
ಮೈಸೂರು(ಅ.08): ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಅರ್ಥಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಅವರೂ ಒಬ್ಬ ಅರ್ಥಶಾಸ್ತ್ರಜ್ಞನೇ ಸರಿ. ಅವರು ಈವರೆಗೆ 14 ಬಜೆಟ್ ಮಂಡಿಸಿದ್ದಾರೆ. ಅಂದು ಬಸವಣ್ಣ ಸಾಮಾಜಿಕ ನ್ಯಾಯ ಪ್ರತಿಪಾದಿಸಿದರೆ, ಇಂದು ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಆಡಳಿತ ನಡೆಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸಿದ್ದರಾಮಯ್ಯ ಅವರ ಸ್ತುತಿ ಮಾಡಿದರು.
ನಗರದ ಕಲಾಮಂದಿರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ಅವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ಶೂದ್ರ ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ಹೇಳಿದರಲ್ಲದೆ, ಸನಾತನ ವಿರುದ್ಧದ ನಿಲುವು ತಾಳಿದರು. ನುಡಿದಂತೆಯೂ ನಡೆದ ಬಸವಣ್ಣ ಜಾತಿ ವಿನಾಶಕ್ಕಾಗಿ ಕಲ್ಯಾಣ ಕ್ರಾಂತಿ ಮಾಡಿದರು. ಹಲವು ವಿಚಾರದಲ್ಲಿ ಸಿದ್ದರಾಮಯ್ಯ ಅವರು ಬಸವಣ್ಣನವರ ತತ್ವ ಪಾಲನೆ ಮಾಡಿಕೊಂಡು ಬಂದವರು. ಬಸವ ಜಯಂತಿ ದಿನದಂದೇ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಬಸವಣ್ಣನ ಹಲವು ವಿಚಾರಗಳನ್ನು ಅವರು ಅನುಸರಿಸಿದ್ದಾರೆ ಎಂದು ಹಾಡಿ ಹೊಗಳಿದರು.
ಜಾತಿಗಣತಿ: ಕಾಂಗ್ರೆಸ್ V/S ಬಿಜೆಪಿ ಫೈಟ್..!
ಅಲ್ಲದೆ, ಬಸವಣ್ಣನವರನ್ನೂ ಅವರ ವಿಚಾರಗಳಿಗೆ ಹಲವರು ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು ‘ಅನ್ನಭಾಗ್ಯ’, ಹಲವು ಜನಪರ ಯೋಜನೆ ರೂಪಿಸಿದಾಗ ಇದಕ್ಕೆ ಹಲವರು ವ್ಯಂಗ್ಯವಾಡಿದರು. ಇಷ್ಟಾದರೂ ನುಡಿದಂತೆ ನಡೆದವರ ಸಾಲಿನಲ್ಲಿ ಮೊದಲು ನಿಲ್ಲುವಂತವರು ಸಿದ್ದರಾಮಯ್ಯ ಎಂದು ಮಹದೇವಪ್ಪ ಮುಖ್ಯಮಂತ್ರಿ ಗುಣಗಾನ ಮಾಡಿದರು.
ಸಿದ್ದುಗೆ ಭಾರತ ರತ್ನ ನೀಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನಡೆದಾಡುವ ‘ಬಸವೇಶ್ವರ’ ಎನಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ಸಮಾಜಮುಖಿ ಸಾಧನೆಗೆ ಅವರಿಗೆ ‘ಭಾರತ ರತ್ನ’ವನ್ನೇ ಕೊಡಬೇಕು ಎಂದು ಉದ್ಯಮಿ, ಮಾಜಿ ಶಾಸಕ ಅಶೋಕ್ ಖೇಣಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ