆ 5 ವರ್ಷ ಮಾತ್ರ ನಿಷೇಧ ಹೇರಿದೆ. ಪಿಎಫ್ಐ ಸಂಘಟನೆಯಲ್ಲಿ ಇದ್ದವರು ಬದಲಾಗ ಬಹುದು ಎಂಬ ಸದ್ದುದ್ದೇಶದಿಂದ ಕೇವಲ 5 ವರ್ಷ ಬ್ಯಾನ್ ಮಾಡಲಾಗಿದೆ. ಕಾಡಿನಲ್ಲಿ ಒಂದೇ ಸಿಂಹ ಇರೋದು ಅಮಿತ್ ಷಾ ನಂತಹ ಒಂದೇ ಸಿಂಹ ಇದ್ದರೆ ನಾಯಿ ನರಿಗಳೆಲ್ಲ ಓಡಿ ಹೋಗ್ತಾ ಇರುತ್ತವೆ. ಭಗತ್ ಸಿಂಗ್‌ರಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಜಯ. ರಾಷ್ಟ್ರಭಕ್ತ ಯುವಕರನ್ನು ಮುಟ್ಟಲಿ ನೋಡೋಣ ಇನ್ನೂ ಅನುಭವಿಸುತ್ತಾರೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಸದ್ಯ ಪಿಎಫ್‌ಐ ನಿಷೇಧದ ಕುರಿತಂತೆ ರುದ್ರೇಶ್ ಸಹೋದರ ಉದಯ್ ಕುಮಾರ್ ಪ್ರತಿಕ್ರಿಯಿಸಿದ್ದು, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು.  ನಾನು ಡ್ರೈವರ್ ಕೆಲಸ ಮಾಡುತ್ತಿದ್ದೇನೆ, ನನ್ನ ಅಣ್ಣನನ್ನ ಕಳೆದುಕೊಂಡು ಇಂದಿಗೆ 6 ವರ್ಷವಾಗಿದೆ.  ನಾಳೆಯೂ ಕೇಸ್ ಇದೆ ಕೋರ್ಟ್‌ಗೆ ಹೋಗಬೇಕು. ರುದ್ರೇಶ್ ಹತ್ಯೆ ನಂತರ ಮೂರು ಹತ್ಯೆಗಳಾಗಿದೆ ಯಾರೂ ಈ ರೀತಿ ಮಾಡಬಾರದು. ಪಿಎಫ್‌ಐ ಬ್ಯಾನ್ ವಿಚಾರ ಮುಂದಿನ ದಿನಗಳಲ್ಲಿ ಯಾವ ಕುಟುಂಬಗಳಿಗೂ ಈ ರೀತಿ ನೋವು ತರಿಸಬಾರದು. ಹೀಗಾಗಿ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್ ಮಾಡುವುದು ಉತ್ತಮ ಎಂದು ತಿಳಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರದಿಂದ ಪಿಎಫ್‌ಐ ಬ್ಯಾನ್ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದು, ಕೆಲ ಭಯೋತ್ಪಾದನಾ ಕೃತ್ಯದಲ್ಲಿ ಪಿಎಫ್‌ಐ ಭಾಗಿಯಾಗಿತ್ತು. ಪಿಎಫ್‌ಐ ಬ್ಯಾನ್ ಸ್ವಾಗತರ್ಹ ವಿಚಾರ, ದೇಶದಲ್ಲಿ ಕೆಲ ಆತಂಕದ ಘಟನೆ ನಡೆಯುವ ಮಾಹಿತಿ ಇತ್ತು. ಅದಕ್ಕೆ ಎನ್‌ಐಎ ದಾಳಿ ಮಾಡಿತ್ತು ಎಂದು ತಿಳಿಸಿದ್ದಾರೆ.

ಐದು ವರ್ಷ ಪಿಎಫ್​ಐ ಬ್ಯಾನ್: ನಿಷೇಧ ಕ್ರಮವನ್ನು ಸ್ವಾಗತಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಬ್ಯಾನ್‌ ಯಾಕೆ?: ಇಸ್ಲಾಂ ಸಂಘಟನೆಯ ವಿರುದ್ಧ ದೇಶದ  ಹಲವು ರಾಜ್ಯಗಳಲ್ಲಿ ಎನ್‌ಐಎ ರೇಡ್‌ ನಡೆಸಿತ್ತು. ಅಲ್ಲದೆ, PFI ಯೊಂದಿಗೆ ಸಂಬಂಧ ಹೊಂದಿರುವ 200 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ನಂತರ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ದೆಹಲಿ, ಮಹಾರಾಷ್ಟ್ರ, ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಹಲವರನ್ನು ಬಂಧಿಸಲಾಗಿತ್ತು. ಇದಕ್ಕೂ ಮುನ್ನ, ಸೆಪ್ಟೆಂಬರ್ 22 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೇತೃತ್ವದ ಬಹು-ಏಜೆನ್ಸಿ ತಂಡಗಳು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 15 ರಾಜ್ಯಗಳಲ್ಲಿ PFI ನ 106 ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದವು.

click me!