ಕೊರೋನಾ ಯೋಧರಿಗೆ ಇನ್ನೂ 6 ತಿಂಗಳು ರಿಸ್ಕ್‌ ಭತ್ಯೆ: ಸಚಿವ ಸುಧಾಕರ್‌

By Kannadaprabha NewsFirst Published May 28, 2021, 8:04 AM IST
Highlights

* ಏ.1ರಿಂದ ಅನ್ವಯ: ಆರೋಗ್ಯ ಸಚಿವ ಸುಧಾಕರ್‌ ಘೋಷಣೆ
* ಮುಂದಿನ ಆರು ತಿಂಗಳವರೆಗೆ ನೀಡಲು ಅಗತ್ಯ ಅನುದಾನ ಬಿಡುಗಡೆ 
* ಟ್ವಿಟ್ಟರ್‌ನಲ್ಲಿ ಮಾಹಿತಿ ತಿಳಿಸಿದ ಸಚಿವ ಸುಧಾಕರ್‌ 

ಬೆಂಗಳೂರು(ಮೇ.28):  ಕೊರೊನಾ ಯೋಧರಿಗೆ ನೀಡುತ್ತಿರುವ ಕೊರೋನಾ ರಿಸ್ಕ್‌ ಭತ್ಯೆಯನ್ನು ಪ್ರೋತ್ಸಾಹ ಧನವನ್ನು ಏ.1 ರಿಂದ ಅನ್ವಯವಾಗುವಂತೆ ಆರು ತಿಂಗಳು ವಿಸ್ತರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಹಾಗೂ ಎನ್‌ಎಚ್‌ಎಂ ಅಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು ಹಾಗೂ ಡಿ-ಗ್ರೂಪ್‌ ನೌಕರರಿಗೆ ಈ ಮೊದಲೇ ವಿಶೇಷ ಭತ್ಯೆ ನೀಡಲಾಗುತ್ತಿತ್ತು. ಇದೀಗ ಭತ್ಯೆಯನ್ನು ಮುಂದಿನ ಆರು ತಿಂಗಳು ವಿಸ್ತರಿಸಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

"

ಇನ್ನು ಈ ಬಗ್ಗೆ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ, ಕೊರೋನಾ ಆರೈಕೆ ಕೇಂದ್ರ, ಕೊರೋನಾ ಆಸ್ಪತ್ರೆಗಳಲ್ಲಿ ಪಿಪಿಇ ಕಿಟ್‌ ಧರಿಸಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್‌ ಡಿ ನೌಕರರಿಗೆ ತಲಾ 10 ಸಾವಿರ ರು. ಕೊರೋನಾ ರಿಸ್ಕ್‌ ಪ್ರೋತ್ಸಾಹ ಧನವನ್ನು ಆರು ತಿಂಗಳ ಅವಧಿಗೆ ನೀಡಲು ಸೆಪ್ಟೆಂಬರ್‌ 2020ರಲ್ಲಿ ಆದೇಶಿಸಲಾಗಿತ್ತು.

'ಪಾಸಿಟಿವ್ ಪ್ರಮಾಣ ಕಡಿಮೆ ಮಾಡೋದು ಹೇಗೆ : ತಜ್ಞರ ಸಲಹೆ ಪದಿದ್ದೇವೆ'

ಆರೋಗ್ಯ ಮತ್ತು ಕುಟುಂಬ ಕಲ್ಯಾಣಯು 18 ಜಿಲ್ಲೆಗಳಲ್ಲಿ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಿಸಿಕೊಂಡಿದ್ದ ವೈದ್ಯರು, ತಜ್ಞರಿಗೆ 10 ಸಾವಿರ ರು. ಹಾಗೂ ಶುಶ್ರೂಷಕರಿಗೆ 5 ಸಾವಿರ ರು., ಪ್ರಯೋಗಾಲಯ ತಜ್ಞರಿಗೆ 5 ಸಾವಿರ ರು, ಪಿಪಿಇ ಕಿಟ್‌ ಧರಿಸದೆ ಕೊರೋನಾ ಆಸ್ಪತ್ರೆಗಳ ಹೊರಗಡೆ ಕಾರ್ಯನಿರ್ವಹಿಸುವ ಡಿ ಗ್ರೂಪ್‌ ನೌಕರರಿಗೆ 3 ಸಾವಿರ ಕೊರೋನಾ ರಿಸ್ಕ್‌ ಭತ್ಯೆ ನೀಡಲಾಗುತ್ತಿತ್ತು..

ಇನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ತಜ್ಞರು, ಎಂಬಿಬಿಎಸ್‌ ವೈದ್ಯರು, ಆಯುಷ್‌ ವೈದ್ಯರುಗಳಿಗೆ 10 ಸಾವಿರ ರು., ಪ್ರಯೋಗಾಲಯ ತಂತ್ರಜ್ಞರು, ಶುಶ್ರೂಷಕರಿಗೆ 5 ಸಾವಿರ ರು. ಕೊರೋನಾ ರಿಸ್ಕ್‌ ಭತ್ಯೆಯನ್ನು ನೀಡಲಾಗುತ್ತಿತ್ತು. ಇವರೆಲ್ಲರಿಗೂ ಇದೇ ಭತ್ಯೆಯನ್ನು ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳವರೆಗೆ ನೀಡಲು ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!