ಬಹುಕೋಟಿ ವಂಚನೆ ಆರೋಪದ ಮೇಲೆ ಪಿಎ ರಾಜು ಬಂಧನ: ಸಚಿವ ಶ್ರೀರಾಮುಲು ಪ್ರತಿಕ್ರಿಯೆ

By Suvarna NewsFirst Published Jul 2, 2021, 12:52 PM IST
Highlights

* ಸಚಿವ ಶ್ರೀರಾಮುಲು ಮೇಲೆ ಕ್ರಮ ತೆಗೆದುಕೊಳ್ಳಬೇಕು: ಸಿದ್ದರಾಮಯ್ಯ 
* ರಾಮುಲು ಆಪ್ತ ಬಳಗದ ಪಿಎಗಳತ್ತ ಚಿತ್ತ ಹರಿಸಿದ ಸಿಸಿಬಿ
* ಪ್ರಮಾಣದ ಹಣ ವರ್ಗಾವಣೆ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯ

ಬೆಂಗಳೂರು(ಜು.02):  ಮಾಧ್ಯಮಗಳ ಮೂಲಕ ಎಲ್ಲವನ್ನು ಗಮನಿಸಿದ್ದೇನೆ. ಯಾರ್ ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳಬಾರದು. ರಾಜು ನನಗೆ ಗೊತ್ತಿರುವ ಹುಡುಗನಾಗಿದ್ದಾನೆ. ತನಿಖೆ ನಡೆಯುತ್ತಿರುವ ಸಮಯಲ್ಲಿ ನಾನು ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರಾಜು ಮೇಲೆ ಈಗಾಗಲೇ ಎಫ್‌ಐಆರ್‌ ಕೂಡ ದಾಖಲಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯಯೇಂದ್ರ ಮತ್ತು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಜೊತೆಯೂ ಮಾತನಾಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. 

"

ಶ್ರೀರಾಮುಲು ಅರೆಸ್ಟ್ ವಿಚಾರ ಬಗ್ಗೆ ಮಾತನಾಡಿ ಪ್ರತಿಪಕ್ಷ ನಾಯಕ , ರಾಮುಲು ಲಂಚ ತೆಗೆದುಕೊಳ್ಳೋನಿಗೆ ಸಪೋರ್ಟ್ ಮಾಡಿದ್ರೆ, ಶ್ರೀರಾಮುಲುಗೆ ಗೊತ್ತಿದ್ದೇ ಈ ಕೆಲಸ ನಡೆಸಲಾಗಿದೆ ಅಂತ ಅರ್ಥ ಅಲ್ವೇ? ಲಂಚ ತೆಗೆದುಕೊಂಡು ಕೆಲಸ ಮಾಡ್ತಾನೆ ಅಂದ್ರೆ ಹೇಗೆ?, ಲಂಚ ಯಾರೇ ತೆಗೆದುಕೊಳ್ಳಲಿ ಕ್ರಮ ತೆಗೆದುಕೊಳ್ಳಬೇಕಲ್ಲ. ಹೀಗಾಗಿ ಸಚಿವ ಶ್ರೀರಾಮುಲು ಮೇಲೆ ಕ್ರಮ ತೆಗೆದುಕೊಳ್ಳಬೇಕು ಸಿದ್ದರಾಮಯ್ಯ ಅಗ್ರಹಿಸಿದ್ದಾರೆ.

ಭಾರೀ ವಂಚನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪಿಎ ಅರೆಸ್ಟ್!

ರಾಮುಲು ಆಪ್ತ ಬಳಗದತ್ತ ಸಿಸಿಬಿ ಚಿತ್ತ

ಬಹುಕೋಟಿ ಆರೋಪದ ಮೇಲೆ ಸಚಿವ ಶ್ರೀರಾಮುಲು ಪಿಎ ಬಂಧನವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರಾಮುಲು ಆಪ್ತ ಬಳಗದ ಪಿಎಗಳತ್ತ ಚಿತ್ತ ಹರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಶ್ರೀರಾಮುಲು ಸುತ್ತ ಇರುವ ಕೆಲ ಪಿಎಗಳತ್ತ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಖಾಸಗಿ ಪಿಎಗಳನ್ನ ವಿಚಾರಣೆ ನಡೆಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ವಿಚಾರಣೆ ವೇಳೆ ಬಂಧಿತ ರಾಜು ಇನ್ನುಳಿದ ಪಿಎಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಇಂದು ಇನ್ನುಳಿದ ಪಿಎಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಶ್ರೀರಾಮುಲು ಗಮನಕ್ಕೆ ಬಾರದೇ ಪಿಎಗಳ ತಂಡ ಕೆಲಸ ಮಾಡುತ್ತಿದೆ ಎಂಬ ಸುಳಿವಿನ ಮೇಲೆ ಸಿಸಿಬಿ ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ. ಇದುವರೆಗೆ ಮಾಡಿಸಿರುವ ವರ್ಗಾವಣೆ ಮತ್ತು ಗುತ್ತಿಗೆದಾರರಿಗೆ ಮಾಡಿರುವ ಸಹಾಯದ ಬಗ್ಗೆ ಕೆಲ ಅನುಮಾನಗಳು ಎದ್ದಿವೆ. ಭಾರೀ ಪ್ರಮಾಣದ ಹಣ ವರ್ಗಾವಣೆ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ. ಇಂದು ಇಲ್ಲವೇ ನಾಳೆ ಖಾಸಗಿ ಪಿಎಗಳ ವಿಚಾರಣೆ ನಡೆಸುವುದು ಖಚಿತ ಎಂದು ಹೇಳಲಾಗುತ್ತಿದೆ.
 

click me!